ಕೋಲಾರ ಜಿಲ್ಲೆಯಲ್ಲೂ ಲಾಕ್‌ಡೌನ್ ಕಠಿಣ: ಜಿಲ್ಲಾಧಿಕಾರಿ
Team Udayavani, May 21, 2021, 8:00 PM IST
ಕೋಲಾರ: ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಯಮ ಕಠಿಣಗೊಳಿಸಲಾಗಿದ್ದು, ಮೇ 21ಸಂಜೆ 6 ರಿಂದ 25 ಬೆಳಗ್ಗೆ 6 ರವರೆಗೆಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ತಮ್ಮಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಈಗಾಗಲೇ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಜನಸಂದಣಿ ಸೇರಿರುವ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸರಪಣಿ ಮುರಿಯುವ ಉದ್ದೇಶದಿಂದ ಜಿಲ್ಲಾಡಳಿತವು ಲಾಕ್‌ಡೌನ್ ನಿಯಮಗಳನ್ನುಇನ್ನೂ ಕಠಿಣಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.
ಇಂದೇ ಖರೀದಿಸಿಟ್ಟುಕೊಳ್ಳಿ: ಅಂಗಡಿಗಳಲ್ಲಿ ದಿನಸಿ, ತರಕಾರಿ ಹಾಗೂ ಇನ್ನಿತರೆ ಅಗತ್ಯವಸ್ತುಗಳ ಮಾರಾಟಕ್ಕೆ ಈಗ ಬೆಳಗ್ಗೆ 6 ರಿಂದ10ರವರೆಗೆ ಅವಕಾಶವಿತ್ತು. ಅದನ್ನು ಇನ್ನುಮೂರು ದಿನಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶುಕ್ರವಾರ ಸಂಜೆವರೆಗೂತಮಗೆ ಅಗತ್ಯವಿರುವ ವಸ್ತುಗಳ ಖರೀದಿಯನ್ನು ಮಾಡಿ ಇಟ್ಟುಕೊಳ್ಳುವಂತೆ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿಗಳು ಕೋರಿದರು.
ಹೋಟೆಲ್‌ನಿಂದ ಆಹಾರ ಪಾರ್ಸೆಲ್ ತರುವುದು ಈಗ ಜಾರಿಯಿರುವಂತೆ ಮುಂದುವರಿಯಲಿದೆ ಎಂದ ಅವರು, ತಳ್ಳುವಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಶುಕ್ರವಾರಸಂಜೆ 6 ರವರೆಗೆ ಮಾತ್ರ ಅವಕಾಶನೀಡಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ಕಚೇರಿ ತೆರೆದಿರುತ್ತೆ: ಬ್ಯಾಂಕಿಂಗ್‌ಕಚೇರಿಗಳೂ ಈ ಮೂರು ದಿನಮುಚ್ಚಿರುತ್ತವೆ. ಆದರೆ, ಎಟಿಎಂ ವ್ಯವಸ್ಥೆಲಭ್ಯವಿರಲಿದೆ. ಸರ್ಕಾರಿ ಕಚೇರಿಗಳುಈಗಾಗಲೇ ಜಾರಿಯಿರುವ ನಿಯಮದಂತೆಕಾರ್ಯ ಮುಂದುವರಿಸಲಿವೆ ಎಂದುಜಿಲ್ಲಾಧಿಕಾರಿಗಳು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸ್ಪಿಕಾರ್ತಿಕ್ ರೆಡ್ಡಿ ಮಾತನಾಡಿ, ಅನಾವಶ್ಯಕವಾಹನ ಓಡಾಟವನ್ನು ನಿಷೇಧಿಸಲಾಗಿದೆ,ಅನಗತ್ಯ ಓಡಾಟ ಕಂಡುಬಂದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆದುಕೊಂಡುಪ್ರಕರಣ ದಾಖಲಿಸಲಾಗುವುದು ಎಂದುಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.