ಸಚಿವ ಎಂಟಿಬಿಗೆ ಕೋಲಾರ ಜಿಲ್ಲಾ ಉಸ್ತುವಾರಿ
Team Udayavani, May 3, 2021, 3:18 PM IST
ಕೋಲಾರ: ಅಂತೂ ಇಂತೂ ಬಿಜೆಪಿ ಸರಕಾರಕೋಲಾರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿಹೊಸಕೋಟೆಯ ಎಂ.ಟಿ.ಬಿ.ನಾಗರಾಜ್ ಅವರನ್ನುನೇಮಕ ಮಾಡಿದ್ದು,ಸಚಿವರ ಮುಂದೆ ನಾಗಾಲೋಟದಲ್ಲಿ ಹರಡುತ್ತಿರುವ ಕೊರೊನಾನಿಯಂತ್ರಿಸುವ ಸವಾಲುಇದೆ.ಎಂ.ಟಿ.ಬಿ.ನಾಗರಾಜ್‌ಅಥವಾ ಅರವಿಂದಲಿಂಬಾವಳಿ ಕೋಲಾರಜಿಲ್ಲೆಯ ಉಸ್ತುವಾರಿಹೊಣೆ ಹೊತ್ತುಕೊಳ್ಳುತ್ತಾರೆಂಬ ಮಾಹಿತಿ ಇತ್ತಾದರೂ,ಪ್ರಸ್ತುತ ಎಂ.ಟಿ.ಬಿ.ನಾಗರಾಜ್ ಕೋಲಾರ ಜಿಲ್ಲೆಗೆಉಸ್ತುವಾರಿ ಸಚಿವರಾಗಿ ನೇಮಕವಾಗಿ ಭಾನುವಾರಆದೇಶ ಹೊರಬಿದ್ದಿದೆ.
ಸಚಿವ ನಾಗರಾಜ್‌ರಿಗೆ ಜಿಲ್ಲೆಹೊಸತಲ್ಲವಾದರೂ, ಸದ್ಯದ ಪರಿಸ್ಥಿತಿಯಲ್ಲಿ ಅವರಮುಂದೆ ಬೆಟ್ಟದಂತೆ ಬೆಳೆದು ನಿಂತಿರುವ ಕೊರೊನಾಸವಾಲು ನಿಂತಿದೆ.
ಕೊರತೆಗಳಿಲ್ಲ: ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳುಕೋಲಾರ ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಗೆಕೊರತೆಗಳಿಲ್ಲವೆಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಸಭೆಯ ಮೂಲಕ ಸರಕಾರಕ್ಕೆಸಂದೇಶ ರವಾನಿಸಿದರೆ, ವಾಸ್ತವವಾಗಿ ಜನರುಕೊರೊನಾ ಚಿಕಿತ್ಸೆಗಾಗಿ ಪರದಾಡುತ್ತಿರುವ ಚಿತ್ರಣಆಸ್ಪತ್ರೆಗಳ ಮುಂಭಾಗ ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಚಿಕಿತ್ಸೆಗಾಗಿ 2620ಬೆಡ್‌ಗಳು ಲಭ್ಯವಿದೆಯೆಂಬ ಮಾಹಿತಿಯನ್ನುಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣಮುಂದೆ ಜಿಲ್ಲಾ ಆರೋಗ್ಯ ಇಲಾಖೆ ಇಟ್ಟಿದೆ. ಈ ಪೈಕಿ1080 ಬೆಡ್‌ಗಳು ಸರ್ಕಾರಿ ಆಸ್ಪತ್ರೆಗಳಲ್ಲೂ, 1540ಬೆಡ್‌ಗಳು ಖಾಸಗಿ ಆಸ ³ತ್ರೆಗಳಲ್ಲಿಯೂ ಲಭ್ಯವಿದೆ.
ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ 205 ಮತ್ತುಖಾಸಗಿ ಆಸ್ಪತ್ರೆಗಳಲ್ಲಿ 60 ಆಮ್ಲಜನಕ ಸಹಿತ ಬೆಡ್‌ಗಳು ಸೇರಿ 265 ಆಮ್ಲಜನಕ ಸಹಿತ ಬೆಡ್‌ಗಳು ಮತ್ತುಸರ್ಕಾರಿ ಆಸ್ಪತ್ರೆಯಲ್ಲಿ 110, ಖಾಸಗಿ ಆಸ್ಪತ್ರೆಯಲ್ಲಿ59 ಸೇರಿ 169 ವೆಂಟಿಲೇಟರ್‌ಗಳು ಕೋಲಾರಜಿಲ್ಲೆಯಲ್ಲಿವೆ. ಆದರೆ, ಇವುಗಳಲ್ಲಿ ಸಿಬ್ಬಂದಿ ಕೊರತೆ,ತಾಂತ್ರಿಕ ಮಾಹಿತಿ ಕೊರತೆ ಇತ್ಯಾದಿ ಸಮಸ್ಯೆಗಳಿಂದ ಲಭ್ಯ ಸಲಕರಣೆಗಳು ಪೂರ್ಣ ಪ್ರಮಾಣದಲ್ಲಿಕೆಲಸ ಮಾಡುತ್ತಿಲ್ಲವಾದ್ದರಿಂದ ಕೊರೊನಾಸೋಂಕಿತರಿಗೆ ಎಟುಕುತ್ತಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ.
