ಚಿನ್ನದ ಗಣಿ ಮುಚ್ಚಿ ಇಂದಿಗೆ 21 ವರ್ಷ
ಕೇಂದ್ರ ಸರ್ಕಾರದ ನಿರ್ಲಕ್ಷ್ಯ | ಜನಪ್ರತಿನಿಧಿಗಳು ಮೌನ | ಈಡೇರದ ಕಾರ್ಮಿಕರ ಬೇಡಿಕೆ | ಪುನರ್ ಆರಂಭ ನಿರೀಕ್ಷೆ
Team Udayavani, Mar 1, 2021, 2:10 PM IST
ಕೆಜಿಎಫ್: ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದ್ದ, ದೇಶದಲ್ಲಿ ಗಮನ ಸೆಳೆದಿದ್ದ ಕೆಜಿಎಫ್ ಚಿನ್ನದ ಗಣಿ ಮುಚ್ಚಿ 20 ವರ್ಷ ಕಳೆದರೂ, ಗಣಿ ಕಾರ್ಮಿಕರ ಬಹು ವರ್ಷದ ಬೇಡಿಕೆ ಇನ್ನೂ ಈಡೇರಿಲ್ಲ.
ಯಾವಾಗ ಬರುತ್ತೆ?: ಕಾರ್ಮಿಕರಿಗೆ ಬರಬೇಕಾದ 52 ಕೋಟಿ ರೂ.ಬಾಕಿ ಹಣ ಇನ್ನೂ ಯಾರು ನೀಡುತ್ತಾರೆಎಂಬ ಗೊಂದಲ ಇದೆ. ಗ್ರ್ಯಾಚ್ಯುಟಿ ಮೇಲಿನ ಬಡ್ಡಿಹಣವಾದ 11 ಕೋಟಿ ರೂ. ಕಾರ್ಮಿಕರ ಖಾತೆ ಗಳಿಗೆ ಇನ್ನೇನು ಬರುತ್ತದೆ ಎಂದುಹೇಳ ಲಾಗುತ್ತಿದ್ದರೂ ಯಾವಾಗ ಬರುತ್ತದೆ ಎಂಬುದನ್ನು ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
1600 ಕೋಟಿ ರೂ. ಸಾಲ: ರಾಜ್ಯ ಸರ್ಕಾರ ಗಣಿ ನಡೆಸಲು ಉತ್ಸುಹಕವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಬಿಜಿಎಂಎಲ್ (ಭಾರತ ಚಿನ್ನದ ಗಣಿ) ಹೊಂದಿರುವ1600 ಕೋಟಿ ರೂ.ಸಾಲವನ್ನು ಕೇಂದ್ರ ಸರ್ಕಾರ ಮನ್ನಾಮಾಡಿದರೆ ಗಣಿ ನಡೆಸುವುದಾಗಿ ರಾಜ್ಯ ಸರ್ಕಾರದಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ಎಂಐಸಿಎಲ್ ಚಿನ್ನದ ನಿಕ್ಷೇಪಗಳಬಗ್ಗೆ ಈಗಾಗಲೇ ಸರ್ವೆ ನಡೆಸುತ್ತಿದೆ. ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಗಳ ನಿರ್ಲಕ್ಷ್ಯ: ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೆರುತ್ತಿದ್ದರೂ ಚಿನ್ನದ ನಿಕ್ಷೇಪವಿರುವ ದೇಶಗಳು ಆರ್ಥಿಕ ಮುಗ್ಗಟ್ಟಿನ ನಡುವೆಯೂ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿವೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತವು ಚಿನ್ನ ಬಳಕೆದಾರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅಗತ್ಯವಿರುವ ಚಿನ್ನಕ್ಕಾಗಿ ಬೇರೆ ದೇಶ ಗಳಿಂದ ಆಮದಾಗುವ ಚಿನ್ನದ ಮೇಲೆ ಅವಲಂಬಿತವಾಗಿದೆ. ಈ ಬೆಲೆಬಾಳುವ ಲೋಹವು ನಮ್ಮ ದೇಶದಲ್ಲಿ ಹೇರಳವಾಗಿದ್ದರೂ, ಸರ್ಕಾರಗಳ ನಿರ್ಲಕ್ಷತೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಪರಿಸರ ಮಾಲಿನ್ಯ ಮತ್ತು ನಿಯಂತ್ರಣ, ತಂತ್ರಜ್ಞಾನದ ಕೊರತೆಯಿಂದ ಪ್ರಮುಖ ಅಂಶಗಳನ್ನು ಬಿಟ್ಟು ಅಕ್ರಮ ಗಣಿ ಗಾರಿಕೆಯ ವಿಷಯವೇ ಪ್ರಮುಖ ಹಂತಗಳಲ್ಲಿರಾರಾಜಿಸುತ್ತಿರುವುದು ದೇಶದ ಆರ್ಥಿಕತೆಯ ಮೇಲೆ ಬಹು ದೊಡ್ಡ ಪೆಟ್ಟಾಗಿದೆ.
