ಕುಮಾರಿ ಕೈಗೆ ಕೋಟಿಲಿಂಗ ದೇಗುಲ ಹೊಣೆ
Team Udayavani, Nov 23, 2019, 4:04 PM IST
ಬಂಗಾರಪೇಟೆ: ಹೈಕೋರ್ಟ್ ತೀರ್ಪುನಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶದ ಮೇರೆಗೆ ತಾಲೂಕಿನ ಕಮ್ಮಸಂದ್ರದ ಶ್ರೀಕ್ಷೇತ್ರ ಕೋಟಿಲಿಂಗೇಶ್ವರ ದೇಗುಲದ ನಿರ್ವಹಣೆ ಹೊಣೆಯನ್ನು ಆಡಳಿತಾಧಿಕಾರಿಯಾಗಿದ್ದ ಕೆಜಿಎಫ್ ತಹಶೀಲ್ದಾರ್ ಕೆ.ರಮೇಶ್, ಕೆ.ವಿ.ಕುಮಾರಿಗೆ ಹಸ್ತಾಂತರ ಮಾಡಿದರು.
ಸೆ.5ರಂದು ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಮಂಜುನಾಥ್, ಒಂದು ಪುಟದಲ್ಲಿ ನೀಡಿದ್ದ ದೇಗುಲ ಹಸ್ತಾಂತರದ ಆದೇಶದ ಪತ್ರವನ್ನು ಕೆಜಿಎಫ್ ತಹಶೀಲ್ದಾರ್ ಕೆ.ರಮೇಶ್ ಶುಕ್ರವಾರ ಟ್ರಸ್ಟಿ ಕೆ.ವಿ.ಕುಮಾರಿಗೆ ನೀಡಿದರು. ಈ ಪತ್ರದಲ್ಲಿ ಈ ಹಿಂದೆ ಕೆಜಿಎಫ್ ನ್ಯಾಯಾಲಯ ನೀಡಿದ್ದ ಆದೇಶದಂತೆ ಶ್ರೀಕೋಟಿಲಿಂಗೇಶ್ವರ ದೇಗುಲದ ಸಾಮಗ್ರಿ, ಪುಸ್ತಕ ಹಾಗೂ ಇತರೆ ವಸ್ತುಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಅದನ್ನುಕೆ.ವಿ.ಕುಮಾರಿಗೆ ಹಸ್ತಾಂತರ ಮಾಡಲು ತಿಳಿಸಲಾಗಿದೆ.
ಡೀಸಿ ಸೂಚನೆ: ಭಕ್ತರ ಹಿತದೃಷ್ಟಿಯಿಂದ ದೇಗುಲದ ಆಡಳಿತದ ನಿರ್ವಹಣೆಯಲ್ಲಿ ಯಾವುದೇ ಗೊಂದಲ ಇಲ್ಲದಂತೆ, ಶಾಂತಿಭಂಗವಾಗದಂತೆ ಎಚ್ಚರವಹಿಸಿ. ದೇವಾಲಯಕ್ಕೆ ಬರುವ ಆದಾಯ ದುರುಪಯೋಗ ಆಗದಂತೆ, ದೇವಾಲಯದ ಆಸ್ತಿಯಿಂದ ಬರುವ ಆದಾಯ ಮತ್ತು ಖರ್ಚುಗಳನ್ನು ಪಾರದರ್ಶಕವಾಗಿ, ನಿರ್ವಹಿಸಲು ದೇಗುಲ ಕಾರ್ಯದರ್ಶಿ ಕೆ.ವಿ.ಕುಮಾರಿಗೆ ಸೂಚನೆ ನೀಡಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಶ್ರಮ: ಶ್ರೀಕೋಟಿಲಿಂಗೇಶ್ವರ ದೇವಾಲಯದ ಕಾರ್ಯದರ್ಶಿ ಕೆ.ವಿ.ಕುಮಾರಿ ಮಾತನಾಡಿ, ಶ್ರೀಕೋಟಿಲಿಂಗ ದೇಗುದಲ್ಲಿ 30 ವರ್ಷಗಳ ಸೇವೆ ಮಾಡಿದ್ದರಿಂದ ಆ ದೇವರು ಮತ್ತೆ ಈ ದೇವಾಲಯವನ್ನು ಮುನ್ನಡೆಸಲು ರಾಜ್ಯ ಹೈಕೋರ್ಟ್ ಮೂಲಕ ಅವಕಾಶ ನೀಡಿದೆ. ಶ್ರೀಸಾಂಭವಶಿವಮೂರ್ತಿ ಸ್ವಾಮೀಜಿಗಳ ಆಶಯಯಂತೆ ದೇಗುಲದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.