3811 ಸೋಂಕಿತರು: ಕೋಲಾರ ಜಿಲ್ಲೆಯಲ್ಲಿ ಮೇ1ಕ್ಕೆ ಒಟ್ಟು 3811 ಮಂದಿ ಕೊರೊನಾ ಸೋಂಕಿತರುಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಪೈಕಿ ಕೋವಿಡ್‌ಕೇರ್ ಸೆಂಟರ್‌ನಲ್ಲಿ 100, ಕೋವಿಡ್ ಹೆಲ್ತ್ ಸೆಂಟರ್‌ನಲ್ಲಿ 200, ಕೋವಿಡ್ ಕೇರ್ ಆಸ್ಪತ್ರೆಯಲ್ಲಿ 300 ರಿಂದ400 ಮತ್ತು ಮನೆಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಅಂಕಿ ಅಂಶಗಳಪ್ರಕಾರ ಆಸ್ಪತ್ರೆಗಳಿಗಿಂತಲೂ ಮನೆಯಲ್ಲಿದ್ದು ಚಿಕಿತ್ಸೆಪಡೆದುಕೊಳ್ಳುತ್ತಿರುವವರ ಸಂಖ್ಯೆ ದೊಡ್ಡದಿದೆ.ಹಾಗಾದರೆ ಕೋವಿಡ್ ಕೇರ್, ಆಸ್ಪತ್ರೆಗಳಲ್ಲಿ ದೊಡ್ಡಸಂಖ್ಯೆಯ ಬೆಡ್‌ಗಳು ಖಾಲಿ ಇರಬೇಕಾಗುತ್ತದೆ.ಆದರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಇಲ್ಲ, ಆಮ್ಲಜನಕ ವ್ಯವಸ್ಥೆ ಇಲ್ಲ, ವೆಂಟಿಲೇಟರ್‌ಇಲ್ಲವೇ ಇಲ್ಲ, ರೆಮ್‌ಡಿಸಿವಿಯರ್ ಸಿಗುತ್ತಿಲ್ಲ ಎಂಬಸಿದ್ಧ ಉತ್ತರ ಸಿಗುತ್ತಿರುವುದು ಏಕೆ ಎಂಬ ಪ್ರಶ್ನೆಗೆಯಾವುದೇ ಅಧಿಕಾರಿ ಸಮರ್ಪಕವಾಗಿ ಉತ್ತರಿಸುತ್ತಿಲ್ಲ.ಉಸ್ತುವಾರಿ ಸಚಿವರು ಇತ್ತ ತುರ್ತು ಗಮನಹರಿಸಬೇಕಿದೆ.
ಆ್ಯಂಬುಲೆನ್ಸ್-ಕೋವಿಡ್ ಕೇರ್: ಕೋಲಾರಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್‌ಗಳು 18, ಸರ್ಕಾರದ್ದು19 ಮತ್ತು ಖಾಸಗಿಯ 26 ಸೇರಿ 63 ಆ್ಯಂಬುಲೆನ್Õಗಳಿವೆ. ಕೆಜಿಎಫ್ನ ಸಂಭ್ರಮ ಆಸ್ಪತ್ರೆಯ ಕೋವಿಡ್‌ಕೇರ್ ಸೆಂಟರ್‌ನಲ್ಲಿ 200 ಹಾಸಿಗೆಗಳಿದ್ದು, 100 ಕ್ಕೂಹೆಚ್ಚು ಮಂದಿ ದಾಖಲಾಗಿದ್ದಾರೆ. ಉಳಿದ ಹಾಸಿಗೆಗಳುಖಾಲಿ ಇವೆ. ಇದರ ಜೊತೆಗೆ ವಿವಿಧ ತಾಲೂಕುಗಳಚಲ್ದಿಗಾನಹಳ್ಳಿ, ಮದನಹಳ್ಳಿ, ರಾಜೇನಹಳ್ಳಿ,ಕೂತಾಂಡಹಳ್ಳಿ, ಯಳೇಸಂದ್ರಗಳಲ್ಲಿ ತಲಾ 100 ರಿಂದ150 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ಗಳನ್ನುಸೃಜಿಸುವ ಯೋಜನೆ ಇದೆ, ಈ ಕೇಂದ್ರಗಳಲ್ಲಿಸೋಂಕಿತರನ್ನು ದಾಖಲು ಮಾಡುವ ಪ್ರಕ್ರಿಯೆಆರಂಭವಾಗಿದೆ.
