ಬಾಯಿ ಚಪಲಕ್ಕೆ ಮಾತನಾಡುವುದ ಬಿಟ್ಟು ಅಭಿವೃದ್ಧಿ ಮಾಡಿ
ಸಂಸದ ಎಸ್.ಮುನಿಸ್ವಾಮಿ ಟೀಕೆಗಳಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿರುಗೇಟು
Team Udayavani, Sep 9, 2021, 4:31 PM IST
ಬಂಗಾರಪೇಟೆ: ಸಂಸದ ಎಸ್.ಮುನಿಸ್ವಾಮಿ ಗೆದ್ದು ಎರಡು ವರ್ಷವಾದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಆದರೂ ಬೇರೊಬ್ಬರ ಬಗ್ಗೆ
ಆರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿರುಗೇಟು ನೀಡಿದರು.
ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಿಜೆಪಿ ಪ್ರಭಾವಿ ಮುಖಂಡ ಮೇಸ್ತ್ರೀ ಶ್ರೀನಿವಾಸ್ ಮತ್ತು ಅವರ
ಬೆಂಬಲಿಗರನ್ನು ಸ್ವಾಗತಿಸಿ ಮಾತನಾಡಿ, ಜನರು ಇವರು ಏನೋ ಮಾಡುವರೆಂದು ನಂಬಿ ಮತನೀಡಿ ಗೆಲ್ಲಿಸಿದರು. ಆದರೆ, ಎರಡು ವರ್ಷ
ವಾದರೂ ಅವರ ಸಾಧನೆ ಮಾತ್ರ ಏನೂ ಇಲ್ಲ, ಬರೀ ಬಾಯಿಚಪಲಕ್ಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿರುವ ನನ್ನ ಬಗ್ಗೆ ಲಘುವಾಗಿ
ಮಾತನಾಡುತ್ತ, ಕಲಹರಣ ಮಾಡುತ್ತಿದ್ದಾರೆ. ಈ ಸಮಯವನ್ನುಅಭಿವೃದ್ಧಿ ಕಡೆ ತೋರಿದರೆ ಉತ್ತಮ ಎಂದು ಹೇಳಿದರು.
ಯಾವ ಸಾಕ್ಷಿಗಳು ಇಲ್ಲ: ಕ್ಷೇತ್ರಕ್ಕೆ ಸಂಸದರುಬಂದಾಗಲೆಲ್ಲಾ ಶಾಸಕರು ಅಲ್ಲಿ ಅಷ್ಟು ಗೋಮಾಳ ಜಮೀನು ಒತ್ತುವರಿ ಮಾಡಿ ಕೊಂಡಿದ್ದಾರೆ, ಅವರ ಅವ್ಯವಹಾರಗಳ ಕಡತಗಳು ರಾಶಿಯೇ ಇದೆ ಎಂದು ಹೇಳುವುದೇ ಆಯಿತು, ಇದುವರೆಗೂ ಬಿಡುಗಡೆ ಮಾಡಿಲ್ಲ, ಅವರ ಬಳಿ ಯಾವುದಕ್ಕೂ ಸಾಕ್ಷಿಗ ಳಿಲ್ಲ ಎಂದು ಸಂಸದರ ಬಗ್ಗೆ ಕಿಡಿಕಾರಿದರು.
ಇದನ್ನೂ ಓದಿ:ಒಡಿಶಾದ “ಮಂಡ ಎಮ್ಮೆ’ಗೂ ತಳಿ ಮಾನ್ಯತೆ
ಹಣ ಲಪಟಾಯಿಸಿದ್ದೇ ಸಾಧನೆ: ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಸಾಗುತ್ತಿಲ್ಲ, ಬದಲಾಗಿ
ಕೋವಿಡ್ ಹೆಸರಲ್ಲಿ ಹಣ ಲಪಟಾಯಿಸಿದ್ದೇ ಸಾಧನೆಯಾಗಿದೆ. ಇದರಿಂದ ಜನರು ಬೇಸತ್ತಿದ್ದು, ಸಾಲು ಸಾಲಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೇಸ್ತ್ರೀ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದ ಕಾರಹಳ್ಳಿ ಗ್ರಾಪಂನಲ್ಲಿ ಇನ್ನು ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು. ಸಮಾಜ ಸೇವಕ ಪ್ರವೀಣ್, ಮೇಸ್ತ್ರೀ ಶ್ರೀನಿವಾಸ್, ಮುಖಂಡರಾದ ಎಚ್.ಕೆ. ನಾರಾಯಣ ಸ್ವಾಮಿ, ಚಿನ್ನಿವೆಂಕಟೇಶ್, ಶ್ರೀನಿವಾಸ್, ರಂಗರಾಮಯ್ಯ ಮತ್ತಿತರರು ಹಾಜರಿದ್ದರು.
ಅವ್ಯವಹಾರ ಬಯಲಿಗೆ ತರಲಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಕೆ.ಚಂದ್ರಾರೆಡ್ಡಿ ಮಾತನಾಡಿ, ಸಂಸದರು ಶಾಸಕರ ಬಗ್ಗೆ ಬರೀ ಬುಟ್ಟಿಯಲ್ಲಿ ಹಾವಿದೆ ಎಂದು ಹೇಳುವರೆ ವಿನಃ, ಯಾವತ್ತೂ ಹಾವನ್ನು ತೋರಿಸಿಲ್ಲ,ಶಾಸಕರ ಒತ್ತುವರಿ ಮತ್ತು ಅವ್ಯವಹಾರಗಳ ಬಗ್ಗೆ ಪದೇ ಪದೆ ಹೇಳುವರೇ ವಿನಃ ಅವರದ್ದೇ ಸರ್ಕಾರ ವಿದೆ, ತನಿಖೆ ಮಾಡಿಸಿ ಬಯಲಿಗೆ ತರಲಿ ಎಂದು ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.