ಜಾತಿ ಮೂಲಕ ಜನರ ವಿಭಜನೆ ಸರಿಯಲ್ಲ
ಜಿಲ್ಲಾಡಳಿತದಿಂದ ನಡೆದ ದಲಿತ ವಚನಕಾರರ ಜಯಂತ್ಯುತ್ಸವದಲ್ಲಿ ಶಾಸಕ ಶ್ರೀನಿವಾಸಗೌಡ ಅಭಿಮತ
Team Udayavani, Feb 28, 2020, 4:45 PM IST
ಕೋಲಾರ: ಭಾರತ ದೇಶದಲ್ಲಿ ಜಾತಿ ಭೇದದ ಮೂಲಕ ಜನರನ್ನು ವಿಭಜನೆ ಮಾಡಿದವರಿಗೆ ಶಾಪ ಹಾಕಲೇ ಬೇಕೆಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ದಲಿತ ವಚನಕಾರರ ಜಯಂತ್ಸುತ್ಸವ ಉದ್ಘಾಟಿಸಿ ಮಾತನಾಡಿದರು.
ಸಮಾನತೆಯ ಕನಸು ನನಸಾಗಿಲ್ಲ: ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಇಂದಿಗೂ ಅಸಮಾನತೆ, ಅಸ್ಪೃಶ್ಯತೆ ಆಚರಣೆ ಹೋಗಿಲ್ಲವೆಂಬುದನ್ನು ನೆನಪಿಸಿಕೊಂಡರೆ ನಾವೆಂತ ಜನ ಎನಿಸುತ್ತದೆ. ಅಂಬೇಡ್ಕರ್ ಕಂಡ ಸಮಾನತೆಯ ಕನಸು ಇಂದಿಗೂ ನನಸಾಗಿಲ್ಲವೆಂದು ವಿಷಾದಿಸಿದರು.
ದೇಶದ ಪ್ರಗತಿಗೆ ಅಡ್ಡಿ: ತಾವು ವಿಶ್ವದ ಬಹುತೇಕ ದೇಶಗಳನ್ನು ಸುತ್ತಿದ್ದು, ಭಾರತದಲ್ಲಿರುವಷ್ಟು ಜಾತಿ ಪದ್ಧತಿ ಬೇರ್ಯಾವ ದೇಶದಲ್ಲಿಯೂ ಇಲ್ಲ, ಜಾತಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಪದ್ಧತಿ ದೇಶದ ಪ್ರಗತಿಗೆ ಅಡ್ಡಿಯಾಗಿದೆ, ಮನುಷ್ಯರಾಗಿ ಹುಟ್ಟಿ ಜಾತಿ ಧರ್ಮ ಮೇಲು ಕೀಳು ಆಚರಿಸುವುದು ನೋವು ತರಿಸುತ್ತದೆ. ಅಂಬೇಡ್ಕರ್ ಹಾಗೂ ದಲಿತ ವಚನಕಾರರು ಸಮಾನತೆಯ ಸಮಾಜಕ್ಕಾಗಿಯೇ ಶ್ರಮಿಸಿದ್ದರು, ಅವರ ಆದರ್ಶಗಳಡಿ ದೇಶದ ನಾಗರಿಕರು ಸಮಾನತೆಯ ಆಶಯಗಳನ್ನು ಪಾಲಿಸುವಂತಾ ದರೆ ದೇಶಕ್ಕೆ ಒಳಿತು ಎಂದು ತಿಳಿಸಿದರು.
ವಚನಕಾರರ ಆದರ್ಶ ಅನುಕರಣೆ ಮಾಡಿ: ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಜಾತಿ ಮತ ಭೇದವೆಣಿಸದೆ ನಾವೆಲರೂ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಲು ವಚನಕಾರರ ಆದರ್ಶ ಅನುಕರಣೆ ಮಾಡಬೇಕು ಎಂದು ಹೇಳಿದರು.
ಸಮ ಸಮಾಜಕ್ಕಾಗಿ ಶ್ರಮಿಸುತ್ತಿರುವ ಪತ್ರಕರ್ತರು,ಕಲಾವಿದರು ಹಾಗೂ ಸಮಾಜದ ಸಾಧಕರಿಗೆ ನಿವೇಶನಗಳನ್ನು ಹಂಚುವ ಸಲುವಾಗಿಯೇ 50 ಎಕರೆ ಜಮೀನು ಮೀಸಲಿಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ತಾವು ಮಾತನಾಡಿರುವುದಾಗಿ ಹೇಳಿದರು.
ಜಿಪಂ ಸದಸ್ಯ ಅರುಣ್‌ಪ್ರಸಾದ್ ಮಾತನಾಡಿ, ದಲಿತ ವಚನಕಾರರು ಹಾಗೂ ಅಂಬೇಡ್ಕರ್‌ರ ಆಶಯ ಗಳಂತೆ ಪ್ರತಿಯೊಬ್ಬರೂ ಸಮ ಸಮಾಜಕ್ಕಾಗಿ ಶ್ರಮಿಸಬೇಕು ಎಂದರು. ಪ್ರೊ.ರಂಗಾರೆಡ್ಡಿ ಕೋಡಿರಾಮಪುರ ಅವರು ದಲಿತ ವಚನಕಾರರ ಕುರಿತು ಉಪನ್ಯಾಸ ನೀಡಿದರು.
ತಾಪಂ ಅಧ್ಯಕ್ಷ ಸೂಲೂರು ಅಂಜಿನಪ್ಪ, ಅಪರ ಡೀಸಿ ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ದಲಿತ ಮುಖಂಡರಾದ ಡಾ.ಚಂದ್ರಶೇಖರ್, ಪಿವಿಸಿ ಕೃಷ್ಣಪ್ಪ, ಡಿಎಸ್‌ಎಸ್‌ಕೆ ಮಂಜುಳಾ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಎನ್.ಆರ್.ಜ್ಞಾನಮೂರ್ತಿ, ದಲಿತ ನಾರಾಯಣಸ್ವಾಮಿ, ಚೇತನ್‌ಬಾಬು, ಮಾಜೇìನಹಳ್ಳಿ ಮಹೇಶ್, ಖಾದ್ರಿಪುರ ಬಾಬು ಇದ್ದರು.
ಈನೆಲ ಈಜನ ವೆಂಕಟಾಚಲಪತಿ ತಂಡದಿಂದ ಗಾಯನ ನೆರವೇರಿತು. ಜನ್ನಘಟ್ಟ ಕೃಷ್ಣಮೂರ್ತಿ, ಮತ್ತಿಕುಂಟೆ ಕೃಷ್ಣ ಇತರರಿಂದ ನಾಡಗೀತೆ ಗಾಯನ ನಡೆಯಿತು.
ಪುಷ್ಪಾರ್ಚನೆ: ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳು ವೇದಿಕೆಯ ಮೇಲಿದ್ದ ದಲಿತ ವಚನ ಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಮಂಜಯ್ಯ, ಉರಿಲಿಂಗಪೆದ್ದಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.