ತಪ್ಪು ನಿರ್ಧಾರ: ಕೋಲಾರ ಚಿನ್ನದ ಗಣಿಯು ದೇಶದ ಪ್ರಮುಖ ಗಣಿಯಾಗಿ ಅತಿ ಹೆಚ್ಚು ಚಿನ್ನದ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಈ ಹಿಂದಿನ ಸರ್ಕಾರಗಳು ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳು ಮತ್ತು ಅಸಮಂಜಸ ಯೋಜನೆಗಳಿಂದಾಗಿ ಗಣಿಯು ಮುಚ್ಚುವಂತಹ ಹಂತಕ್ಕೆ ಬಂದು ತಲುಪಿತು.2001ರ ಫೆ.28ಕ್ಕೆ ಕ್ಲೋಸ್: ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು 2001ರಲ್ಲಿ ಕಂಪನಿ ಮುಚ್ಚಲು ಅನುಮತಿ ನೀಡಿತು. ಅದರಂತೆ, ಇಂಡಸ್ಟ್ರೀಯಲ್ ಡಿಸ್‌ಪ್ಯೂಟ್ ಆಕ್ಟ್ ಆರ್ಟಿಕಲ್ 25(ಒ) ಅನ್ವಯ 28 ಫೆ.2001 ರಂದು ಕಂಪನಿಯನ್ನು ಮುಚ್ಚಲಾಗಿದೆ. ಇದರಿಂದ, ಜೀವನಾಧಾರ ಕಳೆದುಕೊಂಡ ಸುಮಾರು 3,500 ಕಾರ್ಮಿಕರುನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಂಗ ಹೋರಾಟ ಇಂದಿಗೂ ನಡೆಯುತ್ತಿದೆ.
ಹೈಕೋರ್ಟ್‌ನಲ್ಲಿ ಹೋರಾಟ: ಕರ್ನಾಟಕದ ಉಚ್ಚ ನ್ಯಾಯಾಲಯ ಏಕಸದಸ್ಯ ಪೀಠವು ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಿ ಬಿಐಎಫ್ಆರ್ ಹಾಗೂ ಎಎ ಐಎಫ್ ಆರ್‌ಗಳ ವರದಿ ಆಧರಿಸಿ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಆದೇಶ ನೀಡಿತು.
