ಕೋವಿಡ್ ಸಂಕಷ್ಟ ಮತ್ತೆ ಎದುರಾಗದಿರಲಿ
Team Udayavani, Jan 2, 2022, 2:33 PM IST
ಕೋಲಾರ: ಕೋವಿಡ್ ಹೆಮ್ಮಾರಿಯಿಂದಾದ ಸಮಸ್ಯೆಗಳನ್ನು ಕಳೆದ ವರ್ಷ ಸಮರ್ಪಕವಾಗಿ ನಿರ್ವಹಿಸಿದ್ದೇವೆ, ಈ ಬಾರಿ ಅಂತಹ ಯಾವುದೇ ಸಮಸ್ಯೆಗಳು ಎದುರಾಗದೇ ಜನರ ಕೆಲಸವನ್ನುಸಮರ್ಪಕವಾಗಿ ನಿರ್ವಹಿಸಿ ಸಮಾಜಕ್ಕೆ ಮತ್ತಷ್ಟು ಹತ್ತಿರವಾಗೋಣ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹಾರೈಸಿದರು.
ಹೊಸ ವರ್ಷಾರಂಭದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಶುಭಾಶಯ ಕೋರಿ ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಕೋವಿಡ್‌ನಿಂದಾಗಿ ಕಳೆದ ವರ್ಷ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ, ಸರ್ಕಾರಿನೌಕರರು ಕೋವಿಡ್ ವಾರಿಯರ್ ರೀತಿ ಕೆಲಸ ಮಾಡಿದ್ದಾರೆ, ಜಿಲ್ಲೆಗೆ ಅಂತಹ ಪರಿಸ್ಥಿತಿ ಎದುರಾಗದೇ ಜನತೆಗೆ ಉತ್ತಮ ಆರೋಗ್ಯ ಲಭಿಸಿಲಿ, ಅಭಿವೃದ್ಧಿಯ ಹಾದಿ ಸುಗಮವಾಗಿರಲಿ ಎಂದು ವಿವರಿಸಿದರು.
ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಜಿಲ್ಲಾಧಿಕಾರಿಗಳಿಗೆ ಸಂಘದ ಪರವಾಗಿ ಶುಭಾಶಯ ಕೋರಿ, ಸರ್ಕಾರಿ ನೌಕರರು ಜನಸೇವೆಗೆ ಸದಾ ಸಿದ್ಧರಿದ್ದೇವೆ, ತಮ್ಮ ಆದೇಶಗಳನ್ನು ಪಾಲಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ನಡೆ ಪ್ರಾಮಾಣಿಕವಾಗಿರಲಿದೆ ಎಂದು ಭರವಸೆ ನೀಡಿದರು.
ಅಪರ ಡೀಸಿಗೂ ಸಂಘದ ಅಭಿನಂದನೆ: ಈ ಸಂದರ್ಭದಲ್ಲಿ ನೌಕರರ ಸಂಘದಿಂದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರನ್ನು ಅಭಿನಂದಿಸಿ ಶುಭಾಶಯ ಕೋರಲಾಯಿತು.
ಸಂಘಟನಾ ಶಕ್ತಿ ಬಲಪಡಿಸೋಣ: ಈ ಸಂದರ್ಭದಲ್ಲಿ ಹಾಜರಿದ್ದ ನೌಕರರು, ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸುರೇಶ್‌ಬಾಬು, ಜಿಲ್ಲೆಯ ಅಭಿವೃದ್ಧಿಗೆನೌಕರರ ಕೊಡುಗೆ ಅಪಾರವಾಗಿದೆ, ನಮ್ಮ ಕೆಲಸವನ್ನುನ್ಯಾಯಯುತವಾಗಿ ನಿರ್ವಹಿಸೋಣ, ಸಮಾಜ ದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯ ಜತೆಗೆ ಹೊಸ ವರ್ಷದಲ್ಲಿ ಜನಸೇವೆಯ ಜತೆ ನಮ್ಮ ಸಂಘಟನಾ ಶಕ್ತಿಯನ್ನು ಬಲಪಡಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕಿ ಭಾಗ್ಯಮ್ಮ, ಸಹಾಯಕ ನಿದೇಶಕ ಹನುಮಂತರಾಯಪ್ಪ, ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದಪುರುಷೋತ್ತಮ್, ಅಜಯ್, ಎಂ.ನಾಗರಾಜ್,ಮಂಜುನಾಥ್, ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ಶ್ರೀರಾಮ್, ನವೀನಾ, ಮಲ್ಲಿಕಾರ್ಜುನ್, ಹರೀಶ್, ರವಿ, ಪಿಡಿಒ ನಾಗರಾಜ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಭೂಮಾಪನಾ ಇಲಾಖೆಯ ಜಯಲಕ್ಷ್ಮೀ, ನಮ್ರತಾ, ಶೋಭಾ, ಸುಭಾಷ್, ವಿಜಯಲಕ್ಷ್ಮೀ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.