ತಾಪಂ ಬೇಕೆ ಬೇಡವೇ? ಶಾಸಕರು ಹೇಳುವುದೇನು?

ರದ್ದುಗೊಳಿಸಲು ಸರ್ಕಾರದ ಚಿಂತನೆ , ಬಜೆಟ್‌ ಅಧಿವೇಶನದಲ್ಲಿ ಚರ್ಚೆಗೂ ಬರುವ ಸಾಧ್ಯತೆ

Team Udayavani, Mar 1, 2021, 2:41 PM IST

ತಾಪಂ ಬೇಕೆ ಬೇಡವೇ? ಶಾಸಕರು ಹೇಳುವುದೇನು?

ಸಾಂದರ್ಭಿಕ ಚಿತ್ರ

ಸರ್ಕಾರ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ರದ್ದುಗೊಳಿಸಲು ಚಿಂತಿಸುತ್ತಿದೆ. ಇದಕ್ಕಾಗಿ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಮುಂದಿನ ಬಜೆಟ್‌ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೂ

ಬರಲಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಕೋಲಾರ ಜಿಲ್ಲೆಯ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಿದೆ.

ಕೆ.ಶ್ರೀನಿವಾಸಗೌಡ ಕೋಲಾರ ಶಾಸಕ :

ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನುರದ್ದುಗೊಳಿಸುವವಿಚಾರ ನನ್ನಗಮನಕ್ಕೆ ಬಂದಿಲ್ಲ. ಸರ್ಕಾರವುಶಾಸಕರಿಗೂ ಈ ಕುರಿತು ಯಾವುದೇ ಮಾಹಿತಿಯನ್ನು ಕಳುಹಿಸಿಲ್ಲ. ತಾಪಂ ರದ್ಧತಿಕುರಿತು ತಮ್ಮ ಗಮನಕ್ಕೆ ಬಂದಾಗ ಓದಿ ಅರಿತುಕೊಂಡು ಪ್ರತಿಕ್ರಿಯಿಸುವೆ.

ನಾರಾಯಣಸ್ವಾಮಿ, ಶಾಸಕರು, ಬಂಗಾರಪೇಟೆ :

ತಾಪಂ ರದ್ದು ಮಾಡುವುದು ಒಳ್ಳೆಯದೆ. ಏಕೆಂದರೆ, ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಮಾಡಿದ ಮೇಲೆ ತಾಪಂಗೆಅನುದಾನ ಕೊಡುತ್ತಿಲ್ಲ. ತಾಪಂಚುನಾವಣೆಯಲ್ಲಿ ಗೆದ್ದ ಬಂದವರಿಗೆ ಕಳೆದಐದು ವರ್ಷಗಳಲ್ಲಿ 20 ಲಕ್ಷ ಅನುದಾನಕೊಟ್ಟಿಲ್ಲ. ಅನುದಾನ ಕೊಡದಿದ್ದ ಮೇಲೆಅವರು ಏನು ಅಭಿವೃದ್ಧಿ ಮಾಡಲು ಸಾಧ್ಯ.ಅಭಿವೃದ್ಧಿ ಮಾಡಲು ಸಾಧ್ಯವಿಲ್ಲವೆಂದಾದಮೇಲೆ ತಾಪಂ ಸದಸ್ಯರೇಕೆ ಬೇಕು. ತಾಪಂಗೆ ಚುನಾವಣೆ, ಸರ್ಕಾರಗಳಿಗೆ ಆರ್ಥಿಕ ಹೊರೆಯಷ್ಟೆ.ಗ್ರಾಪಂ ಸದಸ್ಯರಿಗೆ ಇರುವ ಬೆಲೆಯೂ ತಾಪಂ ಸದಸ್ಯರಿಗಿಲ್ಲ. ನನ್ನ ಪ್ರಕಾರ ಅನುದಾನ, ಅಧಿಕಾರವಿಲ್ಲದ ತಾಪಂ ಅಗತ್ಯವಿಲ್ಲ.

ಕೆ.ಆರ್‌.ರಮೇಶ್‌ಕುಮಾರ್‌, ಶಾಸಕರು, ಶ್ರೀನಿವಾಸಪುರ :

ತಾಪಂ ರದ್ಧತಿ ಪ್ರಶ್ನೆಯೇ ಅಪ್ರಬುದ್ಧವಾದುದು. ತಾಪಂ ಸಂವಿಧಾನಾತ್ಮಕವಾಗಿ ಬಂದಿರುವ ಸಂಸ್ಥೆ. ರಾಜ್ಯ ಸರ್ಕಾರ ಹೇಗೆ ರದ್ದು ಮಾಡಲು ಬರುತ್ತದೆ. ಸಂವಿಧಾನ ತಿದ್ದುಪಡಿ ಆದಾಗ ಗ್ರಾಪಂ, ತಾಪಂ ಹಾಗೂ ಜಿಪಂಗಳೆಂಬ ಮೂರು ಹಂತದ ಆಡಳಿತವ್ಯವಸ್ಥೆ ಇರಬೇಕೆಂದು ಮಾಡಿದ್ದಾರೆ. ಅದರ ಉಪಯುಕ್ತತೆಇದೆಯಾ ಇಲ್ಲವೇ ಎಂಬುದನ್ನು ವಿಮರ್ಶೆ ಮಾಡಿ. ಒಂದು ವೇಳೆಬದಲಾವಣೆ ಮಾಡಬೇಕಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು. ರಾಜ್ಯ ಸರ್ಕಾರ ಮಾಡಲು ಬರುವುದಿಲ್ಲ. ಈ ರೀತಿಯಆಲೋಚನೆ ಮಾಡುತ್ತಿದ್ದರೆ ಮೂರ್ಖರಷ್ಟೆ. ತಾಪಂಗೆ ಹೆಚ್ಚು ಶಕ್ತಿಇಲ್ಲ, ಉಪಯೋಗ ಇಲ್ಲ ಎನ್ನುವುದು ಬೇರೆ ವಿಚಾರ. ಆದರೂ, ಈವ್ಯವಸ್ಥೆಯನ್ನು ರದ್ದು ಮಾಡುವ ಅಧಿಕಾರ ರಾಜ್ಯ ಸರ್ಕಾರ ಅಥವಾ ವಿಧಾನಸಭೆಗೆ ಇದೆಯಾ ಎಂದರೆ ಸುತರಾಂ ಇಲ್ಲವೇ ಇಲ್ಲ. ಸಂಸತ್ತೆ ಇದನ್ನು ಇತ್ಯರ್ಥ ಮಾಡಬೇಕು.