ಸೌಲಭ್ಯ ನೀಡಲು ಆದೇಶ: ಬಿಜಿಎಂಎಲ್ ಮುಚ್ಚುವ ಹಂತದಲ್ಲಿ ರೋಗಗ್ರಸ್ಥ ಕಂಪನಿಯಾಗಿದ್ದರಿಂದ ತನ್ನಕಾರ್ಮಿಕರಿಗೆ 2 ರೀತಿಯ ಸ್ವಯಂ ನಿವೃತ್ತಿ ಸೌಲಭ್ಯ ನೀಡಿತು. ಆದರೆ ಬರುವ ಹಣದ ಮೊತ್ತವುತುಂಬಾ ಕಡಿಮೆ ಯಾಗಿತ್ತು. 2001 ನವೆಂಬರ್‌ನಲ್ಲಿ ಭಾರತಸರ್ಕಾರವು ರೋಗಗ್ರಸ್ಥ ಉದ್ಯಮಗಳ ಕಾರ್ಮಿಕರಿಗೆ ಶೇ.100 ರಷ್ಟು ಸ್ವಯಂ ನಿವೃತ್ತಿ ಸೌಲಭ್ಯನೀಡಲು ತೀರ್ಮಾನಿಸಿ, ಅದರಂತೆ ಗಣಿ ಕಾರ್ಮಿಕರು,ಶೇ.100 ಸೌಲಭ್ಯಗಳನ್ನು ನೀಡಲು ಕೇಳಿದಾಗ ಫೆಬ್ರವರಿ 2001ರಲ್ಲೇ ಗಣಿ ಮುಚ್ಚಲಾಯಿತು ಎಂಬ ಕಾರಣ ನೀಡಿತು. ಆದರೆ ನ್ಯಾಯಾಲಯವು ಈ ಸೌಲಭ್ಯವನ್ನು ಅವರಿಗೂ ನೀಡುವಂತೆ ಆದೇಶ ನೀಡಿದೆ.
ಜೀವನಾಧಾರಕ್ಕೆ ಖಾಲಿ ಭೂಮಿ ನೀಡಲು ಸಲಹೆ:
ಕೆಜಿಎಫ್ನ ಚಿನ್ನದ ಗಣಿ ಬ್ರಿಟಿಷ್ ಕಂಪನಿ ಪ್ರಾರಂಭಿಸಿತು. ಆ ಗಣಿಗಳಲ್ಲಿ ಕೆಲಸ ಮಾಡಲು ಪಕ್ಕದ ತಮಿಳು ನಾಡಿನಿಂದ ಜನರನ್ನು ಕರೆತರಲಾಯಿತು. ಅವರೆಲ್ಲರೂ ಹಿಂದು ಳಿದ, ತೀರ ಬಡ ಕುಟುಂಬಗಳಿಗೆ ಸೇರಿದವರಾಗಿದ್ದು, ಅವರು ವಾಸಿಸಲು ಸಣ್ಣ ಸಣ್ಣ ವಸತಿ ನಿಲಯಗಳನ್ನುಕೇವಲ ಶತಮಾನಗಳ ಹಿಂದೆ ಕಟ್ಟಲಾಗಿದ್ದು, ಅದನ್ನುಅವರಿಗೆ ನಿವೃತ್ತಿ ಸೌಲಭ್ಯದ ಭಾಗವಾಗಿ ನೀಡಲು ಆದೇಶಿಸಿಅದಕ್ಕೆ ಬೆಲೆಯನ್ನು ಸಹ ನಿಗದಿಪಡಿಸಲಾಗಿತ್ತು.ನಿರುಪಯುಕ್ತವಾಗಿರುವ ಸಾವಿರಾರು ಎಕರೆ ಖಾಲಿ ಭೂಮಿಯನ್ನು ಅವರಿಗೆ ನೀಡಿ ಮುಂದೆ ಅವರಜೀವನಕ್ಕೆ ಆಧಾರವಾಗುವಂತೆ ಮಾಡಲು ಸಲಹೆ ನೀಡಲಾಗಿತ್ತು. ಈ ಆದೇಶವು 2003 ರಲ್ಲಿ ಹೊರಡಿಸಲಾಯಿತು. ಆದರೆ ಅಂದಿನ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ವಿಫಲವಾಯಿತು.