ಸೋಂಕು ನಿಯಂತ್ರಣ ದೊಡ್ಡ ಸವಾಲು: ಕಳೆದವರ್ಷ ಇದೇ ಅವಧಿಗೆ ಕೋಲಾರ ಜಿಲ್ಲೆಯ ಬಹುತೇಕಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಡ್, ವೆಂಟಿಲೇಟರ್‌ಗಳುಕೋವಿಡ್ ಕೇರ್ ಕೇಂದ್ರದ ಹಾಸಿಗೆ ಸಂಖ್ಯೆಯೂಹೆಚ್ಚಿರಲಿಲ್ಲ. ಜಿಲ್ಲಾಡಳಿತ ಸಾಕಷ್ಟು ಗಮನ ನೀಡಿಸೋಂಕು ಹರಡದಂತೆ ಎಚ್ಚರವಹಿಸಿತ್ತು. ಆದರೆ, ಈಗಸಮುದಾಯ ಹರುಡುವಿಕೆಯಿಂದಾಗಿ ಜಿಲ್ಲೆಯಲ್ಲಿಸೋಂಕು ನಿಯಂತ್ರಣ ದೊಡ್ಡ ಸವಾಲಾಗಿಪರಿಣಮಿಸಿದೆ.ಇದೇ ಏಪ್ರಿಲ್ ಆರಂಭದ ದಿನಗಳಲ್ಲಿ ಜಿಲ್ಲೆಯಲ್ಲಿದಿನಂಪ್ರತಿ 3 ಅಥವಾ 4 ಕೊರೊನಾ ಕೇಸುಗಳುಮಾತ್ರವೇ ಪತ್ತೆಯಾಗುತ್ತಿತ್ತು.
ಆದರೆ, ಕೇವಲಹದಿನೈದು ಇಪ್ಪತ್ತು ದಿನಗಳಲ್ಲಿ ನಿತ್ಯ ಪತ್ತೆಯಾಗುವಕೊರೊನಾ ಸೋಂಕಿತರ ಸಂಖ್ಯೆ ಸರಾಸರಿ 800 ರಿಂದ1000 ದಾಟಿದೆ. ಇದೇ ವಾರದಲ್ಲಿ ಒಂದೇ ದಿನ 1194ಕೇಸುಗಳು ಕೋಲಾರ ಜಿಲ್ಲೆಯಲ್ಲಿ ಪತ್ತೆಯಾಗಿಆತಂಕವನ್ನುಂಟು ಮಾಡಿತ್ತು.ಸಮಸ್ಯೆಗೆ ಕಾರಣವೇನು? ಜಿಲ್ಲೆಯಲ್ಲಿ ಕೊರೊನಾನಿರ್ವಹಣೆಗೆ ತಕ್ಕ ಮಟ್ಟಿಗೆ ಸೌಲಭ್ಯಗಳು ಇವೆ. ಇರುವಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡುಸಾರ್ವಜನಿಕ ಸೇವೆಯನ್ನು ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಜಿಲ್ಲಾ ಆರೋಗ್ಯಇಲಾಖೆಯಲ್ಲಿರುವ ವೈದ್ಯಾಧಿಕಾರಿಗಳ ನಡುವೆಹೊಂದಾಣಿಕೆಯ ಕೊರತೆ ಇರುವುದೇ ಇದಕ್ಕೆ ದೊಡ್ಡಕಾರಣವಾಗಿದೆ. ಇದರ ಪರಿಣಾಮವೇ ಡಿಎಚ್‌ಒಮೇಲೆ ಲೋಕಾಯುಕ್ತ ದಾಳಿ, ಇದೀಗ ಡಿಎಸ್, ಆರ್‌ಎಂಒ ಅಮಾನತು ಎಂಬ ದೂರುಗಳಿವೆ.ಕೋಲಾರ ಜಿಲ್ಲಾಸ್ಪತ್ರೆಗೆ ಒಂದು ವರ್ಷದ ಹಿಂದೆಬಂದಿದ್ದ 40 ವೆಂಟಿಲೇಟರ್‌ಗಳನ್ನು ಕೊರೊನಾ 2ನೇಅಲೆಯ ಸಂದರ್ಭದಲ್ಲಿಯೂ ಸದ್ಬಳಕೆ ಮಾಡಿಕೊಳ್ಳಲುಸಾಧ್ಯವಾಗದೇ ಇರುವುದೇ ಅಧಿಕಾರಿಗಳು ನಡುವಿನಸಂಘರ್ಷದ ಪ್ರತಿಫಲವೇ ಆಗಿದೆ.
