ಮಾವು ಬೆಳೆಗಾರರು ಬೇಸಿಗೆ ಬೇಸಾಯ ಕ್ರಮ ಅನುಸರಿಸಲಿ
Team Udayavani, May 11, 2019, 11:16 AM IST
ಕೋಲಾರ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಗಾರರಿದ್ದು, ಕಾಲಕ್ಕೆ ತಕ್ಕಂತೆ ಮಾವು ಬೆಳೆ ನಿರ್ವಹಣೆ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ರೋಗ ಮತ್ತು ಕೀಟಗಳ ಬಾಧೆ, ಇಳುವರಿಯಲ್ಲಿ ಕುಂಠಿತ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಫಲಾನುಭವಿಗಳು ರಕ್ಷಣಾ ಕ್ರಮ ಕೈಗೊಳ್ಳಬೇಕಾಗಿದೆ.
ಬೇಸಿಗೆಯಲ್ಲಿ ಎರಡು ಬಾರಿ ನೇಗಿಲಿನಿಂದ ಆಳವಾಗಿ ಉಳುಮೆ ಮಾಡುವುದು, ಭೂಮಿಯನ್ನು ಸಮತಟ್ಟು ಮಾಡುವುದು. ಹೆಚ್ಚಿನ ಸಾಂಧ್ರತೆಯುಳ್ಳ ನೆಡುತೋಪುಗಳಿಗಾಗಿ ಸಾಲುಗಳು, ಸಸ್ಯಗಳನ್ನು 5 ಮೀಟರ್ ಅಂತರದಲ್ಲಿ ನೆಡಲು, ಅಗೆಯುವ ಗುಂಡಿಗಳ ಹೊಂದಾಣಿಕೆ ಮಾಡುವುದು ಮತ್ತು ಗೂಟದಿಂದ ಗುರುತು ಮಾಡುವುದು ಹಾಗೂ ಸಾಮಾನ್ಯ ನೆಡುತೋಪುಗಳಿಗೆ 9 ಮೀ. ಅಂತರ ನೀಡಬೇಕು. ಗುಂಡಿಯ ಗಾತ್ರ, ಅಳತೆ 90X-90X90 ಸೆಂ.ಮೀ.ಇರಬೇಕು.
ಗುಂಡಿ ಅಗೆಯುವಾಗ ಮುನ್ನೆಚ್ಚರಿಕೆ ಕ್ರಮ: ಅಗೆದ (1 ಅಡಿ) ಮೇಲ್ಭಾಗದ ಮೇಲ್ಪದರದ ಮಣ್ಣನ್ನು ಎಡಭಾಗದಲ್ಲಿ ಇರಿಸಬೇಕು. ಅಗೆದ ಗುಂಡಿಯನ್ನು ತುಂಬುವ ಮೊದಲು ಮಣ್ಣಿನಿಂದ ಬರುವ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸೂಯನ ಕಿರಣಗಳಿಗೆ ಗುಂಡಿಗಳನ್ನು 2 ವಾರಗಳವರೆಗೆ ತೆರೆದಿಡಬೇಕು.
ಸರ್ಕಾರದ ವಿಶ್ವಾಸಾರ್ಹ ನರ್ಸರಿಗಳಿಂದ, ತೋಟಗಾರಿಕೆ ಇಲಾಖೆ ಶಿಫಾರಸ್ಸು ಮಾಡಿದ ನರ್ಸರಿಗಳಿಂದ ಸಸಿ ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು. ಹಣ್ಣು ಬಿಡುವ ಮರಗಳಿಂದ ಮಾವಿನ ಹಣ್ಣುಗಳನ್ನು ಸರಿಯಾಗಿ ಪಕ್ವವಾದ ನಂತರ ಸುಧಾರಿತ ಕ್ರಮಗಳನ್ನು ಅನುಸರಿಸುವುದರೊಂದಿಗೆ ಕಟಾವು ಮಾಡಬೇಕಿದೆ.
ಕೊಯ್ಲೋತ್ತರ ಕ್ರಮ ಕಡ್ಡಾಯ: ಹಳೆಯ ತೋಟಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಇದ್ದಲ್ಲಿ, ಹೀಲರ್ ಕಮ್ ಸೀಲರ್ ಚಿಕಿತ್ಸೆಯನ್ನು ನೀಡಬೇಕು. ಪ್ಯಾಕ್‌ಹೌಸ್ ಹೊಂದಿರುವ ರೈತರು ಕೊಯ್ಲು ಮುಂಚಿನ ಹಾಗೂ ಕೊಯ್ಲೋತ್ತರ ಕ್ರಮ ಕಡ್ಡಾಯವಾಗಿ ಪಾಲಿಸಬೇಕು.
ಹಣ್ಣುಗಳನ್ನು ಮಾಗಿಸಲು ಐಐಎಚ್ಆರ್, ಬೆಂಗಳೂರು ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಮಾವು ಮಾಗಿಸುವ ಘಟಕಗಳನ್ನು ಉಪಯೋಗಿಸಿಕೊಳ್ಳುವುದು, ಹಣ್ಣು ನೊಣ ಮತ್ತು ಚಿಬ್ಬು ರೋಗದ ಹಾನಿಯನ್ನು ತಡೆಗಟ್ಟುವ ಸಲುವಾಗಿ ಐಐಎಚ್ಆರ್, ಬೆಂಗಳೂರಿಂದ ಶಿಫಾರಸ್ಸು ಮಾಡಿದಂತೆ ಕೊಯ್ಲು ಮಾಡಲಾದ ಹಣ್ಣುಗಳನ್ನು ಬಿಸಿ ನೀರಿನಲ್ಲಿ ಉಪಚರಿಸಬೇಕು.
ಕೊಯ್ಲು ಮಾಡಲಾದ ಹಣ್ಣುಗಳನ್ನು ವಿಂಗಡಣೆ ಮತ್ತು ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವುದು. ದೂರದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಪ್ಯಾಕಿಂಗ್ ಸಾಮಗ್ರಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಪ್ಯಾಕಿಂಗ್‌ಗಳಲ್ಲಿ ಕಳುಹಿಸಿಕೊಡುವುದು, ಮಾವಿನ ಹಣ್ಣಿನ ಹಣ್ಣು ನೊಣದ ಮೋಹಕ ಬಲೆಯಲ್ಲಿ ಮೋಹಕ ಧಾತುವನ್ನು ಬದಲಿಸುವುದು, ಬಿದ್ದ ಹಣ್ಣುಗಳನ್ನು ಸಂಗ್ರಹಿಸುವುದು ಹಾಗೂ ನಾಶಪಡಿಸುವುದು, ಮಾವಿನ ಹಣ್ಣಿನ ಹಣ್ಣು ನೊಣದ ಆಕರ್ಷಣೆಗೆ ಬೇಟ್ ಪದಾರ್ಥವನ್ನು ಸಿಂಪಡಿಸುವುದು ಮಾಡಬೇಕು.
ಮಾಹಿತಿಗೆ ದೂ. 7829512236, ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ ಸಂಪರ್ಕಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.