ಕೋವಿಡ್: ಡಿಸಿಸಿ ಬ್ಯಾಂಕಿನಿಂದ ಮೊಬೈಲ್ ಎಟಿಎಂ
Team Udayavani, Apr 25, 2021, 3:31 PM IST
ಕೋಲಾರ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು, ಹಾಲು ಉತ್ಪಾದಕರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿದೆ ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೆರಳಿದ ಎಟಿಎಂ, ಮೈಕ್ರೋ ಎಟಿಎಂ ಸೌಲಭ್ಯ ಹೊಂದಿರುವ ಸುಸಜ್ಜಿತ ಮೊಬೈಲ್ ಬ್ಯಾಂಕಿಂಗ್ ವಾಹನ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಜೀವಾಳವಾಗಿರುವ ಹೈನುಗಾರಿಕೆ ನಮ್ಮ ಗ್ರಾಮೀಣ ಜನರ ಬದುಕಿಗೆ ರಕ್ಷಣೆ ನೀಡಿದೆ. 454 ಹಾಲುಉತ್ಪಾದಕರ ಸಹಕಾರ ಸಂಘಗಳು ಹಾಗೂ 14,260 ಮಂದಿ ಹಾಲು ಉತ್ಪಾದಕ ರೈತರ ಉಳಿತಾಯ ಖಾತೆಗಳು ಡಿಸಿಸಿ ಬ್ಯಾಂಕಿನಲ್ಲಿವೆ ಎಂದು ಹೇಳಿದರು.
ಮನೆ ಬಾಗಿಲಿಗೇ ಹಣ: ಈ ರೈತರು ಎಂಪಿಸಿಎಸ್ ಗಳಿಗೆ ಹಾಕುವ ಹಾಲಿನ ಬಟವಾಡೆ ಹಣವನ್ನು ಹಾಲು ಒಕ್ಕೂಟ ಅವರ ಖಾತೆಗೆ ತುಂಬುತ್ತದೆ. ಈ ಹಣವನ್ನು ಪಡೆಯಲು ರೈತರು ಬ್ಯಾಂಕಿಗೆ ಬರಲು ಕೋವಿಡ್ ಅಡ್ಡಿಯಾಗಿದೆ. ಸೋಂಕು ಗ್ರಾಮೀಣ ಪ್ರದೇಶಕ್ಕೂ ಹರಡಿ ರೈತರನ್ನು ಆತಂಕಕ್ಕೆ ತಳ್ಳಿದೆ ಎಂದು ಹೇಳಿದರು.
ಎಟಿಎಂ ಕಾರ್ಡ್ ಪಡೆಯಿರಿ: ಇಂತಹ ಸಂದರ್ಭದಲ್ಲಿ ರೈತರ ಆರೋಗ್ಯ ಸುರಕ್ಷೆ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್‌ಮೊಬೈಲ್ ಬ್ಯಾಂಕಿಂಗ್ ವಾಹನ, ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಿದೆ ಮತ್ತು ಪ್ರತಿ ಹಾಲು ಉತ್ಪಾದಕರಿಗೂ ಎಟಿಎಂ ಕಾರ್ಡ್ ನೀಡಿದೆ. ಯಾರಿಗಾದರೂಅಗತ್ಯವಿದ್ದರೆ ಅರ್ಜಿ ಸಲ್ಲಿಸಿ ಕೂಡಲೇ ಎಟಿಎಂ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಎಂಪಿಸಿಎಸ್‌ಗಳ ಬಳಿ ಮೊಬೈಲ್ ಎಟಿಎಂ: ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ದೂರವಾಣಿ ಕರೆ ಮಾಡಿದರೆ ಮೊಬೆ„ಲ್ ಬ್ಯಾಂಕಿಂಗ್‌ವಾಹನ ದಿನದ 24 ಗಂಟೆಗಳ ಸೇವೆಗೆ ಸಿದ್ಧವಿದ್ದು, ಸಹಕಾರ ಸಂಘದ ಮುಂದೆ ಬಂದು ನಿಲ್ಲುತ್ತದೆ. ಅಲ್ಲಿಗೆಬಂದು ರೈತರು ಎಟಿಎಂ ಮೂಲಕ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದರು.