ಬಿಇಎಂಎಲ್‌ಗೆ 100 ಎಕರೆ ಭೂಮಿ: 2006 ರಲ್ಲಿ ಯುಪಿಎ ಸರ್ಕಾರವು ಭೂಮಿ ನೀಡಲು ನಿರಾಕರಿಸಿಜಾಗತಿಕ ಟೆಂಡರ್ ಕರೆದು ಕೆಲವು ಅಧಿಕಾರಿಗಳು,ಕಾರ್ಮಿಕರ ಅಸಹಾಯಕ ಸ್ಥಿತಿಯ ಲಾಭ ಪಡೆದು ತಮ್ಮಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸಿದರು. ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳ ಬಗ್ಗೆ 2009ರಲ್ಲಿನ್ಯಾಯಾಲಯದಲ್ಲಿ ಕಾರ್ಮಿಕ ಸಂಘದ ವತಿಯಿಂದದಾವೆ ಹೂಡಲಾಯಿತು. ನ್ಯಾಯಾಲಯದ ಏಕಸದಸ್ಯಪೀಠವು ನೆರೆಯ ಬಿಇಎಂಎಲ್ ಕಾರ್ಖಾನೆಗೆ 100 ಎಕರೆಭೂಮಿಯನ್ನು ಗುತ್ತಿಗೆಗೆ ನೀಡಿರುವ ಬಗ್ಗೆ ಪ್ರಶ್ನಿಸಿ ಅದನ್ನು ತೆರವುಗೊಳಿಸಲು ಆದೇಶಿಸಿತ್ತು.
ಚಿನ್ನಕ್ಕಿಂತ ಉತ್ಪಾದನೆ ದುಪ್ಪಟ್ಟು: ಸಮರ್ಥನೆ :
ಐಸಿಐಸಿಐಯ ಕಂಪನಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಂಪನಿಯನ್ನು ಪುನರ್ ಆರಂಭಿಸಲು ಸರ್ಕಾರದಸಹಕಾರ ಕೋರಿ ಮನವಿ ಸಲ್ಲಿಸಿತು. ಆದರೆ ಸರ್ಕಾರವು ಚಿನ್ನದಉತ್ಪಾದನೆ ಮಾಡುವವೆಚ್ಚವು ಚಿನ್ನದಬೆಲೆಯದುಪ್ಪಾಟ್ಟಾಗುತ್ತದೆ. ಅಂದರೆ, ಚಿನ್ನದಬೆಲೆ 10 ಗ್ರಾಂಗಳಿಗೆ 4 ಸಾವಿರ ರೂ. ಆದರೆಅದನ್ನು ಉತ್ಪಾದನೆ ಮಾಡಲು12 ಸಾವಿರ ರೂ.ಗಳಷ್ಟುಖರ್ಚಾಗುವುದು. ಅಲ್ಲದೇ ಲೋಹದನಿಕ್ಷೇಪ ಕಡಿಮೆಯಾಗಿದೆ ಎಂಬಕಾರಣಗಳನ್ನು ನೀಡಿ ಸಾರ್ವಜನಿಕಹಿತಾಸಕ್ತಿಯ ಕಾರಣ ನೀಡಿ ಕಂಪನಿ ಮುಚ್ಚಿ ಹಾಕುವ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆದರೆ,ನ್ಯಾಯಾಲಯವು ಗಣಿ ಕಾರ್ಮಿಕರಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಅವರಿಗೆ ಕೆಲವು ಸೌಲಭ್ಯಗಳನ್ನು ನೀಡುವಂತೆ ನಿರ್ದೇಶಿಸಿತ್ತು.
