ಪ್ರವಾಸಿಗರ ಆಕರ್ಷಣೆ ಮಾರ್ಕಂಡೇಯ ಡ್ಯಾಂ
Team Udayavani, Dec 8, 2021, 2:57 PM IST
ಮಾಲೂರು: ಇತ್ತೀಚಿಗೆ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವು ಕೆರೆಗಳು ತುಂಬಿ ಹರಿಯುತ್ತಿವೆ. ಜೊತೆಗೆ ಮಾರ್ಕಂಡೇಯ ಜಲಾಶಯವೂ ಮೈತುಂಬಿದ್ದು, ಈಗ ಜಿಲ್ಲೆಯ ಜನರ ಪಾಲಿಗೆ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ಅವಧಿಯಲ್ಲಿ 1940ರಲ್ಲೇ 4.35 ಲಕ್ಷ ರೂ.ನಲ್ಲಿ ನಿರ್ಮಿಸಿರುವ ಈಜಲಾಶಯ 847 ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸುತ್ತದೆ.ಜಲಾಶಯವು ತಾಲೂಕಿನಲ್ಲಿದ್ದರೂ ಬಹುಪಾಲು ಬಂಗಾರಪೇಟೆ ಭಾಗಕ್ಕೆ ನೀರು ಒದಗಿಸುತ್ತಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಜಲಾಶಯವು ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿದ್ದೇ ಇಲ್ಲ. ಪ್ರಸಕ್ತ ಸಾಲಿನಲ್ಲಿ ತುಂಬಿ ಕೋಡಿಹರಿಯುತ್ತಿರುವ ಕಾರಣ, ಜಿಲ್ಲೆಯ ವಿವಿಧ ಭಾಗಗಳಿಂದ ಜನರುಆಗಮಿಸಿ ಪ್ರಕೃತಿಯ ಸೊಬಗು ಸವಿಯಲು, ಡ್ಯಾಂನತ್ತ ಆಗಮಿಸುತ್ತಿದ್ದಾರೆ. ಕುಟುಂಬ ಸಹಿತ ಆಗಮಿಸುತ್ತಿರುವ ಜನರು, ಸ್ಥಳದಲ್ಲಿಯೇ ಅಡುಗೆ ಮಾಡಿ, ಕೋಡಿ ನೀರಿನಲ್ಲಿ ಮಿಂದು ಸಂತಸ ಪಡುತ್ತಿದ್ದಾರೆ.
ಮಲೆನಾಡಿನ ನೆನಪು: ಇಂತಹ ನೀರಿನ ವೈಯ್ನಾರ, ಹಿತವಾದ ವಾತಾವರಣ ಸವಿಯಲು ಜಿಲ್ಲೆಯ ಜನರು ಮಲೆನಾಡು, ಕರಾವಳಿಭಾಗಕ್ಕೆ ತೆರಳುತ್ತಿದ್ದರು. ಆದರೆ, ಈಗ ತಾಲೂಕಲ್ಲೇ ಮಲೆನಾಡುನೆನಪಿಸುತ್ತಿದೆ. ಮಳೆಯಿಂದ ಎಲ್ಲೆಡೆ ನೀರು, ಹಸಿರು ಆವರಿಸಿದ್ದು,ಹಿತವಾದ ವಾತಾವರಣ ಬಿಸಿಲಿನಲ್ಲೇ ಹೆಚ್ಚು ಸಮಯ ಕಳೆದಿದ್ದ ಜನರಿಗೆ ತಂಪು ನೀಡುತ್ತಿದೆ.
ತಲೆ ಎತ್ತಿದ ಅಂಗಡಿ ಮುಂಗಟ್ಟು: ಜನ ಇದ್ದ ಕಡೆ ಜಾತ್ರೆ ಎಂಬಂತೆ ಮಾರ್ಕಂಡೇಯ ಜಲಾಶಯದ ವಿಹಂಗಮ ನೋಟ ಸವಿಯಲು ಜನ ಆಗಮಿಸುತ್ತಿದ್ದಂತೆ ಸುತ್ತಮುತ್ತಲಿನ ವ್ಯಾಪಾರಿಗಳು ಸ್ಥಳದಲ್ಲೇಕುರುಕಲು ತಿಂಡಿ, ತಂಪು ಪಾನೀಯ, ಟೀ, ಕಾμ ಹೀಗೆ ವಿವಿಧಬಗೆಯ ತಿನಿಸುಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಜೊತೆಗೆ ಕೆಲವರು ಸ್ಥಳದಲ್ಲಿಯೇ ಸಿಗುವ ಮೀನು ಹಿಡಿದು, ಅಲ್ಲಿಯೇ ಬೇಯಿಸಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ.
