ವರ್ತಮಾನದ ಸಮಸ್ಯೆಗಳ ಬರವಣಿಗೆಗೆ ಹೆಚ್ಚು ಮಹತ್ವ
ಸಮಾಜದ ಉದ್ಧಾರ ಮತ್ತು ಸಾಹಿತ್ಯದ ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿರಲಿ
Team Udayavani, Jul 11, 2022, 6:23 PM IST
ಕೋಲಾರ: ವರ್ತಮಾನದ ಸಮಸ್ಯೆ, ಸವಾಲುಗಳಿಗೆ ಮುಖಾಮುಖೀ ಆಗುವ ಬರವಣಿಗೆಗೆ ಹೆಚ್ಚು ಮಹತ್ವ ಇರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಭಾನುವಾರ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಕೋಲಾರ ಘಟಕ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರುನಾಡ ಹಣತೆ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡವು ಕೋಲಾರ ಗಡಿ ಜಿಲ್ಲೆಯಲ್ಲಿಯೂ ಹಿರಿಯ ಹಾಗೂ ಉದಯೋನ್ಮುಖ ಕವಿ, ಸಾಹಿತಿಗಳನ್ನೊಳ ಗೊಂಡು ಕನ್ನಡದ ಕಂಪನ್ನು ಹೆಚ್ಚಿಸಲು ನೆರವಾಗಲಿ ಎಂದು ಆಶಿಸಿದರು.
ಕನ್ನಡ ಭಾಷೆ ಅಭ್ಯಾಸ ಮಾಡಿ: ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಕೇವಲ ಅಂಕ ಗಳಿಕೆಗೆ ಕನ್ನಡ ಓದದೆ, ಅಭಿಮಾನ ದಿಂದ ಕನ್ನಡ ಭಾಷೆಯ ಅಭ್ಯಾಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಜ್ಯಾದ್ಯಂತ ವಿಸ್ತಾರ:ಕಾರ್ಯಕ್ರಮ ಉದ್ಘಾಟಿಸಿದ ಕರುನಾಡ ಹಣತೆ ಬಳಗದ ಸಂಸ್ಥಾಪಕ ಅಧ್ಯಕ್ಷ ಕನಕ ಪ್ರೀತೀಶ್ ಮಾತನಾಡಿ, ಬಳಗದ ಕಾರ್ಯಚಟು ವಟಿಕೆಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶ ವಿದೆ ಎಂದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಎಸ್. ಗಣೇಶ್ ಮಾತನಾಡಿ, ಯಾವುದೇ ಸಾಹಿತ್ಯ ರಚನೆ ಸರ್ವರ ಮೆಚ್ಚುಗೆಗಳಿಸಿ, ಸಮಾಜದ ಉದ್ಧಾರ ಮತ್ತು ಸಾಹಿತ್ಯದ ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿರಲಿ ಎಂದು ಹೇಳಿದರು.
ಪ್ರತಿಭೆಗಳ ಗುರುತಿಸಿ: ಕರುನಾಡ ಹಣತೆ ಬಳಗದ ಜಿಲ್ಲಾಧ್ಯಕ್ಷ ಲಕ್ಷ್ಮೀಪುರ ಶ್ರೀನಿವಾಸ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಬಳಗದಿಂದ ಎಲೆ ಮರೆ ಕಾಯಿಯಂತಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.
ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ: ಕವಿ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಮಾಸ್ತಿ ಕೃಷ್ಣಪ್ಪ ಮಾತನಾಡಿ, ಕವಿಗಳು ಹೆಚ್ಚು ಅಧ್ಯಯನ ಮಾಡುವ ಮೂಲಕ ಅನುಭವವನ್ನು ಪೋಣಿಸಿ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ, ಕವನಗಳ ರಚನೆ ಮಾಡಬೇಕೆಂದು ಸಲಹೆ ನೀಡಿದರು.
ಶಿಕ್ಷಕಿ ಸಿ.ಪದ್ಮಾವತಿ ಮಾತನಾಡಿ, ಉದಯೋನ್ಮುಖ ಕವಿಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿ ಕೊಂಡು ಮುಖ್ಯವಾಹಿನಿಯ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ ಎಂದರು. ಬಳಗದ ರಾಜ್ಯ ಸಹ ಕಾರ್ಯದರ್ಶಿ ಶಿವಮೂರ್ತಿ ಟಿ.ಕೋಡಿಹಳ್ಳಿ ಮಾತನಾಡಿದರು.
ಕವನ ವಾಚಿಸಿದವರು: ಕವಿಗೋಷ್ಠಿಯಲ್ಲಿ ಕೋಲಾರ ದಿಂದ ಹಣಬೆ ಪಾಪೇಗೌಡ, ಅರಿನಾಗನಹಳ್ಳಿ ಅಮರನಾಥ್, ಮಾಲೂರಿನಿಂದ ಭೀಮಬಂಧು ಮಂಜುನಾಥ್, ಅಮರನಾಥ ಅಚಲ, ಬಂಗಾರ ಪೇಟೆಯಿಂದ ಜಿ.ಟಿ.ರಾಮಚಂದ್ರ, ಈ.ವೆಂಕಟ ಸ್ವಾಮಿ, ಮುಳಬಾಗಿಲಿನಿಂದ ಎನ್.ಸಿ.ರಾಜೇಶ್ವರಿ,
ಎಸ್.ಟಿ.ಭಾರತಿ ಶ್ರೀನಿವಾಸ್, ಶ್ರೀನಿವಾಸಪುರದಿಂದ ಗಾಂಡ್ಲಹಳ್ಳಿ ಎನ್.ಚಲಪತಿ, ಡಿ.ಕೆ.ಶ್ರೀರಾಮರೆಡ್ಡಿ, ಕೆಜಿಎಫ್ನಿಂದ ರೂಪಾ ಶ್ರೀನಿವಾಸ್, ಜಿ.ಗೀತಾ ಸ್ವರಚಿತ ಕವನಗಳ ವಾಚಿಸಿದರು. ಪ್ರಿಯ ಸುಳ್ಯ ಸ್ವಾಗತಿಸಿ, ಸಿ.ಆರ್.ನಟರಾಜ್ ನಾಡಗೀತೆ ಹಾಡಿ ದರು. ಬಿ.ವಿ.ವೆಂಕಟೇಶ್ ವಂದಿಸಿ, ಕೆ.ಆರ್. ವೆಂಕಟೇಶ್ ನಿರೂಪಿಸಿದರು. ಕವನ ವಾಚನ ಮಾಡಿದ ಎಲ್ಲಾ ಕವಿಗಳನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.