ಎಂಟಿಬಿಗೆ ಬೇಡವಾದ ಉಸ್ತುವಾರಿ ಲಿಂಬಾವಳಿಗೆ
Team Udayavani, May 8, 2021, 7:14 PM IST
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಐದು ದಿನಗಳ ನಂತರವೂ ಜಿಲ್ಲೆಗೆ ಭೇಟಿ ನೀಡದ ಸಚಿವ ಎಂ.ಟಿ.ಬಿ.ನಾಗರಾಜ್‌ರ ಬದಲಿಗೆ ಶುಕ್ರವಾರ ಸಚಿವ ಅರವಿಂದ ಲಿಂಬಾವಳಿ ಕೋಲಾರ ಜಿಲ್ಲಾಉಸ್ತುವಾರಿ ಹೊಣೆಗಾರಿಕೆ ವರ್ಗಾವಣೆಯಾಗಿದೆ.
ಕೋಲಾರ ಜಿಲ್ಲೆಗೆ ಕೊರೊನಾದಂತ ದುರಿತ ಕಾಲದಲ್ಲಿಉಸ್ತುವಾರಿ ಸಚಿವರಿಲ್ಲದಿರುವುದು ಸಾರ್ವಜನಿಕವಾಗಿಟೀಕೆಗೆ ಗುರಿಯಾಗಿತ್ತು. ಕೋಲಾರದ ಎಸ್‌ಎನ್‌ಆರ್‌ಆಸ್ಪತ್ರೆಯಲ್ಲಿ ಅಮ್ಲಜನಕದ ಪೂರೈಕೆ ಲೋಪದಿಂದಒಂದೇ ರಾತ್ರಿ 8 ಮಂದಿ ಸಾವನ್ನಪ್ಪಿದ ಘಟನೆ ನಂತರವಂತೂ ಉಸ್ತುವಾರಿ ಸಚಿವರ ಅಗತ್ಯತೆ ಕಾಡತೊಡಗಿತ್ತು.
ನಿರೀಕ್ಷೆ ಹುಸಿ: ತಡವಾಗಿಯಾದರೂ ಎಚ್ಚೆತ್ತುಕೊಂಡಬಿಜೆಪಿ ಸರ್ಕಾರ ಕಳೆದ ಭಾನುವಾರ ಕೋಲಾರ ಜಿಲ್ಲೆಗೂಉಸ್ತುವಾರಿ ಸಚಿವರನ್ನು ನೇಮಕ ಮಾಡಿತ್ತು.ಉಸ್ತುವಾರಿ ಹೊಣೆ ಹೊತ್ತುಕೊಂಡ ತಕ್ಷಣವೇ ಕೋಲಾರಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹೊಸಕೋಟೆಯಿಂದ ಸಚಿವರು ಆಗಮಿಸಿ ಕೊರೊನಾ ನಿರ್ವಹಣೆಯಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಾರೆಂಬ ನಿರೀಕ್ಷೆಜಿಲ್ಲೆಯ ಜನರಲ್ಲಿತ್ತು.
