ಕೋಲಾರ: ಪಾಸಿಟಿವಿಟಿ ದರ ಶೇ.40!
Team Udayavani, May 29, 2021, 7:06 PM IST
ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಪ್ರಮಾಣ ಕೊಂಚ ಇಳಿಮುಖವಾಗುತ್ತಿರುವಂತೆಕಂಡು ಬಂದರೂ ಪಾಸಿಟಿವಿಟಿ ದರ ಶೇ.40ಕ್ಕೆ ಹೆಚ್ಚುತ್ತಲೇ ಇದೆ. ಇದು ರಾಜ್ಯ ಸರಾಸರಿಗಿಂತಲೂ ಶೇ.23ಹೆಚ್ಚಾಗಿದೆ. ತಪಾಸಣೆ ಕಡಿಮೆಯಾಗಿರುವುದರಿಂದಸೋಂಕಿತರ ಸಂಖ್ಯೆ ಇಳಿಮುಖವಾದಂತೆ ಭಾಸವಾಗುತ್ತಿದೆ ಯಾದರೂ, ಪ್ರತಿ ನೂರು ಮಂದಿ ಪರೀಕ್ಷೆ ಗೊಳಗಾದರೆ 40 ಮಂದಿ ಸೋಂಕಿತರು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.ಇಷ್ಟಾದರೂ, ಸಂಸದ ಎಸ್.ಮುನಿಸ್ವಾಮಿಕೋಲಾರ ಜಿಲ್ಲೆ ಕೊರೊನಾ ನಿಯಂತ್ರಣದಲ್ಲಿ ಕೆಂಪುವಲಯದಿಂದ ಆರೆಂಜ್ ವಲಯಕ್ಕೆ ಬಂದಿದೆಯೆಂದುಹೇಳಿಕೆ ನೀಡಿರುವುದು ಯಾವ ಲೆಕ್ಕಾಚಾರದಲ್ಲಿಎಂದು ಅನುಮಾನ ಮೂಡುವಂತಾಗಿದೆ.
900ಕ್ಕೂ ಹೆಚ್ಚು ಬೆಡ್ಗಳು ಖಾಲಿ: ತಾಲೂಕಿಗೆರೆಡುಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸುತ್ತಿರುವುದ ರಿಂದ ಸದ್ಯಕ್ಕೆ ಜಿಲ್ಲಾದ್ಯಂತ ಸಿಸಿಸಿ ಕೇಂದ್ರಗಳುಸೇರಿದಂತೆ 900ಕ್ಕೂ ಹೆಚ್ಚು ಬೆಡ್ಗಳು ಖಾಲಿ ಇದ್ದು,ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಕೋವಿಡ್ ಕೇರ್‌ಕೇಂದ್ರಗಳ ಆರಂಭಿಸುವ ಅಗತ್ಯ ಕಂಡು ಬರುತ್ತಿಲ್ಲಎನ್ನುತ್ತಿವೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ.ಏಪ್ರಿಲ್ ಮೊದಲ ವಾರದಿಂದಲೇ ಏರುಮುಖಕಂಡಿದ್ದ ಕೊರೊನಾ ಸೋಂಕಿತರ ಪ್ರಮಾಣ ನಿರೀಕ್ಷೆಗೂಮೀರಿ ಹೆಚ್ಚಳವಾಗಿದ್ದು, ಈವರೆಗೂ ಎರಡು ದಿನಒಂದು ಸಾವಿರ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಆತಂಕವನ್ನು ಮೂಡಿಸಿತ್ತು.
ಸಾವಿನ ಪ್ರಮಾಣವು ಶೇ.1ಕ್ಕಿಂತ ಹೆಚ್ಚು: ಆದರೆ,ಕಳೆದ ವಾರದಿಂದ ಸರಾಸರಿ 500 ರಿಂದ 600ಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿದ್ದು,ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಮುಖ ಕಾಣುವವಿಶ್ವಾಸವನ್ನು ಆರೋಗ್ಯ ಇಲಾಖೆಯು ವ್ಯಕ್ತಪಡಿಸಿದೆ.ಆದರೆ, ರಾಜ್ಯದ ಪಾಸಿಟಿವಿಟಿ ದರವು ಶೇ.17.59 ಕ್ಕೆಇಳಿಮುಖವಾಗಿದ್ದರೆ ಕೋಲಾರ ಜಿಲ್ಲೆಯ ಪಾಸಿಟಿವಿಟಿ ದರವು 39.54 ಇರುವುದು ಆತಂಕಕ್ಕೆ ಕಾರಣವಾಗಿದೆ. ಸಾವಿನ ಪ್ರಮಾಣ ಶೇ.1ಕ್ಕಿಂತ ಹೆಚ್ಚು ಇದೆ.
