ಗೆಲುವಿಗೆ ಶ್ರಮಿಸಿದವರ ಕೈಬಿಡುವುದಿಲ್ಲ
Team Udayavani, Sep 1, 2020, 3:11 PM IST
ಮಾಸ್ತಿ: ಶಾಸಕನಾಗಿ ಆಯ್ಕೆ ಆಗಲು ಶ್ರಮಿಸಿದ ಯಾರನ್ನೂ ಕೈಬಿಡದೆ, ಮುಂಬರುವ ಗ್ರಾಪಂ, ತಾಪಂ, ಜಿಪಂ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಗ್ರಾಪಂ ವ್ಯಾಪ್ತಿಯ ಕೆಸರಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಚ್.ಸೋಮಶೇಖರ್ ನಿವಾಸದಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಜನಸಾಮಾನ್ಯರು ಬಿಜೆಪಿ ಮೇಲೆ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳದ ಕಾರಣ, ತನ್ನ ಆಡಳಿತದ ವೈಫಲ್ಯಗಳಿಂದ ಜನ ಸಂಪೂರ್ಣವಾಗಿ ಬೇಸತ್ತಿದ್ದಾರೆ. ದೇಶದ ಜನ 2ನೇ ಅವಧಿ ಮೋದಿ ಸರ್ಕಾರ ಏನೆಂಬುದನ್ನು ಅರಿತಿದ್ದಾರೆ.ಸಾಮಾಜಿಕ ಶೋಷಣೆ, ಆರ್ಥಿಕ ಪ್ರಗತಿ ಕುಂಠಿತ ದೇಶವನ್ನು ಅಭಿವೃದ್ಧಿಯಲ್ಲಿ ಎರಡು ದಶಕಗಳ ಹಿಂದಕ್ಕೆ ತೆಗೆದು ಕೊಂಡು ಹೋಗಿದೆ ಎಂದು ಹೇಳಿದರು.
ಮಾಸ್ತಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶೌಕತ್ ಉಲ್ಲಾ ಬೇಗ್, ಅಮರನಾರಾಯಣ, ಉಬೇದ್ ಉಲ್ಲಾ ಬೇಗ್, ಸುಹೇಲ್ ಬೇಗ್ ಸೇರಿ ಹಲವು ಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ವಕೀಲ ಕೆ.ಎಚ್.ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಜಿಪಂ ಮಾಜಿ ಸದಸ್ಯ ಆನೇಪುರ ಎಚ್.ಹನುಮಂತಪ್ಪ, ಎಪಿಎಂಸಿ ಸದಸ್ಯ ಸಬ್ದರ್ ಬೇಗ್, ಕೆಡಿಪಿ ಮಾಜಿ ಸದಸ್ಯ ಎಚ್.ಎಂ.ವಿಜಯನರಸಿಂಹ, ಎಪಿ ಎಂಸಿ ಸದಸ್ಯ ಕೃಷ್ಣಕುಮಾರ್, ಬಿ.ಆರ್.ಶ್ರೀನಿವಾಸ್, ಎ. ಅಶ್ವತ್ಥರೆಡ್ಡಿ, ಜೊನ್ನಮುನಿಯಪ್ಪ, ಜೆಸಿಬಿ ನಾಗರಾಜ್, ಎ. ವಿ.ರಾಜಪ್ಪ, ಚೇತನ್ ಕುಮಾರ್, ಟೈಲರ್ ಬಾಬು, ಮೋಹನ್‌ರಾವ್, ಟೆಂಟ್ ವೆಂಕಟೇಶ್, ಕುಪೂ³ರು ಈಶ್ವರ್, ನರಸಿಂಹ, ಎ.ಎಸ್.ಶೇಖರ್, ನಾನ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.