ಚಿರತೆ ದಾಳಿಗೆ ಹಸುವಿನ ಕರು ಬಲಿ
Team Udayavani, May 31, 2018, 2:40 PM IST
ಕೋಲಾರ: ನಗರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಅಂತರಗಂಗೆ ಬುದ್ಧಿ ಮಾಂದ್ಯ ಮಕ್ಕಳ ಶಾಲಾ ಆವರಣಕ್ಕೆ ಹಾರಿ ಬಂದಿರುವ ಚಿರತೆ ಅಲ್ಲಿನ ಕರುವನ್ನು ಕೊಂದು, ಅರ್ಧ ತಿಂದು ಪರಾರಿಯಾಗಿರುವ ಘಟನೆ ನಡೆದಿದೆ.
ನಗರದ ಅಂತರಗಂಗೆ ಬೆಟ್ಟದ ತಪ್ಪಲಿ ನಲ್ಲೇ ಇರುವ ಅಂತರಗಂಗೆ ವಿಕಲ ಚೇತನರ ವಸತಿ ಶಾಲೆಯ ಕಾಂಪೌಂಡ್
ದಾಟಿ ಒಳಗೆ ಬಂದ ಚಿರತೆ, ಅಲ್ಲಿ ಕಟ್ಟಿ ಹಾಕಿದ್ದ ಹಸುವಿನ ಕರು ಮೇಲೆ ದಾಳಿಮಾಡಿ ಕೊಂದು ಹಾಕಿದೆ. ಬೆಳಕಿನ ಜಾವ
ಘಟನೆ ನಡೆದಿರು ವುದರಿಂದ ಅಂತರ ಗಂಗಾ ವಿಕಲಚೇತನರ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶಂಕರ್ ಸೇರಿದಂತೆ ಶಾಲೆಯಲ್ಲಿಯೇ ಇರುವ 70 ಕ್ಕೂ ಹೆಚ್ಚು ಮಂದಿಗೆ ಯಾವುದೇ ಪ್ರಾಣಾ ಪಾಯವಾಗಿಲ್ಲ.
ಎಲ್ಲರೂ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿರ ಬೇಕು. ಹಗಲಿನ ವೇಳೆಯಲ್ಲಿ ಚಿರತೆ ದಾಳಿ ಮಾಡಿದ್ದರೆ
ಭಾರೀ ಅನಾಹುತ ಆಗುವ ಸಾಧ್ಯತೆ ಗಳಿದ್ದವು ಎಂದು ಶಂಕರ್ ತಿಳಿಸಿದ್ದಾರೆ.
ಶಂಕರ್‌ರಿಂದ ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಲೋಕೇಶ್ ಸ್ಥಳಕ್ಕೆ ಆಗಮಿಸಿ ಕರುವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರು. ಬುದ್ಧಿಮಾಂದ್ಯ ಮಕ್ಕಳಿಗೆ ಹಾಲಿನ ವ್ಯವಸ್ಥೆಗಾಗಿ ದಾನಿ ಯೊಬ್ಬರು ನೀಡಿದ್ದ ಹಸು ಮತ್ತು ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕರುವನ್ನು ಬಲಿ ತೆಗೆದುಕೊಂಡಿದೆ. ಇದರಿಂದ ಮನನೊಂದ ಶಾಲೆಯ ಬುದ್ಧಿಮಾಂದ್ಯ ಮಕ್ಕಳು ಕರುವಿ ಗಾಗಿ ಶೋಕಿಸುತ್ತಿದ್ದುದು
ಕಂಡು ಬಂದಿತು. ಅಂತರಗಂಗೆ ಶಾಲೆಯ ಆವರಣಕ್ಕೆ ಚಿರತೆ ನುಗ್ಗಿರುವುದರಿಂದ ಶಾಲೆಯಲ್ಲಿ ವಾಸ್ತವ್ಯವಿರುವ ಎಪ್ಪತ್ತಕ್ಕೂ ಹೆಚ್ಚು ಮಂದಿ ಆತಂಕದಲ್ಲಿರುವಂತಾಗಿದೆ.
ಸುತ್ತಮುತ್ತ ಸಾಕಷ್ಟು ಮನೆಗಳಿದ್ದು, ಚಿರತೆ ದಾಳಿ ನಡೆಯದಂತೆ ಸೂಕ್ತ ರಕ್ಷಣೆ ನೀಡಬೇಕೆಂದು ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.