ಸರಕಾರದಗಮನಕ್ಕೆ ತಂದು ಅಗತ್ಯ ಸಿಬ್ಬಂದಿ ನೇಮಕಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳುವ ಎಲ್ಲಾಅವಕಾಶವಿದ್ದರೂ ಅಧಿಕಾರಿಗಳು ಒಬ್ಬೊರ ಮೇಲೆಒಬ್ಬರು ಗೂಬೆ ಕೂರಿಸುತ್ತಾ ಜವಾಬ್ದಾರಿಗಳಿಂದಜಾರಿಕೊಂಡು ತಟಸ್ಥರಾಗಿದ್ದಾರೆ. ಇದರ ನೇರಪರಿಣಾಮ ಇದೀಗ ಕೊರೊನಾ ಸೋಂಕಿತರ ಚಿಕಿತ್ಸೆಯಮೇಲೆ ಬೀಳುತ್ತಿದೆ.
ಸತ್ತ ಮೇಲೆ ಎಚ್ಚೆತ್ತುಕೊಂಡರು: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಆಮ್ಲಜನಕದ ತೊಂದರೆಯಿಂದಾಗಿ8 ಮಂದಿ ಸಾವನ್ನಪ್ಪಿದ ಘಟನೆಯ ನಂತರಅಧಿಕಾರಿಗಳು ಎಚ್ಚೆತ್ತುಕೊಂಡರು. ಉಸ್ತುವಾರಿಸಚಿವರಿಲ್ಲದೆ ಇರುವ ಶಾಸಕರಿಗೆ ಬೇಡವಾಗಿದ್ದಕೊರೊನಾ ನಿರ್ವಹಣೆ ಮೇಲುಸ್ತುವಾರಿಗೆ ಆರೋಗ್ಯಸಚಿವರು ಮತ್ತು ಉಪ ಮುಖ್ಯಮಂತ್ರಿಗಳೇಬರಬೇಕಾಯಿತು. ಇದೀಗ ಉಸ್ತುವಾರಿ ಸಚಿವರನ್ನುನೇಮಕ ಮಾಡಿರುವುದರಿಂದ ಸಮಸ್ಯೆಗಳ ಬಗ್ಗೆ ನಿತ್ಯಗಮನಹರಿಸಲು ಸಾಧ್ಯವಾಗಬಹುದು ಎಂದುನಿರೀಕ್ಷಿಸಲಾಗುತ್ತಿದೆ.
ಬೇರೆಡೆಗೆ ಸಿಬ್ಬಂದಿ ನಿಯೋಜನೆ: ಕೋಲಾರ ಜಿಲ್ಲಾಎಸ್‌ಎನ್‌ಆರ್ ಆಸ್ಪತ್ರೆಯ ಆರು ಕೊರೊನಾಸೋಂಕಿತರ ಚಿಕಿತ್ಸಾ ವಾರ್ಡ್‌ಗಳಿಗೆ ಕೇವಲಮೂವರು ನರ್ಸ್‌ಗಳಿದ್ದಾರೆ. ಆಸ್ಪತ್ರೆಯ ಡಿ ಗ್ರೂಪ್‌ನೌಕರರೇ ಕೊರೊನಾ ಸೋಂಕಿತರ ಚಿಕಿತ Õಕರಾಗಿದ್ದಾರೆ. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿಯೇ 80ಕ್ಕೂಹೆಚ್ಚು ನರ್ಸ್ ಸಿಬ್ಬಂದಿಯ ಕೊರತೆ ಇದೆ. ಇತ್ಯಾದಿದೂರುಗಳಿರುವಾಗಲೇ ಆರೋಗ್ಯ ಇಲಾಖೆಯುಎಸ್‌ಎನ್‌ಆರ್‌ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್‌ಗಳು ಮತ್ತು ವೈದ್ಯರನ್ನು ಜಾಲಪ್ಪಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿಯೋಜಿಸಿ ಆದೇಶ ಹೊರಡಿಸಿರುವುದು ಟೀಕೆಗೆಗುರಿಯಾಗಿದೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.