ಕೆರೆ ಅಂಗಳದಲಿ ವೈನ್‌ಶಾಪ್: ರಾಜ್ಯಪಾಲರಿಗೆ ಪತ್ರ
Team Udayavani, Feb 26, 2023, 4:33 PM IST
ಕೆಜಿಎಫ್: ತಾಲೂಕಿನ ಕೆಂಪಾಪುರ ಗ್ರಾಮದ ಸರ್ವೆ ನಂಬರ್ 76ರಲ್ಲಿ 2-11 ಎಕರೆ ಜಮೀನಿನು ಕೆರೆ ಅಂಗಳವಾಗಿದ್ದು ಗ್ರಾಪಂ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕೆರೆ ಸಂರಕ್ಷಣೆಗೆ ರಾಜ್ಯಪಾಲರಿಗೆ ಕೆರೆ ಸಂರಕ್ಷಣಾ ಸಮಿತಿ ಮತ್ತು ಗ್ರಾಮಸ್ಥರು ಪತ್ರ ಬರೆದಿದ್ದಾರೆ.
ಕೆಂಪಾಪುರ ಗ್ರಾಮದ ಸರ್ವೆ ನಂ. 76ನ್ನು ಕೆರೆ ಅಂಗಳ ಎಂದೂ, ಸರ್ವೆ 74/4ನ್ನು ಹಿಡುವಳಿ ಜಮೀನು ಎಂದು ತೋರಿಸಿ, ಸರ್ವೆ ನಂಬರ್ 76ರ ಕೆರೆಯ ಹಿನ್ನೀರಿನಲ್ಲಿ ಮದ್ಯದಂಗಡಿಯಲ್ಲಿ ಸ್ಥಾಪಿಸಲು ಅಬಕಾರಿ ಇಲಾಖೆಯವರು ಅನುಮತಿ ನೀಡಲು ಮುಂದಾಗಿದ್ದಾರೆ. ಕ್ಯಾಸಂಬಳ್ಳಿಯಲ್ಲಿದ್ದ ದೀಪಿಕಾ ವೈನ್ಸ್ ಅನ್ನು ಕೆಂಪಾಪುರ ಕೆರೆ ಅಂಗಳಕ್ಕೆ ಸ್ಥಳಾಂತರಿಸಲು ಅಬಕಾರಿ ಇಲಾಖೆ ಅನುಮತಿ ನೀಡಲು ಮುಂದಾಗಿದ್ದು, ಗ್ರಾಮಸ್ಥರು ಕೆರೆಯನ್ನು ಉಳಿಸುವಂತೆ 10 ದಿನಗಳ ಹಿಂದೆ ಕೆಜಿಎಫ್ ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದರು.
ತಹಶೀಲ್ದಾರ್‌ರವರು ಕೆಂಪಾಪುರ ಕೆರೆ ಅಂಗಳದ ಗಡಿಯನ್ನು ಗುರ್ತಿಸಿ ಟ್ರಂಚ್ ತೆಗೆಯಬೇಕು ಎಂದು ಆದೇಶ ನೀಡಿದ್ದರೂ, ಸರ್ವೆ ಅಧಿಕಾರಿ ಕೆರೆಯ ಅಂಗಳದ ಸಂರಕ್ಷಣೆ ಬಿಟ್ಟು 4 ಮೀ ಉದ್ದದ ಟ್ರಂಚ್ ತೆಗೆದು ಬಂದಿದ್ದಾರೆ. ಆದರೆ ಮದ್ಯದ ಅಂಗಡಿ ಮಾಲೀಕರು ಕೆರೆಯಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಮದ್ಯದಂಗಡಿ ಶುರುವಾದರೆ ಕೆರೆ ಹಿನ್ನೀರಿನಲ್ಲಿ ಮದ್ಯವ್ಯಸನಿಗಳು ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸಾದ್ಯತೆಯಿದೆ ಎನ್ನಲಾಗಿದೆ. ಕೆರೆ ಅಂಗಳದಲ್ಲಿ ಮದ್ಯ ಮಾರಾಟಕ್ಕೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸದೇ ಹೋದರೆ ಪಿಡಿಒ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸೋಮವಾರ ಕೆಂಪಾಪುರ ಗ್ರಾಮದ ಸರ್ವೆ ನಂಬರ್ 76 ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆರೆ ಅಂಗಳದ 2-11 ಎಕರೆ ಜಾಗವನ್ನು ರಕ್ಷಿಸಿ ಹದ್ದುಬಸ್ತು ಗುರ್ತಿಸಲಾಗುವುದು. – ದಯಾನಂದ್, ಪ್ರಭಾರಿ ತಹಶೀಲ್ದಾರ್ ಕೆಜಿಎಫ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.