ಇಂದಿನಿಂದ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ಪ್ರವೇಶ


Team Udayavani, Jul 5, 2021, 6:37 PM IST

kolara news

ಕೋಲಾರ: ಎರಡೂವರೆ ತಿಂಗಳ ನಂತರದೇವಾಲಯ ಮಸೀದಿ ಹಾಗೂ ಚರ್ಚ್‌ ಧಾರ್ಮಿಕಕೇಂದ್ರಗಳನ್ನು ತೆರೆಯಲು ಮೂರನೇ ಹಂತದಸಡಿಲಿಕೆಯಲ್ಲಿ ಸರಕಾರ ಅವಕಾಶಕಲ್ಪಿಸಿದೆ.

ಜಿಲ್ಲಾದ್ಯಂತ ದೇವಾಲಯ ಮತ್ತು ಇತರೆಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲು ಅರ್ಚಕರುಹಾಗೂ ದೇವಾಲಯ ಆಡಳಿತ ಮಂಡಳಿಯುಸ್ವತ್ಛತಾಕಾರ್ಯಗಳ ಮೂಲಕ ಸಿದ್ಧತೆ ನಡೆಸಿವೆ.ದೇವಾಲಯಗಳ ಮಾದರಿಯಲ್ಲಿಯೇ ಚರ್ಚ್‌ಗಳಲ್ಲಿ ಆರಾಧನೆ ಹಾಗೂ ಸಾಮೂಹಿಕ ನಮಾಜ್‌ಗೂಧಾರ್ಮಿಕ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ನಮಾಜ್‌ನಡೆಯಲಿದ್ದು, ಮುಂದಿನ ಭಾನುವಾರ ಚರ್ಚ್‌ಗಳಲ್ಲಿಆರಾಧನೆ ನಡೆಸಲು ಧಾರ್ಮಿಕ ಮುಖಂಡರು ಸಿದ್ಧತೆನಡೆಸುತ್ತಿದ್ದಾರೆ.ಮೂರನೇ ಹಂತದಲ್ಲಿ ದೇವಾಲಯ ಹಾಗೂಧಾರ್ಮಿಕ ಕೇಂದ್ರಗಳ ತೆರೆಯಲು ಸರಕಾರ ಅವಕಾಶ ಕಲ್ಪಿಸಿದೆಯಾದರೂ, ಷರತ್ತುಗಳನ್ನು ವಿಧಿಸಿರುವುದು ಭಕ್ತ ಮತ್ತು ಅರ್ಚಕ ವಲಯದಲ್ಲಿ ಕೊಂಚ ಅಸಮಾಧಾನವೂ ಮನೆ ಮಾಡುವಂತಾಗಿದೆ.

800 ಮುಜರಾಯಿ ದೇವಾಲಯ!: ಕೋಲಾರಜಿಲ್ಲೆಯಲ್ಲಿ 800 ದೇವಾಲಯ, ಧಾರ್ಮಿಕಕೇಂದ್ರಗಳನ್ನು ಗುರುತಿಸಲಾಗಿದೆ. ಆದರೆ, ಈ ಪೈಕಿಎ ವರ್ಗದ ದೇವಾಲಯಗಳೆಂದು ಕೇವಲನಾಲ್ಕೈದು ಮಾತ್ರವೇ ಗುರುತಿಸಲಾಗಿದೆ.ಕೋಲಾರ ಜಿಲ್ಲೆಯ ಚಿಕ್ಕತಿರುಪತಿ, ಸೀತಿಬೈರವೇಶ್ವರ ಹಾಗೂ ಗುಟ್ಟಹಳ್ಳಿ ಬಂಗಾರು ತಿರುಪತಿಇತರೇ ದೇವಾಲಯಗಳು ಮಾತ್ರವೇ ಎ ದರ್ಜೆಯಸ್ಥಾನಮಾನ ಹೊಂದಿವೆ.

ಬಿ ಮತ್ತು ಸಿ ವರ್ಗದ ದೇಗುಲ: ಕೋಲಾರನಗರದ ಪ್ರಮುಖ ಅಂತರಗಂಗೆ ಕಾಶೀ ವಿಶ್ವೇಶ್ವರ,ನಗರ ದೇವತೆಕೋಲಾರಮ್ಮ ಮತ್ತು ಸೋಮೇಶ್ವರ,ಕೊಂಡರಾಜನಹಳ್ಳಿ ಆಂಜನೇಯದೇವಾಲಯಗಳು ಬಿ ದರ್ಜೆದೇವಾಲಯಗಳಾಗಿವೆ.

ಇನ್ನುಳಿದವು ಗ್ರಾಮಾಂತರಪ್ರದೇಶದಲ್ಲಿ ವಾರಕ್ಕೊಮ್ಮೆ ಪೂಜೆ ಸ್ಪೀಕರಿಸುವಅಪರೂಪಕ್ಕೆ, ಹಬ್ಬ ಹರಿದಿನಗಳು ಮಾತ್ರವೇಭಕ್ತರು ಭೇಟಿ ಕೊಡುವ ಸಿ ದರ್ಜೆಯದೇವಾಲಯಗಳೆಂದು ಗುರುತಿಸಲಾಗಿದೆ.

ದೇವಾಲಯಗಳ ಸ್ವತ್ಛತಾ ಕಾರ್ಯ: ಎರಡೂವರೆತಿಂಗಳ ನಂತರ ಸರಕಾರವು ದೇವಾಲಯಗಳನ್ನುತೆರೆಯಲು ಅವಕಾಶ ಕಲ್ಪಿಸಿರುವುದರಿಂದ ಭಾನುವಾರ ಬಹುತೇಕ ದೇವಾಲಯಗಳಲ್ಲಿ ಸ್ವತ್ಛತಾಕಾರ್ಯ ಕೈಗೊಳ್ಳಲಾಯಿತು.