ಗಣಿ ಆಳದಲ್ಲಿ ಇನ್ನೂ ಗುಣಮಟ್ಟದ ಅದಿರು ಲಭ್ಯ :
ಆಡಳಿತ ವರ್ಗದ ನಿರ್ಲಕ್ಷ್ಯ ಹಾಗೂ ಸ್ವಾರ್ಥದಿಂದ ಕಂಪನಿಯೂ ನಷ್ಟ ಹೊಂದಿ ಮುಚ್ಚಲ್ಪಟ್ಟಿತ್ತು. ಖಂಡಿತ ಗಣಿ ಆಳದಲ್ಲಿ ಇನ್ನು ಅತ್ಯುತ್ತಮ ಗುಣಮಟ್ಟದ ಅದಿರು ಲಭ್ಯ ಎಂದು ಪರಿಣಿತರು ವರದಿ ನೀಡಿದ್ದಾರೆ. ಅಲ್ಲದೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಆಂಧ್ರಪ್ರದೇಶದಲ್ಲಿರುವ ಚಿಗಿರಿಗುಂಟ ವರೆಗೆ ಹರಡಿರುವ 80 ಕಿ.ಮೀ. ಪ್ರದೇಶದಲ್ಲಿ ಚಿನ್ನದ ಅದಿರು ಲಭ್ಯವಿದೆ ಎಂದು ಮೂಲಗಳು ಹೇಳುತ್ತವೆ. ಕೇಂದ್ರ ಗಣಿ ಸಚಿವರ ಆದೇಶದಂತೆ ಎಂಇಸಿಎಲ್ ಕಂಪನಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚುತ್ತಿದೆ. ಅಲ್ಲದೆ ಈಗಾಗಲೇ ಚಿನ್ನ ತೆಗೆದು ರಾಶಿ ಹಾಕಿರುವ ಸೈನಾಡ್ ಗುಡ್ಡಗಳ ರಾಶಿಗಳಲ್ಲೂ ಚಿನ್ನ ಇದೇ ಎಂದು ಹೇಳಲಾಗುತ್ತಿದೆ.
ಸಂಕಷ್ಟದಲ್ಲಿ ಗಣಿ ಕಾರ್ಮಿಕರು :
12,500 ಎಕರೆ ವಿಸ್ತೀರ್ಣದಲ್ಲಿ ವಾಸವಾಗಿರುವ ಗಣಿ ಕಾರ್ಮಿಕರ ಕುಟುಂಬಗಳುಇತರೆ ಪ್ರದೇಶಗಳಿಂದ ದೂರ ಉಳಿದಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿ ಸರ್ಕಾರದ ನಿರ್ಲಕ್ಷತೆಗೆ ಒಳಗಾಗಿ ಸಂಕಷ್ಟ ಅನುಭಸುತ್ತಿದೆ. 2001ರಲ್ಲಿ ಕಂಪನಿ ಮುಚ್ಚಿ ಹಾಕಿದ ನಂತರ ಎಲ್ಲಾ ಸೌಲಭ್ಯಗಳನ್ನುಒಂದೊಂದಾಗಿ ನಿಲ್ಲಿಸಲ್ಪಟ್ಟವು. ನಗರಸಭೆಗೆಮೂಲಸೌಕರ್ಯಗಳನ್ನು ನಿರ್ವಹಿಸುವಜವಾಬ್ದಾರಿ ನೀಡಿದ ಮೇಲಂತೂ ಸ್ಥಿತಿ ಇನಷ್ಟು ಹದಗೆಟ್ಟಿದೆ.
ಮತ್ತೆ ಆರಂಭಿಸಲು ಒಲವು :
ಸಾವಿರಾರು ಕಾರ್ಮಿಕರು ಚಿನ್ನದ ಗಣಿ ಮುಚ್ಚಿದ್ದರಿಂದ ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರಸರ್ಕಾರದ ಗಮನಕ್ಕೆ ತರಲಾಗಿದೆ. ಚಿನ್ನದ ಗಣಿಪುನಃ ಪ್ರಾರಂಭವಾಗಲಿದೆ. ಕೇಂದ್ರ ಗಣಿ ಸಚಿವಪ್ರಹ್ಲಾದ್ ಜೋಷಿ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿನ್ನದ ಗಣಿ ಆರಂಭ ಮಾಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಒಲವು ತೋರಿದ್ದಾರೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಕಾರ್ಮಿಕರಿಗೆ ಒಳ್ಳೆಯದಾಗುತ್ತದೆ ಎಂದುಕೋಲಾರ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಉದಯವಾಣಿಗೆ ಪ್ರತಿಕ್ರಿಯಿಸಿದರು.
