ಕೋಲಾರ, ಮಾಲೂರು, ಕೆಜಿಎಫ್‌ನಲ್ಲಿ ಹೆಚ್ಚು ಸೋಂಕು
Team Udayavani, May 19, 2021, 4:45 PM IST
ಕೋಲಾರ: ಜಿಲ್ಲೆಯಲ್ಲಿ ಕೋಲಾರ, ಮಾಲೂರು,ಕೆಜಿಎಫ್ ತಾಲೂಕುಗಳಲ್ಲಿ ಹೆಚ್ಚಿನ ಕೋವಿಡ್‌ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವಅರವಿಂದ ಲಿಂಬಾವಳಿ ತಿಳಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿಭಾಗವಹಿಸಿದ್ದ ಬಳಿಕ ಸುದ್ದಿಗಾರರೊಂದಿಗೆ ಅವರುಮಾತನಾಡಿ, ಸೋಂಕು ತಡೆಗೆ ಕಠಿಣ ಕ್ರಮಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆ ತಾಲೂಕುಗಳಲ್ಲಿ ಲಾಕ್‌ಡೌನ್ ಕ್ರಮ ಮತ್ತಷ್ಟು ಬಿಗಿಗೊಳಿಸುವಸಂಬಂಧ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದುಹೇಳಿದರು.
ಡೀಸಿ ಜೊತೆ ಚರ್ಚಿಸಿ ನಿರ್ಧಾರ: ಪ್ರತಿದಿನ 100ಕ್ಕೂಹೆಚ್ಚುಕೊರೊನಾ ಪ್ರಕರಣಗಳು ದೃಢಪಡುವ ದೇಶದ463 ಆಯ್ದ ಜಿಲ್ಲೆಗಳ ಉಸ್ತುವಾರಿ ಸಚಿವರು, ಡೀಸಿಗಳೊಂದಿಗೆ ಚರ್ಚೆ ನಡೆಸಿ ಹಲವು ನಿರ್ದೇಶನಗಳನ್ನುಪ್ರಧಾನಿ, ಗೃಹ ಸಚಿವರು ನೀಡಿದ್ದಾರೆ. ಕರ್ನಾಟಕದಲ್ಲಿ ಕೋಲಾರ ಸೇರಿ 17 ಜಿಲ್ಲೆಯವರು ಭಾಗವಹಿಸಿದ್ದು, ಪ್ರಧಾನಿಯೊಂದಿಗಿನ ಸಂವಾದದ ಬಳಿಕ ನಾವೂಡೀಸಿಯೊಂದಿಗೆ ಚರ್ಚಿಸಿ ಹಲವು ತೀರ್ಮಾನಮಾಡಿರುವುದಾಗಿ ತಿಳಿಸಿದರು.
ಸೋಂಕಿತರ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಹೋಂಐಸೋಲೇಶನ್‌ನಲ್ಲಿರುವ 5000ಕ್ಕಿಂತಲೂ ಹೆಚ್ಚುಮಂದಿಯನ್ನು ಪ್ರತಿದಿನ ದೂರವಾಣಿ ಕರೆ ಮೂಲಕವಿಚಾರಿಸಬೇಕು. ಪ್ರತಿ ಗ್ರಾಮದಲ್ಲಿ ಟಾಸ್ಕ್ಫೋರ್ಸ್ ನಡೆಸಿ ಆ ಭಾಗದ ಸದಸ್ಯರು, ಗ್ರಾಪಂನವರು ಸೋಂಕಿತರ ಮಾಹಿತಿ ನೀಡಬೇಕು ಎಂದು ಹೇಳಿದರು.
ಸೋಂಕು ಕಡಿಮೆ ಮಾಡಲು ಕ್ರಮ: ಮನೆಯಲ್ಲಿಯೇ ಇರುತ್ತಾರಾ ಅಥವಾ ಹೊರಗೆ ಓಡಾಡುತ್ತಾರಾ ಎನ್ನುವುದನ್ನು ಪರಿಶೀಲಿಸಿ ಓಡಾಡುವವರನ್ನುಕೋವಿಡ್ ಕೇರ್ ಸೆಂಟರ್‌ಗೆ ಕರೆ ತರಲು ಚಿಂತಿಸಿದ್ದು,ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆಯನ್ನು ಕ್ರಮೇಣ ಕಡಿಮೆಯಾಗಿಸಲು ಅಗತ್ಯ ಕ್ರಮಕೈಗೊಳ್ಳಲಿದ್ದೇವೆಎಂದು ವಿವರಿಸಿದರು.
ಜಿಲ್ಲಾಡಳಿತ ಅನುಮತಿ: ಕೊರೊನಾ ಗ್ರಾಮ ಮಟ್ಟದಟಾಸ್ಕ್ಪೋರ್ಸ್‌ನಲ್ಲಿ ಪಕ್ಷಭೇದ ಮರೆತು ಕೈಜೋಡಿಸಬೇಕು. ಕೊರೊನಾ ಮುಕ್ತ ಗ್ರಾಮವಾಗಿಸಲು ಗುರಿನೀಡಲಾಗುವುದು. ಖಾಸಗಿ ಕೋವಿಡ್ ಕೇರ್‌ಸೆಂಟರ್ ನೀಡಲು ಸರಕಾರ, ಜಿಲ್ಲಾಡಳಿತವುಅನುಮತಿ ನೀಡಲಿದೆ ಎಂದು ವಿವರಿಸಿದರು.
ಗೌರವ ಧನ: ಅಸೋಷಿಯೇಷನ್, ಎನ್‌ಜಿಒ,ಆಶ್ರಮ ಸೇರಿ ಯಾರೇ ಮುಂದೆ ಬಂದರೂಅನುಮತಿ ನೀಡಲಾಗುವುದು. ನಂಬಿಕೆಗೆ ಇಂತಹಸಂಸ್ಥೆಗಳು ಅರ್ಹರಾಗಿರುವ ಹಿನ್ನೆಲೆಯಲ್ಲಿ ಬಳಕೆಮಾಡಿಕೊಳ್ಳಲಾಗುತ್ತಿದ್ದು, ಆರೋಗ್ಯ ಸೇವೆಗೆ ಅವರುಬಳಸಿಕೊಳ್ಳುವ ವೈದ್ಯರು, ಸಿಬ್ಬಂದಿಗೆ ಗೌರವ ಧನವನ್ನುನೀಡಲು ಸರಕಾರ ಸಿದ್ಧವಾಗಿದೆ ಎಂದು ತಿಳಿಸಿದರು.
ಕೇರ್ ಸೆಂಟರ್: ಅಲ್ಲದೆ, ಕೋವಿಡ್ ಸಂದರ್ಭದಲ್ಲಿ 30 ಕಂಪನಿಗಳು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲು ಡೀಸಿ ಸೂಚನೆ ನೀಡಲಿದ್ದಾರೆ. ಒಂದು ವೇಳೆ ಹೆಚ್ಚಿನಮಂದಿಗೆ ಪಾಸಿಟಿವ್ ಬಂದರೆ ಅಲ್ಲಿಯೇ ಕೋವಿಡ್‌ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗುವುದುಎಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಡೀಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್,ಎಸ್ಪಿಗಳಾದ ಕೋಲಾರ ಕಾರ್ತಿಕ್‌ರೆಡ್ಡಿ, ಕೆಜಿಎಫ್‌ಇಲಕ್ಕಿಯಾ ಕರುಣಾಕರನ್, ಎಡೀಸಿ ಡಾ.ಸ್ನೇಹಾ,ತಹಶೀಲ್ದಾರ್ ಶೋಭಿತಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.