ಫೀಲ್ಡಿಗೆ ಇಳಿಯದೇ ನಿರ್ಗಮನ: ಆದರೆ, ಐದು ದಿನಕಳೆದರೂ ಎಂ.ಟಿ.ಬಿ.ನಾಗರಾಜ್ ಕೋಲಾರದತ್ತಸುಳಿಯ ಲಿಲ್ಲ. ಇಂದು ಬರಬಹುದು ನಾಳೆಬರಬಹುದು ಎಂದು ಜನತೆ ನಿರೀಕ್ಷಿಸಿದ್ದೇ ಬಂತು. ಐದುಕಳೆದರೂ ಸಚಿವರ ದರ್ಶನವಾಗಲಿಲ್ಲ. ಬೆಂಗಳೂರುಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಬಯಸಿದ್ದ ಎಂಟಿಬಿನಾಗರಾಜ್‌ಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಬೇಡದಹೊರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅನಾರೋಗ್ಯದನೆಪವೊಡ್ಡಿ ಜಿಲ್ಲೆಯ ಉಸ್ತುವಾರಿ ಹೊಣೆಹೊತ್ತುಕೊಳ್ಳುವುದರಿಂದ ನುಣುಚಿಕೊಂಡಿದ್ದಾರೆ.ಫೀಲ್ಡಿಗೆ ಇಳಿಯದೆ ಆಟದಿಂದ ನಿರ್ಗಮಿಸಿದ್ದಾರೆ.ಇದರಿಂದ ಸಹಜವಾಗಿಯೇ ಕೋಲಾರ ಜಿಲ್ಲೆಯಉಸ್ತುವಾರಿ ಸಚಿವರ ಪಟ್ಟಿಯಲ್ಲಿದ್ದ ಮತ್ತೂಬ್ಬ ಸಚಿವಅರವಿಂದ ಲಿಂಬಾವಳಿಗೆ ಹೊಣೆಗಾರಿಕೆ ನೀಡಿ ಶುಕ್ರವಾರಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಗೆ ಹೊಸಬರೇನಲ್ಲ: ಉತ್ತರ ಕರ್ನಾಟಕದಅರವಿಂದ ಲಿಂಬಾವಳಿ ಕೋಲಾರ ಜಿಲ್ಲೆಗೆಹೊಸಬರೇನಲ್ಲ. ಬೆಂಗಳೂರಿನಲ್ಲಿಯೇ ವಾಸವಾಗಿರುವಇವರು ಈ ಹಿಂದೆಯೂ ಬಿಜೆಪಿ ಸರ್ಕಾರ ಇದ್ದಾಗ2010ರಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿಕಾರ್ಯನಿರ್ವಹಿಸಿದ್ದರು. ಕೋಲಾರ ಜಿಲ್ಲೆಯ ಬಹುತೇಕರಾಜಕಾರಣಿಗಳ ಪರಿಚಯವೂ ಇದೆ. ಆದರೆ, ಹಿಂದೆನಿರ್ವಹಿಸಿದ ವಾತಾವರಣಕ್ಕಿಂತಲೂ ಈಗ ವಿಭಿನ್ನಪರಿಸ್ಥಿತಿ ಇದೆ.
ಹೊಂದಾಣಿಕೆ ಕೊರತೆ: ಸದ್ಯ ಕೋಲಾರ ನಾವಿಕನಿಲ್ಲದಹಡಗಿನಂತಾಗಿದೆ. ಪಕ್ಷಕ್ಕೊಬ್ಬರು ಶಾಸಕರುಆಯ್ಕೆಯಾಗಿದ್ದು, ಜನಪ್ರತಿನಿಧಿಗಳ ನಡುವೆಹೊಂದಾಣಿಕೆಯ ಕೊರತೆ ಇದೆ. ಇದರ ಲಾಭಪಡೆಯುವ ಹವಣಿಕೆಯಲ್ಲಿ ಸಂಸದ ಎಸ್.ಮುನಿಸ್ವಾಮಿತಾವೊಬ್ಬರೇ ಎಲ್ಲವನ್ನು ನಿಬಾಯಿಸುತ್ತಿ ರುವುದಾಗಿತೋರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೊರೊನಾ ನಿಯಂತ್ರಣ ವಿಚಾರದಲ್ಲಿ ಆಸ್ಪತ್ರೆ ಹಂತದ ಸಮಸ್ಯೆಗಳು ಬಗೆಹರಿದಿಲ್ಲ. ದಿನ ಕಳೆದಂತೆ ಸೋಂಕಿತರ ಸಂಖ್ಯೆಹೆಚ್ಚಾಗುತ್ತಿದೆ. ಸಾವುಗಳು ಪ್ರತಿ ರಸ್ತೆ, ಹಳ್ಳಿಯಲ್ಲೂಆಗುತ್ತಿದೆ. ಅಧಿಕಾರಿಗಳು ಯುದ್ಧಕಾಲದ ಶಸ್ತ್ರಾಭ್ಯಾಸಎಂಬಂತೆ ಚಡಪಡಿಸುತ್ತಿದ್ದಾರಾದರೂ ಸೋಂಕಿತರಿಗೆನೆಮ್ಮದಿಯ ಚಿಕಿತ್ಸೆ ಮಾತ್ರ ಸಿಗುತ್ತಿಲ್ಲ.ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ, ಯಾವ ಆಸ್ಪತ್ರೆಯಲ್ಲಿಎಷ್ಟು ಬೆಡ್ ಖಾಲಿ ಇದೆ ಎಂಬ ಮಾಹಿತಿಯನ್ನುಕೊಡುವವರಿಲ್ಲ, ಖಾಸಗಿ ಆಸ್ಪತ್ರೆಗಳು ಅಧಿಕಾರಿಗಳಮಾತು ಕೇಳುತ್ತಿಲ್ಲ, ಬೆಂಗಳೂರು ಬೆಡ್ ಬ್ಲಾಕ್‌ಮಾದರಿಯಲ್ಲೇ ಪ್ರಭಾವಿಗಳ ದೂರವಾಣಿಗೆ ಬೆಡ್‌ಸಿಗುತ್ತಿದೆ.
