ವಕೀಲ ವೃತಿ ಘನತೆ ಕಾಪಾಡಿಕೊಳ್ಳಿ
Team Udayavani, Dec 5, 2022, 4:00 PM IST
ಕೋಲಾರ: ನಿರಂತರ ಅಧ್ಯಯನದ ಮೂಲಕ ಉತ್ತಮ ವಕೀಲರಾಗಲು ಅವಕಾಶವಿದ್ದು, ವಕೀಲ ವೃತ್ತಿಯ ಘನತೆ ಗೌರವವನ್ನು ಕಾಪಾಡಿ ಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಹೇಳಿದರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಸಂಸ್ಥೆ, ಲಯನ್ಸ್ ರಕ್ತ ನಿಧಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಎಲ್ಲಾ ವಕೀಲರನ್ನು ಒಟ್ಟುಗೂಡಿಸಿ ವಕೀಲರ ದಿನಾ ಚರಣೆಯನ್ನು ಆಚರಣೆ ಮಾಡಿದ್ದೇವೆ. ಈ ದಿನದಂದು ಕಾರ್ಯಕ್ರಮದ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡುವ ಉದ್ದೇಶದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನೂರಾರು ವಕೀಲರು ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಅಪಘಾತಗಳಲ್ಲಿ ಗಾಯಗೊಂಡವರಿಗೆ, ವಿವಿಧ ಕಾಯಿಲೆ, ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ರಕ್ತದ ಅಗತ್ಯವಿದೆ. ಆದರೆ, ಅದನ್ನು ತಯಾರಿಸಲು ಸಾಧ್ಯವಿಲ್ಲ. ಮಾನವೀಯ ನೆಲಗಟ್ಟಿನಲ್ಲೇ ಮನುಷ್ಯರಾದ ನಾವೇ ರಕ್ತ ನೀಡುವ ಮೂಲಕ ಮತ್ತೂಂದು ಜೀವದ ರಕ್ಷಣೆಗೆ ಕೈಜೋಡಿಸಬೇಕು ಎಂದರು.
ವಕೀಲರ ಸಮಸ್ಯೆಗಳಿಗೆ ಉತ್ತರಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನಾಗರಾಜ್ ಅವರು, ಬಹಳ ದಿನಗಳಿಂದ ಎಲೆ ಕ್ಟ್ರಾನಿಕ್ ಎವಿಡೆನ್ಸ್ ಕುರಿತು ಬಹಳಷ್ಟು ಅರಿವಿನ ಕೊರತೆಯಿದ್ದು, ವಕೀಲರ ಮನವಿಯ ಮೇರೆಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಇತರೆ ವಿವಿಧ ಸೆಕ್ಷನ್‌ಗಳ ಮಾಹಿತಿ ಒದಗಿಸಿದರು.
ಪ್ರಕರಣಗಳ ವಿಲೇವಾರಿಗೆ ಸಹಕರಿಸಿ: ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ವಿಲೇವಾರಿಯಲ್ಲಿ ವಕೀಲರು ಸಹಕಾರ ನೀಡಬೇಕು. ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಮುಖ್ಯ. ವಿಚಾರಣೆ ಶೀಘ್ರ ಮುಗಿಸಿದರೆ ಬೇಗ ನ್ಯಾಯದಾನ ಒದಗಿಸಲು ಸಾಧ್ಯ ಎಂದರು. ಉತ್ತಮ ಸಮಾಜ ಸೇವೆ ಮಾಡಿ: ಒಟ್ಟಾರೆ ಎಲ್ಲಾ ವಕೀಲರು ಸಮಾಜದ ಚಿಂತನೆ ಮಾಡಿ, ಜನಸಾಮಾನ್ಯರಿಗೆ ನಿಜವಾದ ನ್ಯಾಯ ಒದಗಿಸುವ ಮೂಲಕ ವಕೀಲರು ಸಮುದಾಯದಲ್ಲಿ ಒಂದು ಉತ್ತಮ ಸಮಾಜ ಸೇವೆ ಮಾಡಬೇಕು. ಕೇವಲ ಹಣ ಸಂಪಾದನೆ ಮಾತ್ರವಲ್ಲ, ಸಮಾಜಕ್ಕೂ ನೆರವಾಗಬಹುದು ಎಂಬುದನ್ನು ಮೊದಲು ಅರಿಯಬೇಕು. ಈ ನಿಟ್ಟಿನಲ್ಲಿ ವಕೀಲರು ಅತ್ಯಂತ ಉತ್ತಮ ಕೆಲಸ ಮಾಡಿದ್ದಾರೆ. ಇಂದು ಕೊರತೆ ಇರುವ ರಕ್ತವನ್ನು ಶಿಬಿರದ ಮೂಲಕ ಒದಗಿಸುವ ಮೂಲಕ ಸಮಾಜಕ್ಕೆನೆರವಾಗುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಹಿರಿಯ ವಕೀಲರಾದ ಎಂ.ವಿ.ಸುಬ್ಟಾರೆಡ್ಡಿ, ಬಿಸಪ್ಪಗೌಡ, ಕೋದಂಡಪ್ಪ ಹಾಜರಿದ್ದರು.
ಅಪಘಾತಗಳಲ್ಲಿ ಗಾಯವಾದ, ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ರಕ್ತದ ಅಗತ್ಯವಿದೆ. ಆದರೆ, ಅದನ್ನು ತಯಾರಿಸಲು ಸಾಧ್ಯವಿಲ್ಲ. ಮಾನವೀಯ ನೆಲಗಟ್ಟಿನಲ್ಲೇ ಮನುಷ್ಯರಾದ ನಾವೇ ರಕ್ತ ನೀಡುವ ಮೂಲಕ ಮತ್ತೂಂದು ಜೀವದ ರಕ್ಷಣೆಗೆ ಕೈಜೋಡಿಸಬೇಕು. -ಜಿ.ಶ್ರೀಧರ್, ಅಧ್ಯಕ್ಷ ಜಿಲ್ಲಾ ವಕೀಲರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.