ಜಾನುವಾರು ಸಂರಕ್ಷಣೆಗೆ ಗೋಮಾಳವೇ ಇಲ್ಲ  


Team Udayavani, Feb 6, 2021, 2:36 PM IST

Mulabagilu

ಮುಳಬಾಗಿಲು: ತಾಲೂಕಿನ ಆವಣಿ ಹೋಬಳಿಯ 75 ಹಳ್ಳಿಗಳಲ್ಲಿ 22 ಸಾವಿರ ಜಾನುವಾರುಗಳಿಗೆ ನಿಯ ಮಾನು ಸಾರ 6,832  ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ ಸರ್ಕಾರದ ನಿಯ ಮದಿಂದ ಒಂದೇ ಒಂದು ಎಕರೆ ಜಮೀನು ಕಾಯ್ದಿರಿಸದ ಕಾರಣ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಸಂದರ್ಭದಲ್ಲಾದರೂ ಜಾನುವಾರುಗಳ ಸಂರಕ್ಷಣೆಗಾಗಿ ಜಮೀನು ಕಾಯ್ದಿರಿಸ ಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಬಲ್ಲ ವೃತ್ತ, ಕಾಯ್ದಿರಿಸಬೇಕು 415 ಎಕರೆ: ತಾಲೂಕಿನ ಆವಣಿ ಹೋಬಳಿಯಲ್ಲಿ ಬಲ್ಲ ವೃತ್ತದಲ್ಲಿ ಕಾಶೀಪುರ, ಬಲ್ಲ, ಕೆ.ಚದುಮನಹಳ್ಳಿ,  ಶೆಟ್ಟಿಬಣಕನಹಳ್ಳಿ ಗ್ರಾಮ ಗಳಲ್ಲಿ 384 ಎಕರೆ ಗೋಮಾಳವಿದ್ದು ಬಲ್ಲ ಮತ್ತು ಕಾಶೀಪುರದಲ್ಲಿ ಉಳಿದ 44 ಎಕರೆ ಜಮೀನನ್ನು  ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು 32 ಎಕರೆ ಉಳಿಕೆ ಇರುತ್ತದೆ. ಈ ಹಳ್ಳಿಗಳಲ್ಲಿ 1,395 ಜಾನುವಾರುಗಳಿದ್ದು ಹಿಂ  ದಿನ ಸರ್ಕಾರಿ ಆದೇಶದಂತೆ 100 ಜಾನುವಾರುಗಳಿಗೆ 37 ಎಕರೆ ಜಮೀನು ಕಾಯ್ದಿರಿಸಬೇಕೆಂಬ ನಿಯಮದಂತೆ ಜಾನುವಾರು ಸಂರಕ್ಷಣೆಗಾಗಿ 415 ಎಕರೆ ಜಮೀನು ಕಾಯ್ದಿರಿಸಬೇ ಕಾಗಿತ್ತು. ಆದರೆ ಒಂದೇ ಒಂದು ಎಕರೆ ಜಮೀನನ್ನೂ ಸಹ ಕಾಯ್ದಿರಿಸ  ಲಾಗಿಲ್ಲ ಆದ್ದರಿಂದ ಜಾನುವಾರುಗಳ ಸಂರಕ್ಷಣೆ ಹೇಗೆ ಎಂಬ ಆತಂಕ ಸಾಕಾಣಿಕೆದಾರರಿಗೆ ಎದುರಾಗಿದೆ.

ಎಮ್ಮೇನತ್ತ ವೃತ್ತ: ಜೋಗಲಕಾಷ್ಟಿ, ಕನ್ನತ್ತ, ಎಮ್ಮೇನತ್ತ, ಪದಕಾಷ್ಟಿ ಗ್ರಾಮಗಳಲ್ಲಿ 277 ಎಕರೆ ಗೋಮಾಳದಲ್ಲಿ ಉಳಿದಿರುವ 66 ಎಕರೆ ಜಮೀನನ್ನು ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುತ್ತಾರೆ. 1,152 ಜಾನುವಾರು ಗಳಿದ್ದು 343 ಎಕರೆ  ಕಾಯ್ದಿರಿಸಬೇಕಾಗಿತ್ತಾದರೂ 18 ಎಕರೆ ಮಾತ್ರ ಉಳಿಕೆ ಇರುತ್ತದೆ.