ಕೋವಿಡ್ ಲಸಿಕೆ ದಾಸ್ತಾನಿಲ್ಲ, ಆಮ್ಲಜನಕದಕೊರತೆ ಯಥಾಪ್ರಕಾರ ಮುಂದುವರಿದಿದೆ, ರೆಮ್‌ಡೆಸಿವಿಯರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.
ಹೊಂದಾಣಿಕೆ ಅಗತ್ಯ: ಐಸಿಯು, ವೆಂಟಿಲೇಟರ್‌ಗಳನ್ನು ಬಳಕೆ ಮಾಡಲು ತಾಂತ್ರಿಕ ಸಿಬ್ಬಂದಿಯ ಕೊರತೆಇದೆ. ದಾದಿ ವೈದ್ಯರ ಕೊರತೆಯೂ ಕಾಡುತ್ತಿದೆ. ಇಡೀವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ. ತಕಣಕೆ Ò R ಇವೆಲ್ಲವನ್ನುಸರಿಪಡಿಸುವ ಜವಾಬ್ದಾರಿ ಉಸ್ತುವಾರಿ ಸಚಿವರ ಮೇಲಿದೆ.
ಬಂದು ಗಮನಿಸುತ್ತೇನೆ, ನೋಡುತ್ತೇನೆಎಂಬ ಮನೋಭಾವ ಹೊಂದಿದ್ದರೆ ಸಾವಿನ ಸಂಖ್ಯೆಏರುತ್ತಲೇ ಇರುತ್ತದೆ. ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿಅಧಿಕಾರಿಗಳನ್ನು ಚುರುಕುಗೊಳಿಸಿ ದಿಕ್ಕಿಗೊಬ್ಬರಂತಿರುವಜನಪ್ರತಿನಿಧಿಗಳ ಸಹಕಾರ ಕ್ರೋಡೀಕರಿಸಿಕೊಂಡರೆಮಾತ್ರವೇ ಸುಧಾರಣೆ ಸಾಧ್ಯ.
ಮತ್ತೆ ಸ್ವಾಗತಗಳ ಸುರಿಮಳೆ: ಎಂ.ಟಿ.ಬಿ. ನಾಗರಾಜ್‌ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೆಲವೇಕ್ಷಣಗಳಲ್ಲಿ ಬಿಜೆಪಿಯ ಮುಖಂಡರು ಕಾರ್ಯಕರ್ತರುಸ್ವಾಗತ ಕೋರಿದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ತುಂಬಿ ಬಿಟ್ಟಿದ್ದರು. ಆದರೆ, ನಾಗರಾಜ್‌ಕೋಲಾರದತ್ತ ಮುಖ ಮಾಡಲಿಲ್ಲ. ಇದೀಗ ಅರವಿಂದಲಿಂಬಾವಳಿಯ ಹೆಸರು ಪ್ರಕಟವಾಗುತ್ತಿ¨ಂತª ಯೇಮತ್ತದೇ ರೀತಿಯಲ್ಲಿ ಬಿಜೆಪಿ ಪಾಳೆಯದ ಸಾಮಾಜಿಕಜಾಲತಾಣದ ಸಂದೇಶಗಳು ಚುರುಕುಗೊಂಡು ಸ್ವಾಗತಕೋರುತ್ತಿವೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.