ಸಾಮ್ರಾಟ್ ಸುಯೋಧನದಲ್ಲಿ ಶಾಸಕ ನಾರಾಯಣಸ್ವಾಮಿ ಕೃಷ್ಣ
Team Udayavani, Apr 29, 2019, 10:10 AM IST
ಬಂಗಾರಪೇಟೆ: ತಾಲೂಕಿನ ಬೂದಿಕೋಟೆಯಲ್ಲಿ ಶನಿವಾರ ರಾತ್ರಿ ನಡೆದ ‘ಸಾಮ್ರಾಟ್ ಸುಯೋ ಧನ’ ಎಂಬ ಪೌರಾಣಿಕ ನಾಟಕದಲ್ಲಿ 2ನೇ ಕೃಷ್ಣ ವೇಷಧಾರಿಯಾಗಿ ಶಾಸಕ ಎಸ್.ಎನ್.ನಾರಾಯ ಣಸ್ವಾಮಿ ಬಣ್ಣ ಹಾಕಿ ನಟನೆ ಮಾಡಿದರು.
ಬೂದಿಕೋಟೆ ಗ್ರಾಮದ ಪ್ರಸನ್ನ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಪುಷ್ಪ ಪಲ್ಲಕ್ಕಿ ಮತ್ತು ಕರಗ ಮಹೋತ್ಸವ ಅಂಗವಾಗಿ ಪೌರಾಣಿಕ ನಾಟಕಗಳ ಗುರುಗಳಾದ ಮುನಿವೆಂಕ ಟಪ್ಪ ಹಾಗೂ ನಾಗದೇವನಹಳ್ಳಿ ಸಿದ್ದಪ್ಪ ನಿರ್ದೇಶನದಲ್ಲಿ ಹಾಗೂ ಟೇಕಲ್ ರಾಧಾಕೃಷ್ಣ ಅವರ ಶ್ರೀಮಾರುತಿ ಡ್ರಾಮಾ ಸೀನ್ಸ್ ನೇತೃತ್ವದಲ್ಲಿ ಸಾಮ್ರಾಟ್ ಸುಯೋಧನ ಎಂಬ ತೆಲುಗು ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಗಂಟೆಗೂ ಹೆಚ್ಚು ಕಾಲ ಮೇಕಪ್: ಮಹಾಭಾರತದಲ್ಲಿ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ಘೋಷಣೆಯಾದ ಮೇಲೆ ಶ್ರೀಕೃಷ್ಣನ ಸಹಕಾರಕ್ಕಾಗಿ ದುರ್ಯೋಧನ ಮತ್ತು ಅರ್ಜುನ ಬಂದಾಗ ಶ್ರೀಕೃಷ್ಣ ಮಲಗಿರುವ ಸನ್ನಿವೇಶದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಟನೆ ಪ್ರಾರಂಭಿಸಿದರು. ಅರ್ಜುನ ಮತ್ತು ದುರ್ಯೋಧನರ ಜೊತೆ ಸಂವಾದ ಮಾಡಿದ ಬಗ್ಗೆ ನಾಗರಿಕರಿಂದ ಚಪ್ಪಾಳೆ ಗಿಟ್ಟಿಸಿದರು. ಶಾಸಕರ ಜೊತೆಯಲ್ಲಿ ಬರುವ ದುರ್ಯೋಧನ ಪಾತ್ರಧಾರಿಯಾಗಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಅರ್ಜುನನಾಗಿ ಬಲಮಂದೆ ತಾಪಂ ಸದಸ್ಯ ಮಹದೇವ್ ನಟನೆಗೆ ಜನತೆ ಪ್ರಶಂಸಿದರು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೇಕಪ್ ಮಾಡಿದರು.
ಆಸೆಯಿಂದ ಪಾತ್ರ ನಿರ್ವಹಿಸಿದ್ದೇನೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಪ್ರತಿನಿತ್ಯ ತಾಲೂಕಿನ ಅಭಿವೃದ್ಧಿ, ಕೆಲಸ ಕಾರ್ಯ, ರಾಜಕೀಯ ವ್ಯವಹಾರ, ವಾಣಿಜ್ಯ ವ್ಯವಹಾರ ಗಳು ಸಾಮಾನ್ಯ. ಜನರೊಂದಿಗೆ ಈ ರೀತಿ ಬೆರೆತು ಜೀವನ ನಡೆಸಬೇಕಾಗಿದೆ ಎನ್ನುವ ಸದುದ್ದೇಶ ವಿದೆ. ತಮ್ಮ ಚಿಕ್ಕಿಂದಿನಿಂದಲೂ ಪೌರಾಣಿಕ ನಾಟಕಗಳ ಬಗ್ಗೆ ಒಲವು ಇತ್ತು. ಮೊದಲ ಬಾರಿಗೆ ನಟನೆ ಮಾಡುವ ಬಗ್ಗೆ ಆಸೆಯಿಂದ ಪಾತ್ರ ನಿರ್ವ ಹಿಸಿದ್ದೇನೆ. ಬೂದಿಕೋಟೆ ಭಾಗದ ಮುಖಂಡರ ಒತ್ತಾಯದ ಮೇರೆಗೆ ಶ್ರೀಕೃಷ್ಣನ ವೇಷಧಾರಿ ಯಾಗಿ ನಟಿಸಿದ್ದು ಮನಸ್ಸಿಗೆ ತುಂಬಾ ಸಂತಸ ತಂದಿದೆ ಎಂದರು. ಶಾಸಕರ ಜೊತೆಯಲ್ಲಿ ಪಕ್ಷಾ ತೀತವಾಗಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯ ದರ್ಶಿ ಅನುಚಂದ್ರಶೇಖರ್ 1ನೇ ಬಲರಾಮ, ಬೂದಿಕೋಟೆ ಗ್ರಾಪಂ ಅಧ್ಯಕ್ಷರ ಪತಿ ಗೋವಿಂ ದಪ್ಪ ಅಭಿಮನ್ಯು, ಉಪಾಧ್ಯಕ್ಷ ವೆಂಕಟೇಶಪ್ಪ 4ನೇ ರಾಜು, ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮುನಿಸ್ವಾಮಿ 1ನೇ ಭೀಮ, ವಕೀಲ ಆನಂದ್ ನಾರದ, ಕೆ.ಎನ್.ನಾಗರಾಜ್ 1ನೇ ಅರ್ಜುನ, ಬಿ.ಗೋವಿಂದಪ್ಪ 1ನೇ ಭೀಷ್ಮ, ಗ್ರಾಪಂ ಸದಸ್ಯ ಗೋವಿಂದರಾಜ ಶೆಟ್ಟಿ ಶಕುನಿ ಪಾತ್ರದಲ್ಲಿ ನಟನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.