ಓಪನ್ ಕಾಸ್ಟಿಂಗ್ ಮೈನಿಂಗ್ ಕೈಬಿಡಲು ಮನವಿ
Team Udayavani, Jan 27, 2023, 12:53 PM IST
ಕೆಜಿಎಫ್: ಕೇಂದ್ರ ಸರ್ಕಾರ ಕೆಜಿಎಫ್‌ನಲ್ಲಿ ಗಣಿಗಾರಿಕೆ ಪುನರ್ ಆರಂಭಿಸುವ ನಿಟ್ಟಿನಲ್ಲಿ ಓಪನ್ ಕಾಸ್ಟಿಂಗ್ ಮೈನಿಂಗ್ ನಡೆಸಲು ಯೋಚಿಸುತ್ತಿದೆ. ಇದರಿಂದಇಲ್ಲಿನ ವಾತಾವರಣ ಹದಗೆಡಲಿದೆ.ಈಗಾಗಲೇ ಗಣಿಯಲ್ಲಿ ಕಾರ್ಯನಿರ್ವಹಿಸಿರುವ ಬಹಳಷ್ಟು ಕಾರ್ಮಿಕರು ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದು, ಓಪನ್ ಕಾಸ್ಟಿಂಗ್ ಮೈನಿಂಗ್ ಮಾಡಿದ್ದೇಆದಲ್ಲಿ, ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಲಿವೆ. ಇದರಿಂದ ಈ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು.
ನಗರದ ಮುನಿಸಿಪಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ತುಳಿತಕ್ಕೆಒಳಗಾದವರ ಧ್ವನಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ವಿಶ್ವದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ರಚಿಸುವ ಮೂಲಕ
ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿದ್ದಾರೆ. ಆರೋಗ್ಯ, ಶಿಕ್ಷಣ, ರಕ್ಷಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲೂ ಅಭಿವೃದ್ಧಿ ಸಾಧಿ ಸಲು ಅಗತ್ಯ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯ: ಕ್ಷೇತ್ರದ ಜನತೆ ತಮ್ಮ ಮೇಲೆ ನಂಬಿಕೆಯಿಟ್ಟು ಆಶೀರ್ವದಿಸಿದ್ದರಿಂದ, 5 ವರ್ಷ ರಸ್ತೆ, ಚರಂಡಿ, ಕುಡಿಯುವ ನೀರು, ಮಿನಿ ವಿಧಾನಸೌಧ, ತಾಪಂ ಕಟ್ಟಡ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ತುರ್ತು ಚಿಕಿತ್ಸಾ ಘಟಕ,ನಗರದ ಪ್ರಮುಖ ರಸ್ತೆಗಳು ದ್ವಿಪಥವಾಗಿಪರಿವರ್ತಿಸಿ, ಹತ್ತು ಹಲವು ಅಭಿವೃದ್ಧಿಕಾರ್ಯ ಮಾಡಿರುವುದಾಗಿ ಹೇಳಿದರು.
ಮಾಲಿಕತ್ವ, ನಿವೇಶನ ಹಂಚಿಕೆ: ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟುಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಿದ್ದು, ಕೈಗಾರಿಕೆಗಳ ಸ್ಥಾಪನೆ, ಬಿಜಿಎಂಎಲ್ ಕಾರ್ಖಾನೆ ಕಾರ್ಮಿಕರುವಾಸಿಸುತ್ತಿರುವ ಸ್ಥಳದ ಮಾಲಿಕತ್ವಕೊಡಿಸುವುದು, ನಿವೇಶನ ರಹಿತರಿಗೆನಿವೇಶನ ಹಂಚಿಕೆ ಮೊದಲ ಕಾರ್ಯಗಳನ್ನುಆದ್ಯತೆ ಮೇಲೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂವಿಧಾನ ಪರಮೋತ್ಛ ಗ್ರಂಥ: ಎಸ್ಪಿ ಡಾ.ಕೆ.ಧರಣಿದೇವಿ ಮಾತನಾಡಿ,ದೇಶದ ಪ್ರತಿಯೊಬ್ಬ ಪ್ರಜೆ ಹೇಗೆಸನ್ಮಾರ್ಗದಿಂದ ವರ್ತಿಸಬೇಕೆಂಬ ಬಗ್ಗೆಅಂಬೇಡ್ಕರ್ ಬರೆದಿರುವ ಸಂವಿಧಾನ ದಲ್ಲಿ ತಿಳಿಸಿದ್ದಾರೆ. ಜೀವನದಲ್ಲಿ ನಾವುಹೇಗೆ ನಡೆದುಕೊಳ್ಳಬೇಕೆಂಬ ಸ್ಪಷ್ಟನಿರ್ದೇಶನವನ್ನು ತಿಳಿಸಿಕೊಟ್ಟಿದ್ದಾರೆ.ಸಂವಿಧಾನ ನಮಗೆ ಅತ್ಯಂತ ಪರಮೋತ್ಛ ಗ್ರಂಥವಾಗಿದೆ ಎಂದರು.
ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಿ: ಐಕ್ಯತೆ ಎನ್ನುವುದು ದೇಶದ ಶಕ್ತಿ ಎನ್ನುವುದಕ್ಕೆ ಸಂಬಂಧಿಸಿದ್ದರೆ, ಸಮಗ್ರತೆ ಎನ್ನುವುದು ದೇಶದಲ್ಲಿನ ಮೌಲ್ಯಗಳ ವ್ಯವಸ್ಥೆಗೆಸಂಬಂಧಿಸಿದ್ದಾಗಿದೆ. ಈ ಶಕ್ತಿ ಎನ್ನುವುದುವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತುನಾಗರಿಕರಿಂದ ಬರುವಂತದ್ದಾಗಿದೆ. ಈಶಕ್ತಿಯನ್ನು ಸಂವಿಧಾನದಲ್ಲಿ ಉಲ್ಲೇಖೀಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷ ವಳ್ಳಲ್ ಮುನಿ ,ಸ್ವಾಮಿ, ಉಪಾಧ್ಯಕ್ಷೆ ದೇವಿಗಣೇಶ್,ತಹಶೀಲ್ದಾರ್ ಕೆ.ಎನ್.ಸುಜಾತ, ಇಒಮಂಜುನಾಥ್, ಪೌರಾಯುಕ್ತೆ ಅಂಬಿಕಾ, ಬಿಇಒ ಚಂದ್ರಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಟಾಸ್, ಡಿವೈಎಸ್‌ಪಿ ರಮೇಶ್ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.