ಅರ್ಜಿ ಕೊಟ್ಟರೂ ಠಾಣೆಗೆ ಜಮೀನು ಮಂಜೂರಿಲ್ಲ
2 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಮುಳಬಾಗಿಲು ಗ್ರಾಮಾಂತರ ಠಾಣೆ ನಿರ್ವಹಣೆ
Team Udayavani, Jun 21, 2019, 1:30 PM IST
ಮುಳಬಾಗಿಲು ನಗರದ ನರಸಿಂಹತೀರ್ಥದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಾಂತರ ಪೊಲೀಸ್ ಠಾಣೆ.
ಮುಳಬಾಗಿಲು: ಸರ್ಕಾರಿ ಯೋಜನೆಯೊಂದರ ಅಗತ್ಯಕ್ಕಾಗಿ ಜಮೀನು ಮಂಜೂರು ಮಾಡಲು 2 ವರ್ಷಗಳಿಂದ ಕಂದಾಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದಕ್ಕೆ ತಾಲೂಕಿನಾ ದ್ಯಂತ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ 186 ಗ್ರಾಮಗಳಲ್ಲಿ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಮುಳಬಾಗಿಲು ಠಾಣೆಯನ್ನು ನಗರ ಠಾಣೆಯನ್ನಾಗಿ ರೂಪಿಸಿ ಗ್ರಾಮಾಂತರ ಠಾಣೆಯನ್ನು ಮಂಜೂರು ಮಾಡಿ ಅದಕ್ಕೆ ಮೂಲಭೂತ ಸೌಕರ್ಯ ಒದಗಿಸಲು 3ವರ್ಷಗಳ ಹಿಂದೆಯೇ ಕೋಟ್ಯಂತರ ರೂ.ಗಳನ್ನು ಮಂಜೂರು ಮಾಡಿದೆ. ಅಂತೆಯೇ 2016ರ ಅಕ್ಟೋಬರ್‌ನಲ್ಲಿಯೇ ಮುಳಬಾಗಿಲು ಗ್ರಾಮಾಂತರ ಠಾಣೆ ಅಗತ್ಯ ಸಿಬ್ಬಂದಿಗಳಿಂದ ಕಾರ್ಯಾರಂಭಿಸಿದ್ದು ನಂತರ 2017ರ ಆಗಸ್ಟ್ 16 ರಂದು ಪೊಲೀಸ್ ಇಲಾಖೆ ನರಸಿಂಹತೀರ್ಥದ ಶ್ರೀಪಾದರಾಜ ಮಠದ ಕಟ್ಟಡವೊಂದನ್ನು 27 ಸಾವಿರ ರೂ.ಗಳಿಗೆ ಬಾಡಿಗೆ ಪಡೆದು ಠಾಣೆ ಆರಂಭಿಸಿತ್ತು. 186 ಗ್ರಾಮಗಳ ಜನರ ದೂರುಗಳನ್ನು ರಾಜೀ ಮಾಡಿಸುವ ಮೂಲಕ ಗ್ರಾಮಸ್ಥರ ಸಮಸ್ಯೆಗಳನ್ನು ಪೊಲೀಸರು ಬಗೆಹರಿಸುತ್ತಿದ್ದಾರೆ.
ಶಾಂತಿ ಸುವ್ಯವಸ್ಥೆ:ಅಲ್ಲದೇ ಠಾಣೆ ವ್ಯಾಪ್ತಿಯ ಗಡಿಯ ಪಲಮನೇರು, ಪುಂಗನೂರು, ರಾಮಸಮುದ್ರಂ, ಬೆಟ್ಟಗುಡ್ಡಗಳಿಂದ ಆವೃತವಾದ ನಕ್ಸಲಿಯರ ಪ್ರದೇಶ, ಠಾಣಾ ಸರಹದ್ದಿನ 186 ಗ್ರಾಮಗಳಲ್ಲಿ ರಾಜಕೀಯ ವೈಷಮ್ಯ ಉಂಟಾದಾಗ ಗ್ರಾಮ ಗಸ್ತು ವ್ಯವಸ್ಥೆ ಸುಗಮವಾಗಿ ನಡೆಸುತ್ತಿದ್ದಾರೆ. ಈ ಮೂಲಕ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಗ್ರಾಮಾಂತರ ಪೊಲೀಸ್ ಠಾಣೆ ಕಾಪಾಡುತ್ತಿದೆ.
ನಂತರ ಪೊಲೀಸ್ ಅಧಿಕಾರಿಗಳು ನಗರದ ಅಂಚಿನಲ್ಲಿಯೇ ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವುಳ್ಳ ಮುಳಬಾಗಿಲು ರೂರಲ್ ಸ.ನಂ.715ರಲ್ಲಿನ 1.36 ಎಕರೆ ಜಮೀನು ಮಂಜೂರು ಮಾಡಲು ಕೋರಿ 2017 ಮತ್ತು 2018ರಲ್ಲಿ 2ಬಾರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ನೀಡಿದರು. ಆದರೆ ಕಂದಾಯ ಇಲಾಖೆ ಅಧಿಕಾರಿ ಗಳು ಮಾತ್ರ ತಮಗೆ ಯಾವುದೇ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಪೊಲೀಸರೇ ಹಲವು ಬಾರಿ 2-3 ಕಡೆ ಜಮೀನು ತೋರಿಸಿದರೂ ಯಾವು ದೇ ಜಮೀನು ಮಂಜೂರು ಮಾಡದ ಕಾರಣ, ಪೊಲೀಸ್ ಅಧಿಕಾರಿಗಳು ವಿಧಿ ಇಲ್ಲದೇ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.
ದಸಂಸ ಜಿಲ್ಲಾ ಸಂಯೋಜಕರಾದ ತಾತಿಕಲ್ ರಾಮಚಂದ್ರ, ತಾಲೂಕು ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದಲೂ ಕೆಲವು ಸ್ಥಳೀಯ ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರಿ ಜಮೀನುಗಳ ಸಂರಕ್ಷಣೆ ಜವಾಬ್ದಾರಿ ಇಲ್ಲ. ನೂರಾರು ಎಕರೆ ಸರ್ಕಾರಿ ಜಮೀನು ನಕಲಿ ದಾಖಲೆಗಳ ಮೂಲಕ ಭೂ ಮಾಫಿಯಾದವರ ಪಾಲಾಗುತ್ತಿದೆ. ಭೂ ದಾಖಲೆಗಳ ಇಲಾಖೆ ಆಯು ಕ್ತರು ಇತ್ತ ಕಡೆ ಗಮನಹರಿಸಬೇಕೆಂದು ಒತ್ತಾಯಿಸಿ ದ್ದಾರೆ. ಒಟ್ಟಿನಲ್ಲಿ 2 ವರ್ಷಗಳ ಹಿಂದೆ ಯೇ ಕೋಟ್ಯಂತರ ರೂ.ಗಳ ಅನುದಾನ ಮಂಜೂ ರು ಮಾಡಿದ್ದರೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವುಳ್ಳ ಜಮೀನು ಮಂಜೂರು ಮಾಡದ ಕಂದಾಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.