ಕೆಲಸಕ್ಕೆ ಬಂದ ನೌಕರರಿಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಅಡೆತಡೆ!
Team Udayavani, Apr 23, 2021, 4:07 PM IST
ಕೋಲಾರ: ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆಮುಷ್ಕರ ವನ್ನು ನೌಕರರು ಸ್ಥಗಿತಗೊಳಿಸಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಕೆಲಸಕ್ಕೆ ಹಾಜರಾಗುವ ನೌಕರರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಕರಾರಿನ ಜತೆಗೆ ಅಧಿಕಾರಿಗಳುನೀಡುತ್ತಿರುವ ಮುಚ್ಚಳಿಕೆ ತಪ್ಪೊಪ್ಪಿಗೆ ಅಡ್ಡಿಯಾಗಿದೆ.
ಕಳೆದ 15 ದಿನಗಳಿಂದ ಮುಷ್ಕರ ನಿರತರಾಗಿದ್ದು,ಕೆಲಸಕ್ಕೆ ಗೈರು ಹಾಜರಾಗಿದ್ದ ಸಾರಿಗೆ ನೌಕರರು ಹೈಕೋರ್ಟ್ ಆದೇಶ ಗೌರವಿಸಿ ಗುರುವಾರದಿಂದ ರಾಜ್ಯಾದ್ಯಂತ ಕೆಲಸಕ್ಕೆ ಹಾಜರಾಗಲು ಮುಂದಾಗಿ ದ್ದಾರೆ.ಸಂಸ್ಥೆಯು ನಿಗದಿಪಡಿಸಿರುವಂತೆ ಕೋವಿಡ್ ಪರೀಕ್ಷೆಮಾಡಿಸಲು ಬಹುತೇಕ ಸಿಬ್ಬಂದಿ ಒಪ್ಪಿಗೆ ಸೂಚಿಸಿಕೋವಿ ಡ್ ತಪಾಸಣೆಗೊಳಗಾಗುತ್ತಿದ್ದಾರೆ.
ಆದರೆ, ಕೆಲಸಕ್ಕೆ ಸೇರಲು ಅಧಿಕಾರಿಗಳು ನೀಡುತ್ತಿರುವ ತಪ್ಪೊಪ್ಪಿಗೆಪತ್ರಕ್ಕೆ ಸಹಿ ಹಾಕುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದ ಹಲವು ಸಾರಿಗೆ ಡಿಪೋಗಳಲ್ಲಿ ಮುಷ್ಕರನಿರತ ನೌಕರರಿಂದ ಕೆಲಸಕ್ಕೆ ಅನುಮತಿ ಕೋರಿ ಪತ್ರಕ್ಕೆಸಹಿ ಮಾಡಿಸಿಕೊಳ್ಳುತ್ತಿದ್ದರೆ, ಕೋಲಾರ ಸಾರಿಗೆಅಧಿಕಾರಿಗಳು ತಪ್ಪೊಪ್ಪಿಗೆ ಮುಚ್ಚಳಿಕೆಯನ್ನುನೌಕರರಿಂದ ಬರೆಸಿಕೊಳ್ಳಲು ಮುಂದಾಗಿರುವುದುನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ವಾಪಸ್: ಗುರುವಾರ ಕೆಲಸಕ್ಕೆ ಬಂದ ಕೆಲವರುಕೆಲವರು ಅಧಿಕಾರಿಗಳು ನೀಡಿರುವ ತಪ್ಪೊಪ್ಪಿಗೆ ಪತ್ರಕ್ಕೆಸಹಿ ಹಾಕಿದ್ದಾರೆ. ಕೆಲವರು ಕೆಲಸಕ್ಕೆ ಹಾಜರಾಗದೆವಾಪಸ್ಸಾಗಿದ್ದಾರೆ. ರಾಜ್ಯದ ಇತರೇ ಡಿಪೋಗಳಂತೆಅನುಮತಿ ಪತ್ರಕ್ಕೆ ಮಾತ್ರವೇ ತಾವು ಸಹಿ ಮಾಡುತ್ತೇವೆ.
