ಸರ್ಕಾರಿ ಜಾಗದಲ್ಲಿ ಮನೆ, ಶೆಡ್ ನಿರ್ಮಾಣ; ತೆರವಿಗೆ ತಾಕೀತು
ಪುರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿದ ಆಡಳಿತಾಧಿಕಾರಿಯೂ ಆದ ಎಸಿ ಸೋಮಶೇಖರ್
Team Udayavani, Jan 23, 2020, 5:19 PM IST
ಮಾಲೂರು: ಆಡಳಿತಾಧಿಕಾರಿಯೂ ಆದ ಎಸಿ ಸೋಮಶೇಖರ್ ಪುರಸಭೆಗೆ ದಿಢೀರ್ ಭೇಟಿ ನೀಡಿ, ಸಾರ್ವಜನಿಕರ ದೂರಿನ ಅನ್ವಯ ಅಕ್ರಮಗಳ ತನಿಖೆಗೆ ಆದೇಶ ಹೊರಡಿಸಿದರು. ಈ ವೇಳೆ ಜನರು ನೀಡಿದ್ದ ದೂರಿನ ಮೇಲೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕೆಲ ಬಡಾ ವಣೆಯಲ್ಲಿನ ಸಿಎ ನಿವೇಶನವನ್ನು ಅಕ್ರಮ ಖಾತೆ ಮಾಡಿ, ಪರಭಾರೆ ಮಾಡಿರುವುದರ ಜೊತೆಗೆ ಕೆಲವು ಪ್ರಭಾವಿಗಳು ಸರ್ಕಾರಿ ಜಾಗ ಅತಿಕ್ರಮಣ ಮಾಡಿ
ಮನೆ, ಶೆಡ್ ನಿರ್ಮಿಸಿ ಕೊಂಡಿ ರುವುದಾಗಿ ದೂರು ಬಂದಿವೆ ಎಂದು ಹೇಳಿದರು.
ಮೂರು ಪ್ರಕರಣ ಇತ್ಯರ್ಥಪಡಿಸಿ: ಕೆಲವು ಖಾಸಗಿ ವ್ಯಕ್ತಿಗಳು 9000 ಚದರ ಅಡಿಯಷ್ಟು
ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು, ವಹಿವಾಟು ನಡೆಸುತ್ತಿರುವುದಾಗಿ, ಮುಖ್ಯಾಧಿಕಾರಿಗಳ ವಸತಿ ಗೃಹವನ್ನೂ ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿಕೊಂಡು ಶೆಡ್ ನಿರ್ಮಿಸಿದ್ದಾರೆ ಎಂದು ಜನರು ದೂರು ನೀಡಿದ್ದಾರೆ. ಈ ಮೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪುರಸಭಾ ಮುಖ್ಯಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ತೆರವು: ಈ ಕೂಡಲೇ ಎರಡು ಅಧಿಕಾರಿಗಳ ತಂಡ ರಚಿಸಿ ಅಕ್ರಮ ಸಿಎ ನಿವೇಶನಗಳ
ಪರಭಾರೆ, ಸ್ವಾಧೀನದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ತಾವು ಸಹ ಅಕ್ರಮ ಶೆಡ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ವರದಿ ಮಂಡಿಸಿ: ಅದೇ ರೀತಿಯಲ್ಲಿ ಮಾಲೂರು ಪಟ್ಟಣದಲ್ಲಿ ಕಂದಾಯ ಇಲಾಖೆಯ ಕೆಲವು ಭೂಮಿಗಳಲ್ಲಿ ಅಕ್ರಮ ಶೆಡ್‌ಗಳ ನಿರ್ಮಾಣ, ರಾಜಕಾಲುವೆಗಳ ಒತ್ತುವರಿ, ಪಟ್ಟಣದ ಪ್ರಮುಖ ರಸ್ತೆಗಳ ಚರಂಡಿಗಳ ಮೇಲೆ ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿ ಇಟ್ಟಿರುವುದು ಕಂಡು ಬಂದಿದೆ. ಮೂರು ದಿನಗಳ ಒಳಗಾಗಿ ವರದಿ ಮಂಡಿಸಿ, ತೆರವು ಮಾಡುವುದಾಗಿ ತಿಳಿಸಿದರು.
ಬೀಗ ಮುದ್ರೆ: ಪುರಸಭೆಗೆ ಬಾಡಿಗೆ ಮತ್ತು ತೆರಿಗೆ ಪಾವತಿಸದ ಕಾರಣ, 25 ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಇನ್ನೂ ಕೆಲವು ಕಲ್ಯಾಣ ಮಂಟಪಗಳು, ಉದ್ಯಮಗಳು, ತೆರಿಗೆ ಬಾಕಿ ಉಳಿಸಿ ಕೊಂಡಿರುವ ಕಾರಣ, ಶೀಘ್ರ ಬೀಗ ಮುದ್ರೆ ಹಾಕುವ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.
ಕಂದಾಯ ಇಲಾಖೆಯಿಂದ ತಾಲೂಕಿನ ಆರು ಗ್ರಾಮಗಳನ್ನು ಪೋಡಿ ಮುಕ್ತ ಮಾಡಲು ಮುಂದಾಗಿದ್ದು, ಕೆಲವು ರಾಜಕಾಲುವೆಗಳ ಒತ್ತುವರಿ ತೆರವಿಗೂ ಕಠಿಣ ಕ್ರಮ ಅನುಸರಿಸಲಾಗುತ್ತಿದೆ. ಅದರಂತೆ ಬೈರನಹಳ್ಳಿಯ ರಾಜಕಾಲುವೆ, ಕೆಲವು ಗೋಕುಂಟೆಗಳ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು. ಖಾಸಗಿ ಇಡುವಳಿ
ದಾರ ರೈತರ ಪಿ ನಂಬರ್ ತೆಗೆಯುವ ಕಾರ್ಯವಾಗಿ ತಾಲೂಕಿನ 90 ಪ್ರಕರಣ ಪಟ್ಟಿ ಮಾಡಿ ಸರ್ವೆ ಇಲಾಖೆಯ ಅಧಿಕಾರಿ ಗಳೊಂದಿಗೆ ದುರಸ್ತಿ ಮಾಡಿಸಲಾಗುತ್ತಿದೆ ಎಂದರು. ಮುಖ್ಯಾಧಿಕಾರಿ ಪ್ರಸಾದ್ ಮಾತನಾಡಿ, ಎಸಿ ಆದೇಶದಂತೆ ಎಲ್ಲಾ ಅಕ್ರಮಗಳ ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಮಂಡಿಸ ಲಾಗುವುದು. ಅಕ್ರಮಗಳ ತೆರವಿಗೆ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.