ಸರ್ಕಾರದ ಸೌಲಭ್ಯ ಜನರಿಗೆ ಸಿಗಲಿ
ಪಡಿತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆಗಲಿ | ಕೇಂದ್ರ ಮಾಜಿ ಸಚಿವ ಮುನಿಯಪ್ಪ ಆಗ್ರಹ
Team Udayavani, Apr 20, 2020, 6:22 PM IST
ಕೆಜಿಎಫ್/ಬೇತಮಂಗಲ: ಕೋವಿಡ್ ವೈರಸ್ ಸೋಂಕು ಹರಡಂತೆ ಸರ್ಕಾರ ತೆಗೆದು ಕೊಂಡಿರುವ ಎಲ್ಲಾ ಕ್ರಮಗಳಿಗೆ ಕಾಂಗ್ರೆಸ್ ಪಕ್ಷವು ಸಹಕಾರ ನೀಡಿದ್ದು, ಜನರು ಹಸಿವಿ ನಿಂದ ಕೊರಗಬಾರದು ಎಂದು ದಿನಸಿ ವಿತ ರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲೂಕಿನ ಬೇತಮಂಗಲ, ಕ್ಯಾಸಂಬಳ್ಳಿ ಮತ್ತು ರಾಬರ್ಟಸನ್‌ಪೇಟೆಯಲ್ಲಿ ನಿರ್ಗತಿಕರು, ಅಂಗ ವಿಕಲರು, ವೃದ್ಧರು ಮೊದಲಾದವ ರಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾತನಾ ಡಿದ ಅವರು, ಸಾಮಾನ್ಯ ಜನರಿಗೆ, ಬಡವರಿಗೆ ಸಮರ್ಪಕವಾಗಿ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಈಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾಗ ಈ ವಿಷಯ ಪ್ರಸ್ತಾಪ ಮಾಡಲಾಗಿದೆ. ಪಡಿತರವನ್ನು ಅವರ ಮನೆ ಬಾಗಿಲಿಗೆ ಹೋಗಿ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ಬಿತ್ತನೆ ಬೀಜ ನೀಡಿ: ರೈತರು ಬೆಳೆದಂತೆ ಪದಾರ್ಥಗಳು ನಷ್ಟವಾಗುತ್ತಿದೆ. ಅದನ್ನು ಖರೀದಿ ಮಾಡುವವರು ಇಲ್ಲ. ಅದನ್ನು ಖರೀದಿ ಮಾಡಿ ಗ್ರಾಹಕರಿಗೆ ನೀಡುವ ವ್ಯವಸ್ಥೆ ಮಾಡಬೇಕು. ಮುಂದೆ ಕೂಡ ರೈತರು ಬೆಳೆ ಬೆಳೆಯುವ ಬೆಳೆಗೆ ಪ್ರೋತ್ಸಾಹ ನೀಡಬೇಕು. ಅವರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ನೀಡಬೇಕು. ಅವರು ಬೆಳೆದ ಬೆಳೆಯನ್ನು ಸರ್ಕಾರವೇ ಖರೀದಿ ಮಾಡಬೇಕು ಎಂದು ತಿಳಿಸಿದರು. ಶಾಸಕಿ ಎಂ.ರೂಪಕಲಾ ಮಾತನಾಡಿ, ದಾನ ಮಾಡುವ ಕೈಗಳು ಇಂದು ನೋವಿನಿಂದ ಕೈ ಚಾಚುತ್ತಿದ್ದಾರೆ. ನೀರಿಲ್ಲ, ಬೆಂಬಲ ಬೆಲೆ ಇಲ್ಲ ಎಂದು ದುಃಖ ಪಡುವ ರೈತರನ್ನು ನೋಡುತ್ತಿದ್ದೇವೆ. ವಿದೇಶಕ್ಕೆ ರಫ್ತು ಮಾಡುತ್ತಿರು ವವರು ಇಂದು ಆತಂಕಕ್ಕೆ ಒಳಗಾಗಿದ್ದಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾ ರೆಡ್ಡಿ, ಮುಖಂಡರಾದ ಆನಂದಮೂರ್ತಿ, ಮಾಣಿಕ್ಯಂ, ಮೊದಲೈಮುತ್ತು ಇದ್ದರು. ಇದೇವೇಳೆ ಬೇತಮಂಗಲ ಗ್ರಾಮದಲ್ಲಿ ಅಂಗವಿಕಲರಿಗೆ ಅಕ್ಕಿ, ದಿನಸಿ ಕಿಟ್ ಅನ್ನು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ವಿತರಿಸಿದರು.
ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಇನಾಯುತ್ ಉಲ್ಲಾ, ಡಿಸಿಸಿ ಬ್ಯಾಂಕ್ ನಿರ್ದೇ ಶಕ ನಾರಾಯಣರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್, ಕಿರಣ್, ಕಾರಿ ಪ್ರಸನ್ನ, ಗ್ರಾಪಂ ಸದಸ್ಯ ವಿನು ಕಾರ್ತಿಕ್, ಪಿಡಿಒ ಭಾಸ್ಕರ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.