ಒಂದೆರಡು ಮಾರ್ಗಗಳಿಗೆ ನೀರು: ನಂತರ ಶಾಸಕ ಕೆ.ವೈ.ನಂಜೇಗೌಡರ ಅಧಿಕಾರದ ಅವಧಿಯಲ್ಲಿ ಜಲಾಶಯಕ್ಕೆ ಅರ್ಧದಷ್ಟುನೀರು ಬಂದ ಕಾರಣ, ಯೋಜನೆಗಾಗಿಅಳವಡಿಸಿದ್ದ ಯಂತ್ರಗಳನ್ನು ನವೀಕರಿಸಿ ಹಳ್ಳಿಗಳಿಗೆ ನೀರು ಪೂರೈಸುವ ಕೆಲಸ ಆರಂಭಿಸಲಾಯಿತು. ಯೋಜನೆಯಂತೆ ಎಲ್ಲಾ ಹಳ್ಳಿಗಳಿಗೂನೀರು ಪೂರೈಸಲು ಸಾಧ್ಯವಾಗಿಲ್ಲ, ಕೇವಲಒಂದೆರಡು ಮಾರ್ಗಗಳಿಗೆ ಮಾತ್ರ ಜಲಾಶಯದ ನೀರು ಪೂರೈಕೆ ಮಾಡಲು ಸಾಧ್ಯವಾಗಿದೆ.
ನೀರು ಸಿಗುವ ಸಾಧ್ಯತೆ ಬಗ್ಗೆ ಯೋಚಿಸಿ: ಮತ್ತೆ ನೀರು ಖಾಲಿ ಆದ ಕಾರಣ ಕುಡಿಯುವ ನೀರಿನ ಯೋಜನೆ ಸಕಾರವಾಗಲಿಲ್ಲ. ಪ್ರಸ್ತುತ ಜಲಾಶಯವು ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ. ಮತ್ತೆಕುಡಿಯುವ ನೀರಿನ ಯೋಜನೆಗಾಗಿ ಅಗತ್ಯ ಸಿದ್ಧತೆ ನಡೆಸಿದಲ್ಲಿತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಸಿಗುವ ಸಾಧ್ಯತೆ ಬಗ್ಗೆಯೋಚಿಸಬೇಕಾಗಿದೆ. ಇತ್ತೀಚಿನ ವರ್ಷದಲ್ಲಿ ಕೆ.ಸಿ. ವ್ಯಾಲಿ ನೀರುಕೆರೆಗಳಿಗೆ ತುಂಬಿಸಿರುವ ಕಾರಣಗಳಿಂದ ಅಂತರ್ಜಲವೂ ಹಂತವಾಗಿ ವೃದ್ಧಿಯಾಗುತ್ತಿದೆ. ಕುಡಿಯುವ ನೀರಿನ ಗಂಭೀರ ಸಮಸ್ಯೆಯ ತೀವ್ರತೆ ಕಡಿಮೆ ಆಗುತ್ತಿದೆ.
ಕುಡಿಯುವ ನೀರಿನ ಜಲಾಶಯ :
ತಾಲೂಕಿನ ಮಾರ್ಕಂಡೇಯ ಜಲಾಶಯ ಸೂಕ್ಷ್ಮವಾಗಿ ಗಮನಿಸಿದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ, ತಮ್ಮ ಅಧಿಕಾರದ ದಿನಗಳಲ್ಲಿ 28 ಕೋಟಿ ರೂ.ನಲ್ಲಿ ತಾಲೂಕಿನ 158 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಿ ಬಹುತೇಕ ಕಾಮಗಾರಿಪೂರ್ಣಗೊಳಿಸಿದ್ದಾರೆ. ಚುನಾವಣೆ ವೇಳೆಗೆ ಜಲಾಶಯದಲ್ಲಿನೀರಿಲ್ಲದ ಕಾರಣ, ಯೋಜನೆಯು ಸಕಾರವಾಗದೇ ಹಲವು ಬಗೆಯ ಟೀಕೆ ಟಿಪ್ಪಣಿಗಳಿಗೂ ಕಾರಣವಾಗಿತ್ತು.
ಅಪಾಯ ಕಟ್ಟಿಟ್ಟ ಬುತ್ತಿ :
ಅಪರೂಪ ಎನಿಸುವ ನೀರನ್ನು ಕಂಡ ಕೂಡಲೇ ಅನೇಕರು ಮೈಮರೆತು ಈಜಲು ಮುಂದಾಗುತ್ತಿರುವುದು ಅಪಾಯಕ್ಕೆ ನಾಂದಿಯಾಗುತ್ತಿದೆ. ಕೋಡಿ ಹರಿಯುವ ಸ್ಥಳದಲ್ಲಿ ಅಪಾಯ ಕಡಿಮೆಇದ್ರೂ, ಕೆಲವು ಪಡ್ಡೆ ಹುಡುಗರು ಜಲಾಶಯದ ಕಟ್ಟೆ ಮೇಲಿಂದನೀರಿಗೆ ಜೀಗಿಯುವುದು, ಈಜುವುದು ಮಾಡುತ್ತಿದ್ದಾರೆ. ಇದರಿಂದಸಾವು ಖಚಿತ ಎನ್ನುವಂತಾಗಿದೆ. ಕಳೆದ ವಾರ ಸಾರಿಗೆ ನೌಕರರೊಬ್ಬರು ನೀರಿನಲ್ಲಿ ಮುಳುಗಿ, ಮೃತಪಟ್ಟಿದ್ದರು. ಕೆಲ ದಿನ ಪೊಲೀಸರ ಕಾವಲು ಹಾಕಲಾಗಿತ್ತು. ಪ್ರಸ್ತುತ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಇನ್ನೂ ಕೆಲವು ದಿನಗಳು ಪೊಲೀಸ್ ಕಾವಲು ಅಗತ್ಯ ಎನಿಸುತ್ತಿದೆ.
-ಎಂ.ರವಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.