ವಿ.ಗುಟ್ಟಹಳ್ಳಿ ವೃತ್ತ: ವಿಜಲಾಪುರ, ವಿ.ಗುಟ್ಟಹಳ್ಳಿ, ಕುಮದೇನಹಳ್ಳಿ, ಎಸ್‌.ಐ.ಅನಂತಪುರ, ಅಸಲಿ ಅತ್ತಿಕುಂಟೆ, ಜಮ್ಮನಹಳ್ಳಿ, ಕುರುಬರಹಳ್ಳಿ, ವರದಗಾನಹಳ್ಳಿ, ದೊಡ್ಡಮಾದೇನಹಳ್ಳಿ ಗ್ರಾಮಗಳಲ್ಲಿ 1,408 ಎಕರೆ ಗೋಮಾಳದಲ್ಲಿ ಉಳಿದಿರುವ 549 ಎಕರೆ ಜಮೀನನ್ನು ರೈತರು ಅನಧಿಕೃತವಾಗಿ ಸಾಗುವಳಿ, 2,747 ಜಾನುವಾರುಗಳಿದ್ದು 1039 ಎಕರೆ ಜಮೀನು ಕಾಯ್ದಿರಿಸಬೇಕಾಗಿತ್ತು. ಆದರೆ 25 ಎಕರೆ ಜಮೀನು ಮಾತ್ರ ಉಳಿಕೆ ಇರುತ್ತದೆ.

ಮೇಲಾಗಾಣಿ ವೃತ್ತ: ಕೀಲಾಗಾಣಿ, ಮೇಲಾಗಾಣಿ,ಮಲ್ಲಕಚ್ಚನಹಳ್ಳಿ, ಕಾಡುಕಚ್ಚನಹಳ್ಳಿ, ಸಂಗೊಂಡಹಳ್ಳಿ, ಗೊಟ್ಟಿಕುಂಟೆ ಈ ಹಳ್ಳಿಗಳಲ್ಲಿ 971 ಎಕರೆ ಗೋಮಾಳಪೈಕಿ 469 ಎಕರೆ ಮಂಜೂರಾಗಿರುತ್ತದೆ. 431 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ, 1350 ಜಾನುವಾರುಗಳಿಗೆ 403 ಎಕರೆ ಕಾಯ್ದಿರಿಸಬೇಕಾಗಿತ್ತು, ಆದರೆ ಪ್ರಸ್ತುತ 63 ಎಕರೆ ಉಳಿಕೆ ಇರುತ್ತದೆ. ಕೊತ್ತಮಂಗಲ ವೃತ್ತ: ಕಮ್ಮದಟ್ಟಿ-ಕಾಮನೂರು, ಕೊತ್ತ  ಮಂಗಳ, ಬನಹಳ್ಳಿ, ಕಟ್ಟಿಗೇನಹಳ್ಳಿ, ಅನಂತಪುರ, ಕುರುಬರಹಳ್ಳಿ ಗ್ರಾಮಗಳಲ್ಲಿ 876 ಎಕರೆ ಗೋಮಾಳದಲ್ಲಿ ಉಳಿದ 491 ಎಕರೆ ಜಮೀನಿನಲ್ಲಿ ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು, 1,398 ಜಾನುವಾರುಗಳಿದ್ದು 448 ಎಕರೆ ಕಾಯ್ದಿರಿಸಬೇಕಾಗಿತ್ತು. ಆದರೆ ಸ್ವಲವೂ ಜಾಗವೂ ಉಳಿಕೆ ಇರುವುದಿಲ್ಲ.