ಆಸ್ಪತ್ರೆಯಲ್ಲಿ 214 ಬೆಡ್ಗಳು ಖಾಲಿ: ಕೋಲಾರಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ ಮತ್ತುಕೆಜಿಎಫ್ ಉಪ ಜಿಲ್ಲಾಸ್ಪತ್ರೆ ಸೇರಿ ಪ್ರತಿ ತಾಲೂಕುಕೇಂದ್ರದಲ್ಲೂ ಕೋವಿಡ್ ಚಿಕಿತ್ಸೆ ಮಾಡಲಾಗುತ್ತಿದೆ.ಜೊತೆಗೆ ಜಿಲ್ಲೆಯ 15 ಖಾಸಗಿ ಆಸ್ಪತ್ರೆಗಳಲ್ಲೂಕೋವಿಡ್ ಚಿಕಿತ್ಸೆ ಸಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿಒಟ್ಟು 1008 ಬೆಡ್‌ಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 259 ಸಾಮಾನ್ಯ,666 ಆಮ್ಲಜನಕ ಸಹಿತ, 20 ಐಸಿಯು ಹಾಗೂ 63ವೆಂಟಿಲೇಟರ್ ಬೆಡ್‌ಗಳಿವೆ.
ಈ ಪೈಕಿ 104 ಸಾಮಾನ್ಯ,603 ಆಮ್ಲಜನಕ, 20 ಐಸಿಯು, 60 ಐಸಿಯು, 60ವೆಂಟಿ ಲೇಟರ್ ಬೆಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೇ 28 ಕ್ಕೆ ಖಾಲಿ 153 ಸಾಮಾನ್ಯಬೆಡ್‌ಗಳು, 58 ಆಮ್ಲಜನಕ ಸಹಿತ ಬೆಡ್‌ಗಳು ಹಾಗೂ3 ವೆಂಟಿಲೇಟರ್ ಬೆಡ್‌ಗಳು ಖಾಲಿ ಇವೆ. ಇದೇಅವಧಿಯಲ್ಲಿ 600ಕ್ಕೂ ಹೆಚ್ಚು ಕೋವಿಡ್ ಕೇರ್ ಕೇಂದ್ರಗಳಲ್ಲಿ ಬೆಡ್‌ಗಳು ಖಾಲಿ ಇವೆ.
ಈಗಲೂ 5 ಸಾವಿರಮಂದಿ ಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆಪಡೆಯುತ್ತಿರುವುದರಿಂದ ಕೋವಿಡ್ ಕೇರ್‌ಕೇಂದ್ರಗಳ ಹಾಸಿಗೆಗಳು ದೊಡ್ಡ ಪ್ರಮಾಣದಲ್ಲಿಯೇಖಾಲಿ ಇವೆ. ಇವರನ್ನು ಸರ್ಕಾರದ ಸೂಚನೆ ಮೇರೆಗೆಕೋವಿಡ್ ಕೇರ್ ಕೇಂದ್ರಗಳಿಗೆ ಸೇರಿಸಲು ಆರೋಗ್ಯಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.ಇಷ್ಟೊಂದು ಬೆಡ್‌ಗಳು ಖಾಲಿ ಇರುವುದರಿಂದಹೊಸದಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಆರಂಭಿಸುವ ಉದ್ದೇಶ ಜಿಲ್ಲಾಆರೋಗ್ಯ ಇಲಾಖೆಗೆ ಸದ್ಯಕ್ಕೆ ಇಲ್ಲವಾಗಿದೆ. ಒಮ್ಮೆಗೆಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದಲ್ಲಿಕೋವಿಡ್ ಕೇರ್ ಕೇಂದ್ರಗಳನ್ನು ಹೆಚ್ಚಿಸಿ ಅವಕ್ಕೆವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಕುರಿತು ಚಿಂತಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾಹಿತಿ ನೀಡಿದ್ದಾರೆ.
