ತಾಲೂಕು ಕಚೇರಿ ಲಂಚಮುಕ್ತಗೊಳಿಸಿ
Team Udayavani, Mar 10, 2018, 5:04 PM IST
ಕೋಲಾರ: ಬಂಗಾರಪೇಟೆ ತಹಶೀಲ್ದಾರ್ ಆಗಿ ಕೆಎಎಸ್ ಅಧಿಕಾರಿಯನ್ನೇ ನೇಮಕ ಮಾಡಬೇಕು ಮತ್ತು ತಾಲೂಕು
ಕಚೇರಿ ಹಾಗೂ ಇತರೆ ಕಚೇರಿಗಳನ್ನು ಲಂಚಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಜನಾಧಿಕಾರ ಸಂಘಟನೆ ಮುಖಂಡರು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಈಗಾಗಲೇ ಸಂಘಟನೆಯಿಂದ ಈ ವಿಷಯದ ಬಗ್ಗೆ ಪ್ರತಿಭಟನೆ ನಡೆಸಿದ್ದು, ತಮ್ಮ ಗಮನಕ್ಕೂ ತಂದಿದ್ದೇವೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ಸರ್ಕಾರದ ಆದೇಶವಿಲ್ಲದೆ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಯಾಗದೆ ಕಚೇರಿ ಮುಂಭಾಗದಲ್ಲಿ ನಾಮಫಲಕ ಹಾಕಿದ್ದಾರೆ. ಈ ಮೂಲಕ ಇಲ್ಲಿನ ತಾಲೂಕು ಅಧಿಕಾರಿಗಳು ಪ್ರತಿಭಟನೆ ಮತ್ತು ಸಾರ್ವಜನಿಕರ ಹಕ್ಕುಗಳನ್ನು ಮೊಟುಕುಗೊಳಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಫೆ.24 ರಂದು ಕಚೇರಿ ಮುಂಭಾಗದಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ
ಕೆಲವರಿಗೆ ಚೀಟಿ ವಿತರಿಸಿ, ಒಂದು ವಾರದೊಳಗೆ ಉಳಿದ ಫಲಾನುಭವಿಗಳಿಗೆ ವಿತರಿಸುವುದಾಗಿ ಘೋಷಣೆ
ಮಾಡಿದ್ದಾರೆ. ಆದರೆ, ಇದುವರೆಗೂ ಸಾಗುವಳಿ ಚೀಟಿಗಳನ್ನು ನೀಡಿಲ್ಲ. ಈ ಬಗ್ಗೆ ತಾವು ಗಮನ ಹರಿಸಿ ಕಚೇರಿಗೆ ಗ್ರಾಮಿಣ ಪ್ರದೇಶದಿಂದ ರೈತರು ಅಲೆದಾಡುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು. ತಾಲೂಕು ಕಚೇರಿಯ ಕೆಲವು ಅಧಿಕಾರಿಗಳು ಸುಮಾರು ವರ್ಷಗಳಿಂದ ಇದೇ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡದೆ, ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಮೂರು ವರ್ಷಕ್ಕೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಬೇರುಬಿಟ್ಟಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಜನಸಾಮಾನ್ಯರಿಗೆ ಹಾಗೂ ಪ್ರಗತಿಪರ ಸಂಘಟನೆಗಳಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಕಚೇರಿ ಮುಂಭಾಗದಲ್ಲಿ ಅವಕಾಶ ಮಾಡಿಕೊಡಬೇಕು. ಲಂಚಮುಕ್ತ ತಾಲೂಕು ಕಚೇರಿ ಎಂದು ಪ್ರತಿ ಇಲಾಖೆ ಮುಖ್ಯಸ್ಥರ ಕೊಠಡಿ ಮುಂದೆ ಫಲಕ ಹಾಕಬೇಕೆಂದು ಒತ್ತಾಯಿಸಿದರು. ನಿಯೋಗದಲ್ಲಿ ಜನಾಧಿಕಾರ ಸಂಘಟನೆ ಜಿಲ್ಲಾಧ್ಯಕ್ಷ
ಕೆ.ರಾಮಮೂರ್ತಿ, ತಾಲೂಕು ಅಧ್ಯಕ್ಷ ಎಸ್.ಕೆ.ಜಗದೀಶ್, ಗ.ರಾಮಕ್ಕ, ನಾರಾಯಣಮ್ಮ, ಕವಿತಾ ಮುಂತಾದವರು
ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.