ರೈತರಿಂದ ತರಕಾರಿ ಖರೀದಿಸಿ 5 ಸಾವಿರ ಮಂದಿಗೆ ವಿತರಣೆ
Team Udayavani, Jun 11, 2021, 7:19 PM IST
ಕೋಲಾರ: ಕೋವಿಡ್ ಸಂಕಷ್ಟದಲ್ಲಿ ಜನ ಜೀವರಕ್ಷಣೆಗೆ ಸೆಣೆಸುತ್ತಿದ್ದರೆ, ರೈತರು ಕಷ್ಟಪಟ್ಟು ಬೆಳೆದಬೆಳೆಗಳಿಗೆ ಬೆಲೆ ಸಿಗದೇ ತತ್ತರಿಸಿದ್ದಾರೆ.
ಇಂತಹಸ್ಥಿತಿಯಲ್ಲಿ ಕುರ್ಚಿಗಾಗಿ ಜಗಳ, ಪರ-ವಿರೋಧದ ಹೇಳಿಕೆ ನೀಡುತ್ತಿದ್ದು, ಇಂತಹ ಕೆಟ್ಟ ಪರಿಸ್ಥಿತಿ ಹಾಗೂಸರ್ಕಾರವನ್ನು ತಮ್ಮ 50 ವರ್ಷದ ರಾಜಕೀಯಜೀವನದಲ್ಲಿ ಕಂಡಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಷಾದಿಸಿದರು.ಮನ್ವಂತರ ಜನಸೇವಾ ಟ್ರಸ್ಟ್, ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ರೈತರಿಂದಖರೀದಿಸಿದ 25 ಟನ್ ತರಕಾರಿಯನ್ನು ರಹಮತ್‌ನಗರ ವ್ಯಾಪ್ತಿಯ 5 ಸಾವಿರ ಕುಟುಂಬಗಳಿಗೆ ವಿತರಿಸಿ ಮಾತನಾಡಿ, ಜನಪರ ಯೋಜನೆಗಳ ಮೂಲಕಜನತೆಗೆ ಶಕ್ತಿ ತುಂಬಬೇಕಾದ ಸರ್ಕಾರ, ರಾಜಕೀಯಟೀಕೆಗಳಿಗೆ ಸೀಮಿತವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯಬೇಕಾಗಿದೆ. ಇನ್ನಾದರೂ ಎಚ್ಚೆತ್ತುರೈತರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.ಪರಸ್ಪರ ಟೀಕೆಗಳನ್ನು ಬಿಟ್ಟು ಶಾಸಕರು, ಮಂತ್ರಿಗಳು ಕೋವಿಡ್‌ನಿಂದ ತತ್ತರಿಸಿರುವ ಕುಟುಂಬಗಳಿಗೆಸಾಂತ್ವನ ಹೇಳಲು ಹೊರಬಂದು ಮಾನವೀಯತೆಮೆರೆಯಬೇಕು ಎಂದು ಸಲಹೆ ನೀಡಿದರು.ಗೋವಿಂದಗೌಡರಿಂದ ಪವಿತ್ರವಾದ ಕೆಲಸ:ರೈತರು ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟದಲ್ಲಿದ್ದರೈತರಿಂದ ತರಕಾರಿ ಖರೀದಿಸಿ ಕೋಲಾರ ನಗರದ30 ಸಾವಿರ ಕುಟುಂಬಗಳಿಗೆ ವಿತರಿಸುವ ಪವಿತ್ರವಾದ ಕೆಲಸವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಅವರ ತಂಡ ಮಾಡಿದೆ. ಓರ್ವ ರೈತನ ಮಗನಾಗಿ ಅವರು ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸುಲಭದ ಕೆಲಸ ಅಲ್ಲ: ರೈತರನ್ನು ಉಳಿಸುವ ಮತ್ತುಬಡವರಿಗೆ ನೆರವಾಗುವ ಇಂತಹ ಶ್ರೇಷ್ಠ ಕಾರ್ಯಕ್ಕೆಮತ್ತಷ್ಟು ಮಂದಿ ಕೈಜೋಡಿಸಬೇಕು, ಸರ್ಕಾರ ಮಾಡದ ಕೆಲಸವನ್ನು ಗೋವಿಂದಗೌಡರು ಮಾಡಿ ದ್ದಾರೆ.30 ಸಾವಿರ ಕುಟುಂಬಗಳಿಗೆ ತರಕಾರಿ ನೀಡು ವುದುಎಂದರೆ ಸುಲಭದ ಕೆಲಸವಲ್ಲ ಎಂದು ವಿವರಿಸಿದರು.
ರೈತನ ಸಂಕಷ್ಟಕ್ಕೆ ನೆರವಾಗೋಣ: ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ,ಒಂದೇ ದಿನ 25 ಟನ್‌ಗೂ ಹೆಚ್ಚು ತರಕಾರಿ ವಿತರಿಸಲಾಗುತ್ತಿದೆ. ರೈತರ ತೋಟಗಳಿಂದಲೇ ನೇರವಾಗಿಖರೀದಿಸಿ ಅವರಿಗೂ ನೆರವಾಗುತ್ತಿದ್ದೇವೆ ಎಂದುತಿಳಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳಸೋಮಣ್ಣ, ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಅಣ್ಣಿಹಳ್ಳಿಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್, ಮೇಸ್ತ್ರಿನಾರಾಯಣಸ್ವಾಮಿ, ಮನ್ವಂತರ ಟ್ರಸ್ಟ್‌ನ ಬಾಲನ್,ಸತ್ಯನಾರಾಯಣರಾವ್, ಮುಖಂಡ ರಾದಆಟೋ ನಾರಾಯಣಸ್ವಾಮಿ, ಅನ್ವರ್ ಪಾಷ,ನಿರಂಜನ್, ರಹಮತ್ ನಗರದ ಯಾರಬ್,ಗೋರ್, ತಬ್ಬು, ಸಾಧಿಕ್, ಸಲಾಂ, ಇಲಿಯಾಸ್,ನದೀಂ, ಅಪ್ಸರ್, ಸಜಾದ್, ಅಸೀಫ್ ಮತ್ತಿತರರುಸಾಮಾಜಿಕ ಅಂತರ ನಿರ್ವಹಿಸಿ ತರಕಾರಿ ವಿತರಣೆಯಲ್ಲಿ ಕಾರ್ಯನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.