ಊ.ಮಿಟ್ಟೂರು ವೃತ್ತ: ಆವಲಮರಕಲಘಟ್ಟ, ಊ. ಮಿಟ್ಟೂರು, ನಾಗಸಂದ್ರ, ಬಂಡಹಳ್ಳಿ ಗ್ರಾಮಗಳಲ್ಲಿ ಕಾಯ್ದಿ ರಿಸಿದ್ದ 501 ಎಕರೆ ಗೋಮಾಳದಲ್ಲಿ ಉಳಿದ 67 ಎಕರೆ ಜಮೀನನ್ನು ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುತ್ತಾರೆ. 1,588 ಜಾನುವಾರುಗಳಿದ್ದು 473 ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ 110 ಎಕರೆ ಜಮೀನು ಮಾತ್ರ ಉಳಿಕೆ ಇರುತ್ತದೆ.

ರೆಡ್ಡಿಹಳ್ಳಿ ವೃತ್ತ: ಚೆನ್ನಾಪುರ, ರೆಡ್ಡಿಹಳ್ಳಿ, ಕಗ್ಗಿನಹಳ್ಳಿ,ಯಡಹಳ್ಳಿ, ಬೊಮ್ಮಸಂದ್ರ, ಶೇಷಾಪುರ, ವೀರಶೆಟ್ಟಿಹಳ್ಳಿ, ಚಿತ್ತೇರಿ, ಕಮ್ಮರಕುಂಟೆಯಲ್ಲಿ 497 ಎಕರೆ ಗೋಮಾಳ ದಲ್ಲಿ 2,562 ಜಾನುವಾರುಗಳಿಗೆ 765 ಎಕರೆ ಕಾಯ್ದಿರಿ ಸಬೇಕಾಗಿದ್ದು 52 ಎಕರೆ ಮಾತ್ರ ಉಳಿಕೆ ಇರುತ್ತದೆ. ಅಂಗೊಂಡಹಳ್ಳಿ ವೃತ್ತ: ಸುಣ್ಣಂಗೂರು, ಅಂ ಗೊಂ ಡಹಳ್ಳಿ, ಹೊನಗಾನಹಳ್ಳಿ, ಬೆಳಪನಹಳ್ಳಿ,  ಕೊರವೇನೂರು ಗ್ರಾಮಗಳಲ್ಲಿನ 434 ಎಕರೆ ಗೋಮಾಳದಲ್ಲಿ ಉಳಿದಿರುವ 126 ಎಕರೆ ಜಮೀನನ್ನು ಅನಧಿಕೃತವಾಗಿ

ಸಾಗು ವಳಿ ಮಾಡುತ್ತಿರುತ್ತಾರೆ. 2,381 ಜಾನುವಾರುಗಳಿಗೆ 7,11 ಎಕರೆ ಕಾಯ್ದಿರಿಸಬೇಕಾಗಿತ್ತಾದರೂ ಒಂದೇ ಒಂದು ಎಕರೆ ಜಮೀನು ಉಳಿಕೆ ಇರುವುದಿಲ್ಲ. ದೇವರಾಯಸಮುದ್ರ ವೃತ್ತ: ಬೆಳ್ಳಂಬಳ್ಳಿ, ದೇವರಾಯಸಮುದ್ರ, ದೊಡ್ಡಿಗಾನಹಳ್ಳಿ, ಕನ್ನಸಂದ್ರ ವೃತ್ತಕ್ಕೆ ಬಾದೇನಹಳ್ಳಿ, ಮಜರಾ ಅತ್ತಿಕುಂಟೆ, ತಿರುಮನಹಳ್ಳಿ, ಕನ್ನಸಂದ್ರ ಗ್ರಾಮಗಳಲ್ಲಿನ 1,721 ಎಕರೆ ಗೋಮಾಳದಲ್ಲಿ 1,459 ಜಾನುವಾರುಗಳಿಗೆ 4,37 ಎಕರೆ ಕಾಯ್ದಿರಿಸಬೇಕಾಗಿತ್ತು. 141 ಎಕರೆ ಉಳಿಕೆ ಇರುತ್ತದೆ. ದೇವರಾಯಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿದೆ, ಅಂತೆಯೇ ಕೈಗಾರಿಕೆ ಸ್ಥಾಪನೆಗೆ ಒತ್ತು  ನೀಡಲಾಗಿದೆ. ಆದರೆ ಜಾನುವಾರುಗಳಿಗೆ ಒಂದೇ ಒಂದು ಎಕರೆಯೂ ಕಾಯ್ದಿರಿಸಿಲ್ಲ.

