![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 14, 2021, 8:52 PM IST
ಕೋಲಾರ: ತಾಲೂಕಿನ ನರಸಾಪುರಗ್ರಾಮದಲ್ಲಿ ಕುಂಬಾರರು ಮಡಿಕೆಮಾಡುವ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ, ಸಲಕರಣೆಗಳನ್ನು ಧ್ವಂಸಮಾಡಿರುವುದರ ಜತೆಗೆ ಶೆಡ್‌ಗೆಪೆಟ್ರೋಲ್ ಸುರಿದು ಬೆಂಕಿ ಇಟ್ಟು 15 ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವೃದ್ಧೆ ಸುಶೀಲಮ್ಮ ಆರೋಪಿಸಿದ್ದಾರೆ.
ಗ್ರಾಮದ ಮುನಿರಾಮಯ್ಯ ಇವರ ಕುಟುಂಬದವರು 35 ರಿಂದ 40ವರ್ಷಗಳಿಂದ ಕುಂಬಾರ ವೃತ್ತಿಯನ್ನುಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ಕೆಲವು ದಿನಗಳ ಹಿಂದೆನರಸಾಪುರದಲ್ಲಿರುವ ಮುನಿರಾಮಯ್ಯಇವರ ತಮ್ಮ ಗೋದಾಮಿನಲ್ಲಿ ಸಿದ್ಧಪಡಿಸಿಇಟ್ಟಿದ್ದ ಒಲೆ, ಮಡಕೆ, ಮಣ್ಣಿನದೀಪಗಳು ಹಾಗೂ ಇವುಗಳನ್ನುತಯಾರು ಮಾಡುವ ಯಂತ್ರೋಪಕರಣಗಳನ್ನು ಯಾರೋಅಪರಿಚಿತರು ಗೋದಾಮಿನ ಕಿಟಕಿಮೂಲಕ ಒಳಗೆ ನುಗ್ಗಿ ಅನೇಕಸಲಕರಣೆಗಳನ್ನು ನಾಶ ಮಾಡಿದ್ದಾರೆ.ಅಲ್ಲದೆ, ಅನೇಕ ಬೆಲೆ ಬಾಳುವ ಉಪಕರಣಗಳನ್ನು ಕದ್ದುಪರಾರಿಯಾಗಿದ್ದಾರೆ.
ಅಷ್ಟೇ ಅಲ್ಲದೆ,ಶೆಡ್ ಅನ್ನು ಪೆಟ್ರೋಲ್ ಸುರಿದು ಬೆಂಕಿಇಟ್ಟು ಧ್ವಂಸ ಮಾಡಿದ್ದಾರೆ.ಈ ಘಟನೆಯ ಬಗ್ಗೆ ಮಾತನಾಡಿದಸುಶೀಲಮ್ಮ, ನಾವು ಹಗಲು ಇರುಳುಕಷ್ಟ ಪಟ್ಟು ಮಡಕೆ, ದೀಪ, ಒಲೆಮುಂತಾದ ವಸ್ತುಗಳನ್ನು ತಯಾರುಮಾಡುತ್ತಿದ್ದೆವು. ಆದರೆ, ಕೆಲವು ದಿನಗಳಹಿಂದೆ ಕಿಡಿಗೇಡಿಗಳು ನಮ್ಮಗೋದಾಮಿಗೆ ಹೋಗಿ ನುಗ್ಗಿ ಕಳ್ಳತನಮಾಡಿದ್ದಾರೆ. ಈ ಬಗ್ಗೆ ವೇಮಗಲ್‌ಪೊಲೀಸ್ ಠಾಣೆಯಲ್ಲಿ ದೂರನ್ನುದಾಖಲಿಸಲಾಗಿದೆ.
ಈ ದೂರಿನ ಅನ್ವಯಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸಿದ್ದಾರೆ. ಆದರೆ, ನಮಗೆನ್ಯಾಯ ಸಿಕ್ಕಿಲ್ಲ ಎಂದರು.ಈ ಘಟನೆ ನಡೆದು 15 ದಿನಗಳಾದ್ರೂಪೊಲೀಸ್ ಅಧಿಕಾರಿಗಳು ತನಿಖೆನಡೆಸುತ್ತಿಲ್ಲ. ವಿಳಂಬ ಮಾಡುತ್ತಿದ್ದಾರೆಎಂದು ಮುನಿರಾಮಯ್ಯ ಹಾಗೂಪಾರ್ವತಮ್ಮ ಆರೋಪಿಸಿ ನ್ಯಾಯಕೊಡಿಸಲು ಮನವಿ ಮಾಡಿ, ಕುಂಬಾರವೃತ್ತಿಯಿಂದಲೇ ಜೀವನ ನಡೆಸುತ್ತಿರುವನಮಗೆ ಸಹಾಯ ಮಾಡುವಂತೆ ಮನವಿಮಾಡಿದ್ದಾರೆ.ಈ ವೇಳೆಯಲ್ಲಿ ಮುನಿರಾಮಯ್ಯ,ಸುಶೀಲಮ್ಮ, ಗೋವಿಂದಪ್ಪ,ಪಾರ್ವತಮ್ಮ, ಚಂದ್ರಪ್ಪ, ರಾಘವೇಂದ್ರ,ಪ್ರಭು, ಗೋಪಾಲಕೃಷ್ಣ ಇನ್ನಿತರರುಇದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.