ಕೋಟಿ ಕೋಟಿ ಮೌಲ್ಯದ ಆಸ್ತಿ ನಾಪತ್ತೆ :
ಇತ್ತ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಹೋರಾಟ ಜಾರಿ ಇರುವಾಗಲೇ ಗುತ್ತಿಗೆಕೆಲಸವನ್ನು ಪಡೆದಂತಹ ಗುತ್ತಿಗೆದಾರರು ಕಂಪನಿಯಿಂದ ಕೋಟಿ ಕೋಟಿ ಸುಲಿಗೆ ಮಾಡತೊಡಗಿದರು. ಹಲವಾರು ಕೋಟಿ ಬೆಲೆಬಾಳುವ ಗಣಿಯ ಆಸ್ತಿಯು ಮಂಗಮಾಯವಾಗ ತೊಡಗಿತು. ವರದಿಗಳ ಪ್ರಕಾರ 36 ಕೋಟಿಕಂಪನಿಗೆ ನಷ್ಟವಾಗಿರುವುದು ತಿಳಿದು ಬಂದಿತು.ಆದರೆ ಯಾವುದೇ ಸರ್ಕಾರವು ಕ್ರಮ ಕೈಗೊಳ್ಳಲುಮುಂದಾಗದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ
ಕೆಜಿಎಫ್ ಚಿನ್ನದ ನಿಕ್ಷೇಪ ಇನ್ನೂ ಇದೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ನಷ್ಟದ ನೆಪ ಹೇಳಿ ಬಿಜಿಎಂಎಲ್ ಮುಚ್ಚಲಾಯಿತು. ಈಗ ಚಿನ್ನದ ಬೆಲೆ ಹೆಚ್ಚಿದೆ. ಈಗಲಾದರೂ ಗಣಿ ಪ್ರಾರಂಭಿಸಬೇಕು. ಜನಪ್ರತಿನಿಧಿಗಳುಸರ್ಕಾರದ ಮೇಲೆ ಒತ್ತಡ ಹೇರಬೇಕು.ಗಣಿ ಕಾರ್ಮಿಕರಿಗೆ ಬರಬೇಕಾದ ಸವಲತ್ತುನೀಡಬೇಕು. ಈಗಲಾದರೂ ಹಲವಾರುಕಾರ್ಮಿಕ ಸಂಘಗಳು ಒಂದಾಗಿ ಹೋರಾಟ ನಡೆಸಬೇಕು. – ಮಾರಿಯ ಸೌಂದರ್ ರಾಜ್, ನಿವೃತ್ತ ಮೇಲ್ವಿಚಾರಕರು, ಕೆಜೆಎಫ್ ಚಿನ್ನದ ಗಣಿ
ಇಪ್ಪತ್ತು ವರ್ಷ ಆಯಿತುಬಿಜಿಎಂಎಲ್ ಮುಚ್ಚಿ. ಇದುವರೆಗೂಜನಪ್ರತಿನಿಧಿಗಳುಏನು ಮಾಡುತ್ತಿದ್ದಾರೆ? ಕೇಂದ್ರ ಮತ್ತುರಾಜ್ಯ ಸರ್ಕಾರಎರಡೂ ಅವರದ್ದೇ ಇರುವಾಗ ಕಾರ್ಮಿಕರಿಗೆ ಏಕೆ ನ್ಯಾಯ ಕೊಡಿಸಿಲ್ಲ? – ಎಂ.ರೂಪಕಲಾ, ಶಾಸಕಿ, ಕೆಜಿಎಫ್
– ಬಿ.ಆರ್.ಗೋಪಿನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.