ಮೂಲ ಸೌಕರ್ಯ:ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ಕೇರ್ ಕೇಂದ್ರಗಳನ್ನು ಸಾಮಾನ್ಯವಾಗಿ ಪ್ರತಿ ತಾಲೂಕುಗಳಲ್ಲಿರುವ ಮೊರಾರ್ಜಿ ಹಾಗೂ ಕಿತ್ತೂರು ರಾಣಿಚನ್ನಮ್ಮ ಹಾಸ್ಟೆಲ್‌ಗಳಲ್ಲಿ ನಿರ್ವಹಿಸಲಾಗುತ್ತಿದೆ. ಈಕೇಂದ್ರಗಳಲ್ಲಿ ಹಾಲಿ ಹಿಂದುಳಿದ ವರ್ಗಗಳ ಇಲಾಖೆಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಾರ್ಡನ್, ಅಡುಗೆಯವರನ್ನೇಬಳಸಿಕೊಂಡು ಊಟದ ವ್ಯವಸ್ಥೆ ಮಾಡಲಾಗುತ್ತಿದೆ.ಇದೇ ಕೇಂದ್ರಕ್ಕೆ ಲಭ್ಯ ಇರುವ ಕುಡಿಯುವ ನೀರುಮತ್ತು ಶೌಚಾಲಯಗಳನ್ನೇ ಬಳಸಿಕೊಳ್ಳಲಾಗುತ್ತಿದೆ.
ಆ್ಯಂಬುಲೆನ್ಸ್ ಸೌಲಭ್ಯ: ಕೋಲಾರ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆಏರ್ಪ ಟ್ಟಲ್ಲಿ ಅಂತ ಸೋಂಕಿತರನ್ನು ಹತ್ತಿರದ ಆಮ್ಲಜನಕ ಸಹಿತ ಬೆಡ್‌ಗಳ ಆಸ್ಪತ್ರೆಗೆ ವರ್ಗಾಯಿ ಸಲುಬಳಸಿಕೊಳ್ಳಲಾಗುತ್ತಿದೆ. ತಾಲೂಕಿಗೆ ಎರಡು ಆ್ಯಂಬುಲೆನ್ಸ್ ಇದಕ್ಕಾಗಿಯೇ ಮೀಸಲಿಡಲಾ ಗಿದ್ದು, ಜೊತೆಗೆ108 ಆಂಬುಲೆನ್ಸ್ ಸೇವೆ ಇದೆ.
ಆಮ್ಲಜನಕ ಸೇವೆ: ಜಿಲ್ಲೆಯ ಆಸ್ಪತ್ರೆ ಗಳಲ್ಲಿರುವಆಮ್ಲಜನಕ ಸಹಿತ ಬೆಡ್‌ಗಳಿಗೆ ಆಮ್ಲ ಜನಕ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಔಷಧಗಳ ಲಭ್ಯತೆಇರುವಂತೆ ನೋಡಿಕೊಳ್ಳಲಾಗುತ್ತಿದೆ. ರೆಮ್‌ಡಿಸಿವಿಯರ್ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದೆ. ಕಾಳಸಂತೆಮಾರಾಟ ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.ಮಂಗಳವಾರ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೇ ಆಮ್ಲಜನಕ ಸೀಟ್ ಅಳವಡಿಸಿ ಸಚಿವ ಅರವಿಂದಲಿಂಬಾ ವಳಿ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದ್ದಾರೆ.
ಫಂಗಸ್ ಚಿಕಿತ್ಸೆ ಸದ್ಯಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲವಾಗಿದೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯನ್ನೇಅವಲಂಬಿಸಬೇಕಾಗಿದೆ.
ಅಗತ್ಯ ಬಿದ್ದರೆ ನೇಮಕ: ಸದ್ಯದ ಪರಿಸ್ಥಿತಿಯಲ್ಲಿಕೊರೊನಾ ಸೋಂಕಿತರ ಚಿಕಿತ್ಸೆಗೆ ಭಾರೀ ಸವಾಲುಗಳೇನು ಎದುರಾಗಿಲ್ಲವಾದ್ದ ರಿಂದ ಸೋಂಕಿತರ ಸಂಖ್ಯೆಹೆಚ್ಚಾದಲ್ಲಿ ಮಾತ್ರವೇ ಹೊಸ ಕೋವಿಡ್ ಕೇರ್ ಕೇಂದ್ರಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಆರಂಭಿಸಿ,ಅಲ್ಲಿನ ಅಗತ್ಯಕ್ಕೆ ತಕ್ಕಂತೆ ವೈದ್ಯರು, ಸಿಬ್ಬಂದಿಯನ್ನುನೇಮಕ ಮಾಡಿಕೊಳ್ಳಲಾಗು ವುದು ಎಂದುಆರೋಗ್ಯಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.