ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಬದುಕಿನ ಜ್ಞಾನವೂ ಅಗತ್ಯ
Team Udayavani, Mar 7, 2022, 4:18 PM IST
ಕೋಲಾರ: ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಹೆಚ್ಚು ಸಹಕಾರಿಯಾಗಿದ್ದು, ಬದುಕಿನ ಜ್ಞಾನ ಬರುತ್ತದೆಎಂದು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ, ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದಅವರು, ಮಕ್ಕಳಿಗೆ ಪಠ್ಯವೊಂದೇ ಸಾಲದು,ಅದರ ಜತೆಗೆ ಬದುಕಿನ ಜ್ಞಾನವೂ ಅಗತ್ಯವಿದೆ. ಮಕ್ಕಳ ಸಂತೆಯಲ್ಲಿ ಮಕ್ಕಳು ತಾವು ತಂದತರಕಾರಿ, ವಸ್ತುಗಳ ಮಾರಾಟ, ಲೆಕ್ಕ ನಿರ್ವಹಣೆ,ಲಾಭ, ನಷ್ಟದ ಲೆಕ್ಕಾಚಾರ ಅರಿತುಕೊಳ್ಳಲುಸಹಕಾರಿಯಾಗಿದೆ. ಇದರಿಂದ ಮಕ್ಕಳುಸಮಾಜದಲ್ಲಿ ಬದುಕುವ ಪಾಠ ಕಲಿಯುತ್ತಾರೆ ಎಂದು ಹೇಳಿದರು.
ಸ್ವಾವಲಂಬನೆ ಸಾಧಿಸಿ: ಮಕ್ಕಳ ಸಂತೆಯೂ ಗಣಿತ ಕಲಿಯುವ ಒಂದು ಭಾಗವಾಗಿದೆ, ಇಲ್ಲಿತಾವು ವ್ಯಾಪಾರಕ್ಕೆ ಹಾಕಿದ ಬಂಡವಾಳ, ಪಡೆದಲಾಭ ನಷ್ಟಗಳ ಅರಿವು ಪಡೆಯುತ್ತಾರೆ. ಇದು ಮುಂದಿನ ದಿನಗಳಲ್ಲಿ ಅವರ ಸ್ವಾವಲಂಬನೆಗೂಸಹಕಾರಿ ಆಗುತ್ತದೆ. ಮಕ್ಕಳು ದೈನಂದಿನಬದುಕಿನಲ್ಲಿ ಅಗತ್ಯವಿರುವ ಜ್ಞಾನವನ್ನು ಕಲಿತಾಗಮಾತ್ರ ಸಮಾಜದಲ್ಲಿ ಸ್ವಾವಲಂಬನೆ ಸಾಧಿಸಿಪ್ರತಿಯೊಂದು ಸಮಸ್ಯೆ ಎದುರಿಸುವ ಶಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ವಸ್ತುಗಳ ಬಗ್ಗೆ ಗಮನ ಹರಿಸಿ: ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ತಂದೆ,ತಾಯಿ ಮನೆಗೆ ಅಗತ್ಯ ವಸ್ತು ತರಲು ಅಂಗಡಿಗೆಕಳುಹಿಸಿದಾಗ ಹೇಗೆ ನಿಭಾಯಿಸಬೇಕು ಎಂಬಅನುಭವವೂ ಆಗುತ್ತದೆ. ಯಾವುದೇ ವಸ್ತುಖರೀದಿಸಿದಾಗ ಅದರ ತಯಾರಿಕಾ ದಿನ,ಅದನ್ನು ಎಂದಿನವರೆಗೂ ಬಳಸಲು ಯೋಗ್ಯಎಂಬುದರ ಅರಿವು ಪಡೆಯಬೇಕು ಎಂದು ಹೇಳಿದರು.
ಮಕ್ಕಳ ಸಂತೆಯಲ್ಲಿ ಶಾಲಾ ಮಕ್ಕಳು ಇಂದುಸೊಪ್ಪು, ಕ್ಯಾರೆಟ್, ಬಿಟ್ರೂಟ್, ಬೀನ್ಸ್,ಸೌತೇಕಾಯಿ ಮತ್ತಿತರ ತರಕಾರಿಗಳನ್ನು ಮಾರಿಗಮನ ಸೆಳೆದ ಅವರು, ಕೆಲವು ಮಕ್ಕಳು ಫೂÅಟ್‌ಸಲಾಡ್, ಬೇಲ್‌ಪುರಿ, ಮಸಾಲೆಪುರಿ ತಂದುಮಾರಿದರೆ ಕೆಲವು ಹೆಣ್ಣು ಮಕ್ಕಳು ಫಲಾವ್,ಚಿತ್ರಾನ್ನ ಪಡ್ಡು, ಜಾಮೂನು ತಂದು ಮಾರಿ ಗಮನ ಸೆಳೆದರು.
ವ್ಯಾಪಾರ ವಹಿವಾಟಿನಲ್ಲಿ ಗಮನ ಸೆಳೆದ,ಲಾಭ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿನೀಡಲಾಯಿತು. ಪೋಷಕರು, ಶಿಕ್ಷಕರು ಮಕ್ಕಳುತಂದಿದ್ದ ಉತ್ಪನ್ನಗಳನ್ನು ಖರೀದಿಸಿದರು.ಮಕ್ಕಳ ಸಂತೆ ಉಸ್ತುವಾರಿಯನ್ನು ಶಿಕ್ಷಕವೆಂಕಟರೆಡ್ಡಿ ವಹಿಸಿದ್ದು, ಎಸ್‌ಡಿಎಂಸಿ ಸದಸ್ಯರಾಮಚಂದ್ರಪ್ಪ, ಜಮುನಾ ಶಿಕ್ಷಕರಾದಸಚ್ಚಿದಾನಂದಮೂರ್ತಿ, ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು,ಡಿ.ಚಂದ್ರಶೇಖರ್, ನೇತ್ರಮ್ಮ, ದಾಕ್ಷಾಯಿಣಿ, ಜಮುನಾ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.