ಅಂತರಗಂಗೆ ಬೆಟ್ಟದಕಾಶೀ ವಿಶ್ವೇಶ್ವರಯ್ಯ, ಸೋಮೇಶ್ವರ ಹಾಗೂಕೋಲಾರಮ್ಮ ದೇವಾಲಯಗಳನ್ನು ಅರ್ಚಕರಮಾರ್ಗದರ್ಶನದಲ್ಲಿ ಸಿಬ್ಬಂದಿ ವಿವಿಧ ಸ್ವತ್ಛತಾಕಾರ್ಯ ನಡೆಸಿದರು. ಲಾಕ್‌ಡೌನ್‌ ಅವಧಿಯಲ್ಲಿದೇಗುಲಗಳನ್ನು ತೆರೆದು ಅರ್ಚಕರು ಮಾತ್ರವೇನಿತ್ಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತಾದರೂ, ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.

ದೇಗುಲ ಪ್ರವೇಶಕ್ಕೆ ಅಗತ್ಯ ಕ್ರಮ: ಸೋಮವಾರದಿಂದ ಭಕ್ತರು ದೇವಾಲಯಗಳಿಗೆ ಆಗಮಿಸಿದೇವರ ದರ್ಶನ ಪಡೆದುಕೊಳ್ಳಲು ಅವಕಾಶನೀಡಿರುವುದರಿಂದ ದೇವಾಲಯಗಳಲ್ಲಿ ಭಕ್ತರಿಗೆಕೋವಿಡ್‌ ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸರ್‌ನೀಡಲು,ಸಾಮಾಜಿಕಅಂತರಕಾಪಾಡಿಕೊಳ್ಳುವಂತೆಮಾಡಲು ಮತ್ತು ಕಡ್ಡಾಯವಾಗಿ ಮಾಸ್ಕ್ಧರಿಸಿಯೇ ದೇವಾಲಯ ಪ್ರವೇಶಿಸುವಂತೆಮಾಡಲು ಅಗತ್ಯಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಸಮಾಧಾನ: ಸರಕಾರ ಮೂರನೇ ಹಂತದ ಲಾಕ್‌ಡೌನ್‌ ಸಡಿಲಿಕೆಯಲ್ಲಿ ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆಯಾದರೂ, ವಿಶೇಷ ಪೂಜೆ, ತೀರ್ಥ ಮತ್ತು ಪ್ರಸಾದ ವಿನಿಯೋಗಿಸಲು ಅವಕಾಶ ನೀಡದಿರುವುದು ಭಕ್ತರುಮತ್ತು ಅರ್ಚಕ ವಲಯದ ಅಸಮಾಧಾನಕ್ಕೆಕಾರಣವಾಗಿದೆ.

ಎರಡೂವರೆ ತಿಂಗಳ ನಂತರ ದೇವಾಲಯತೆರೆಯಲು ಅವಕಾಶ ಕಲ್ಪಿಸಿದರೂ ಭಕ್ತರುಕೋವಿಡ್‌ ಮಾರ್ಗಸೂಚಿ ಪ್ರಕಾರ ದೇವಾಲಯಕ್ಕೆಬಂದು ದೇವರ ದರ್ಶನ ಮಾಡಿಕೊಂಡು ಹೋಗಲಷ್ಟೇ ಅವಕಾಶವಿದೆ. ಆದರೂ, ಇದರಿಂದ ಭಕ್ತವಲಯಕ್ಕೆ ತೃಪ್ತಿ ಆಗುವುದಿಲ್ಲ. ದೇವಾಲಯತೆರೆಯುವ ಸಂದರ್ಭದಲ್ಲಿ ಮೊದಲ ಅಭಿಷೇಕಮತ್ತು ವಿಶೇಷ ಪೂಜೆ ತಮ್ಮದಾಗಲಿ ಎಂಬಭಾವದಲ್ಲಿ ಭಕ್ತರು ಅರ್ಚಕರಲ್ಲಿ ಬೇಡಿಕೆ ಇಟ್ಟುನಿರಾಸೆ ಅನುಭವಿಸುತ್ತಿರುವುದುಕಂಡು ಬರುತ್ತಿದೆ.

ಸರಕಾರವು ದೇವಾಲಯಗಳನ್ನು ತೆರೆಯಲುಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸಿರುವ ಭಕ್ತರುಮತ್ತು ಅರ್ಚಕರು ಕೋವಿಡ್‌ ನಿಯಮಪಾಲಿಸಿಕೊಂಡೇ ವಿಶೇಷ ಪೂಜೆ, ತೀರ್ಥ, ಪ್ರಸಾದವಿನಿಯೋಗಿಸಲು ಅವಕಾಶ ನೀಡಬೇಕಿತ್ತು ಎಂಬಬೇಡಿಕೆಯನ್ನು ಸರಕಾರ ಮುಂದಿಟ್ಟಿದ್ದಾರೆ. ಸದ್ಯಕ್ಕೆಇವೆಲ್ಲದಕ್ಕೆ ಅವಕಾಶ ಇಲ್ಲವಾದರೂ, ಶೀಘ್ರವೇದೇವಾಲಯಗಳು ಪೂರ್ಣ ಪ್ರಮಾಣದಲ್ಲಿಧಾರ್ಮಿಕ ಚಟುವಟಿಕೆಗಳಿಗೆ ತೆರೆಯಲ್ಪಡಲಿಎಂದು ಭಕ್ತರು ಆಶಿಸುತ್ತಿದ್ದಾರೆ.

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.