ಅಧಿಕಾರಿಗಳು ಈ ಪತ್ರದ ಮಾದರಿಯನ್ನು ಕೋಲಾರದನೌಕರರಿಗೂ ನೀಡಬೇಕೆಂದು ಒತ್ತಾಯಿಸಿದ್ದಾರೆ.ಕೋಲಾರ ಡಿಪೋ ಅಧಿಕಾರಿಗಳು ಹೈಕೋರ್ಟ್‌ಆದೇ ಶದ ಮೇರೆಗೆ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆಬಂದಿ ರುವ ನೌಕರರಿಂದ ತಪ್ಪೊಪ್ಪಿಗೆ ಮುಚ್ಚಳಿಕೆ ಬರೆಸಿಕೊಂಡು ಅವರ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವುದು ನೌಕರರ ಆಕ್ರೋಶಕ್ಕೆ ಗುರಿಯಾಗಿದ್ದು,ಹಿರಿಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕೆಂಬಆಗ್ರಹವೂ ನೌಕರರ ವರ್ಗದಿಂದ ಕೇಳಿ ಬರುತ್ತಿದೆ.
ಜಾಮೀನು: 2 ದಿನಗಳ ಹಿಂದೆ ನಿಷೇಧಾಜ್ಞೆ ಉಲ್ಲಂ ಸಿಗುಂಪು ಸೇರಿ ಪ್ರತಿಭಟನೆಗೆ ಮುಂದಾದರೆಂಬ ಕಾರಣಕ್ಕೆಬಂಧನಕ್ಕೊಳಗಾಗಿದ್ದ 32 ಮಂದಿಗೆ ನ್ಯಾಯಾಲಯಗುರುವಾರ ಜಾಮೀನು ಮಂಜೂರು ಮಾಡಿದೆ.ಪ್ರತಿಭಟನೆ ನಿರತ ನೌಕರರನ್ನು ಪೊಲೀಸರುಬಂಧಿಸಿದ್ದು, ಇದನ್ನು ಪ್ರತಿಭಟಿಸಿದ ನೌಕರರ ಗುಂಪನ್ನುಪೊಲೀಸರು ಲಾಠಿ ಬೀಸಿ ಚದುರಿಸಿದ್ದರು.
ಈ ಘಟನೆಯಲ್ಲಿ ಬಂಧಿತರಾದ ಎಲ್ಲಾ 32 ಸಾರಿಗೆನೌಕರರ ಪರವಾಗಿ ಸಿಎಂಆರ್ ಟೊಮೆಟೋ ಮಂಡಿಮಾಲೀಕ ಶ್ರೀನಾಥ್ ವಕೀಲರನ್ನಿಟ್ಟು ನ್ಯಾಯಾಲಯಮುಂದೆ ಅರ್ಜಿ ಸಲ್ಲಿಸಿ ಜಾಮೀನು ಮಂಜೂರುಮಾಡಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ. ಇವರಿಗೆ ಸಾರಿಗೆನೌಕರರು ಕೃತಜ್ಞತೆ ಅರ್ಪಿಸಿದ್ದಾರೆ.
ಬಸ್ಗಳ ಓಡಾಟ: ಕೋಲಾರ ನಗರ ಸೇರಿ ಜಿಲ್ಲಾದ್ಯಂತಎಲ್ಲಾ ಡಿಪೋಗಳಿಂದಲೂ ಸಾರಿಗೆ ಬಸ್ ಓಡಾಟಆರಂಭವಾಯಿತು. ಆದರೆ, ತಪ್ಪೊಪ್ಪಿಗೆ ಪತ್ರದಅಡೆತಡೆಯಿಂದಾಗಿ ನೌಕರರು ಪೂರ್ಣ ಪ್ರಮಾಣದಲ್ಲಿಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆರಂಭವಾದಬಸ್‌ಗಳಲ್ಲಿಯೂ ಸರ್ಕಾರ ಕೋವಿಡ್ ಮಾರ್ಗಸೂಚಿಬಂದ್ ಪರಿಣಾಮ ಪ್ರಯಾಣಿಕರ ಸಂಖ್ಯೆ ತೀರಾಕಡಿಮೆಯಾಗಿದ್ದು ಕಂಡು ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.