ಬ್ಯಾಂಕ್‌ನ ಅಧಿ ಕಾರಿಗಳಾದ ಹುಸೇನ್ ದೊಡ್ಡಮನಿ,ಅಮೀನಾ, ಹ್ಯಾರೀಸ್, ಅಬ್ದುಲ್ ಜಬ್ಟಾರ್, ಸತೀಶ್, ಕುರುಬೂರು ನಾಗರಾಜ್ ಮತ್ತಿತರರಿದ್ದರು.
ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಸೌಲಭ್ಯ : ಡಿಸಿಸಿ ಬ್ಯಾಂಕಿಗೆ ಹೊಸ ಮನ್ವಂತರಕ್ಕೆ ಸ್ಪಂದಿಸಲು ಆಧುನಿಕತೆಗೆ ತಕ್ಕಂತೆ ´ೋನ್ ಪೇ, ಗೂಗಲ್ ಫೇ ಮತ್ತಿತರ ಆನ್‌ಲೈನ್ ಬ್ಯಾಂಕಿಂಗ್ ಸೇವೆಗೂ ಅನುಮತಿ ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬ್ಯಾಲಹಳ್ಳಿ ಗೋವಿಂದಗೌಡರು ಧನ್ಯವಾದ ಸಲ್ಲಿಸಿದರು. ರೈತರು, ತಾಯಂದಿರ ಆರ್ಥಿಕಾಭಿವೃದ್ಧಿಗೆ ಸದಾ ಸಿದ್ಧವಾಗಿರುವ ಡಿಸಿಸಿ ಬ್ಯಾಂಕ್‌ಗೆ ಇದೀಗ ಆಧುನಿಕ ಸ್ಪರ್ಶ ನೀಡಲಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಿಗುವ ಎಲ್ಲಾ ಆನ್ ಲೈನ್ ಸೇವೆಗಳು ಇಲ್ಲಿಯೂ ಲಭ್ಯವಿದೆ ಎಂದು ತಿಳಿಸಿದರು. ರೈತರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಬ್ಯಾಂಕಿಂಗ್ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಅವರು, ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲೆಯ ರೈತರು, ಹಾಲು ಉತ್ಪಾದಕರಿಗೆ ಮನವಿ ಮಾಡಿದರು.
ಮೊಬೈಲ್ ಎಟಿಎಂಗಾಗಿ ದೂರವಾಣಿ ಕರೆ ಮಾಡಿ : ಹಾಲು ಉತ್ಪಾಕರಿಗೆ ಬಟವಾಡೆ ಹಣ ಡ್ರಾ ಮಾಡಲು ಅಗತ್ಯವಿದ್ದರೆ ಆಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಡಿಸಿಸಿ ಬ್ಯಾಂಕಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಮೊಬೈಲ್ ಬ್ಯಾಂಕಿಂಗ್ ವಾಹನ ಅಲ್ಲಿಗೆ ಬಂದು ನಿಲ್ಲುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು. ಬ್ಯಾಂಕಿನ ಹುಸೇನ್ ದೊಡ್ಡಮನಿ ಮೊ. 9449252678, ಸತೀಶ್ ಮೊ. 8660547217,ಹ್ಯಾರೀಸ್ ಮೊ. 9448289135, ಅಬ್ದುಲ್ ಜಬ್ಟಾರ್ ಮೊ. 9686088093 ಈ ದೂರವಾಣಿ ಸಂಖ್ಯೆಗೆಸಂಪರ್ಕಿಸಿ ಮೊಬೈಲ್ ಬ್ಯಾಂಕಿಂಗ್ ಸೇವೆ ಅಗತ್ಯವೆಂದು ತಿಳಿಸಿದರೆ ಸಾಕು ವಾಹನ ಡೇರಿ ಮುಂದೆ ನಿಲ್ಲುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.