ರೂಪಕಲಾ, ಶಾಸಕರು, ಕೆಜಿಎಫ್ :

ತಾಪಂಗಳಿಂದ ಏನೆಲ್ಲಾ ಅನುಕೂಲಗಳಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ತಾಲೂಕು ಹಂತದಲ್ಲಿತಾಪಂಗಳಿಂದ ಅನುಕೂಲವಿದೆ.ತಾಪಂ ತೆಗೆಯುವ ಕುರಿತುಬೇರೆ ಬೇರೆ ಕಾರಣಗಳಿಂದ ಯೋಚನೆ ಮಾಡಿದ್ದಾರೆ. ಸರ್ಕಾರದ ಉದ್ದೇಶ ಏನುಅಂತ ಎನ್ನುವುದು ತಮಗೂಗೊತ್ತಿಲ್ಲ. ಈ ಕುರಿತುಮಾಹಿತಿಯೂ ಇಲ್ಲ. ಗ್ರಾಪಂ ಪಂಚಾಯತ್‌ಗಳ ನಂತರ ತಾಲೂಕು ಹಂತದಲ್ಲಿ ತಾಪಂಗಳ ಅವಶ್ಯಕತೆ ಇದೆ.ಜನರಿಗೆ ನಿರೀಕ್ಷೆಯನ್ನು ಪರಿಪೂರ್ಣವಾಗಿ ಹಂತ ಹಂತವಾಗಿ ನಿರ್ವಹಣೆ ಮಾಡಲು ತಾಪಂ ಸಹಕಾರಿ

ಕೆ.ವೈ.ನಂಜೇಗೌಡ, ಶಾಸಕರು, ಮಾಲೂರು :

ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನು ತೆಗೆಯಬಾರದೆಂದು ಬಲವಾಗಿ ಪ್ರತಿಪಾದಿಸುವೆ. ಗ್ರಾಪಂ ತಾಪಂ ಜಿಪಂಗೆ ಅವಕಾಶವಿದೆ. ತಾಪಂ ತೆಗೆಯುವುದಕ್ಕಿಂತಲೂ ಹೆಚ್ಚಿನ ಅಧಿಕಾರ, ಅನುದಾನ ಕೊಟ್ಟು ತಾಪಂಗಳನ್ನು ಬಲವರ್ಧನೆ ಮಾಡಬೇಕು. ಹಿಂದೆ ರಾಜೀವ್‌ಗಾಂಧಿಯವರು ಗ್ರಾಮ ಸ್ವರಾಜ್ಯ ಕಟ್ಟುವ ಒಳ್ಳೆಯ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಬಿಜೆಪಿಯವರಿಗೆ ಇದೆಲ್ಲಾ ಗೊತ್ತೇ ಇಲ್ಲ. ಅಧಿಕಾರಕ್ಕೆ ನೇರವಾಗಿ ಬರಲು, ಅಧಿಕಾರ ವಿಕೇಂದ್ರಿಕರಣ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ತಾಪಂ ಇರಬೇಕು. ನಾನು ಕೂಡ ತಾಪಂ ಅಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಎಲ್ಲವನ್ನು ಮೊಟಕುಗೊಳಿಸಿದ್ದಾರೆ. ತೆಗೆಯುವ ಬದಲು ತಾಪಂಗಳನ್ನು ಬಲಪಡಿಸಲಿ.

ಎಚ್‌.ನಾಗೇಶ್‌, ಶಾಸಕರು, ಮುಳಬಾಗಿಲು :

ತಾಪಂಗಳನ್ನು ಅಷ್ಟು ಸುಲಭವಾಗಿ ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ದೇಶದ ಅರ್ಧದಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ. ತಕ್ಷಣಕ್ಕೆ ತೆಗೆಯಲುಸಾಧ್ಯವಿಲ್ಲ. ತಾಪಂ ವ್ಯವಸ್ಥೆಯನ್ನು ಸುಧಾರಿಸಿದರೆ ಉತ್ತಮ. ತಾಪಂ ಅಧ್ಯಕ್ಷರನ್ನೇ ನೇರವಾಗಿ ಜನರೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಆದರೂ, ಇನ್ನು ಐದು ವರ್ಷ ಏನು ಮಾಡಲಾಗುವುದಿಲ್ಲ. ತಾಪಂ ವ್ಯವಸ್ಥೆ ಇರಲಿ

 

ಕೆ.ಎಲ್‌.ಗಣೇಶ್‌

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.