ಯಳಗೊಂಡಹಳ್ಳಿ ವೃತ್ತ: ಮಿಣಜೇನಹಳ್ಳಿ,ಯಳಗೊಂಡಹಳ್ಳಿ, ಪಿಚ್ಚಗುಂಟ್ಲಹಳ್ಳಿ, ಚಿಯಾಂಡಹಳ್ಳಿ, ಕೀಲು ಹೊಳಲಿ,  ದೊಡ್ಡಹೊನ್ನಶೆಟ್ಟಿಹಳ್ಳಿ, ಕೆಂಂಪಾಪುರ, ಹೊಸಕೆರೆ, ಪುತ್ತೇರಿ ಗ್ರಾಮಗಳಲ್ಲಿನ 1,721 ಎಕರೆ ಗೋಮಾಳದಲ್ಲಿ 1,459 ಜಾನುವಾರುಗಳಿಗೆ 437 ಎಕರೆಕಾಯ್ದಿರಿಸಬೇಕಾಗಿತ್ತು. ಆದರೆ 141 ಎಕರೆ ಮಾತ್ರ ಉಳಿಕೆ ಇರುವುದರಿಂದ ಯಾವುದೇ ಹಳ್ಳಿಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹುಲ್ಲುಗಾವಲು ಇಲ್ಲದೇ ಇರುವುದರಿಂದ ಮುಂದೆ ಜಾನುವಾರುಗಳ ಸಂರಕ್ಷಣೆ ಹೇಗೆ ಎಂಬ ಆತಂಕ ದನಗಾಹಿಗಳಲ್ಲಿ ಎದುರಾಗಿರುತ್ತದೆ. ಒಟ್ಟಿನಲ್ಲಿ ಸರ್ಕಾರದ ವಿವಿಧ ಕಲ್ಯಾಣ ಹಾಗೂ ಮೂಲಭೂತ ಸೌಕರ್ಯದ ಯೋಜನೆಗಳಿಗಾಗಿ ಮತ್ತು ವಸತಿ, ಸ್ಮಶಾನ ಭೂಮಿಯಂತಹ ಸಾರ್ವಜನಿಕ ಉದ್ದೇಶ ಗಳಿಗೆ ಸರ್ಕಾರಿ ಜಮೀನಿನ ತೀವ್ರ ಕೊರತೆಯಿದೆ.

 ಇದನ್ನೂ ಓದಿ :ಕ್ರೀಡಾ ಮನೋಭಾವದಿಂದ ಆಟೋಟದಲ್ಲಿ ಪಾಲ್ಗೊಳ್ಳಿ : ಡಿಸಿ ಮಹಾಂತೇಶ

ಖಾಸಗಿಯವರಿಂದಲೇ ಸರ್ಕಾರಕ್ಕೆ ಜಮೀನು ಖರೀದಿಸುವಂತಹ ಅನಿವಾರ್ಯವಾಗಿರುವ ಕಾರಣ ಕರ್ನಾಟಕ ಭೂ ಕಂದಾಯ  ಕಾಯ್ದೆಯಡಿಯಲ್ಲಿ ಜಮೀ ನು ಮಂಜೂರು ಮಾಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜಾನುವಾರುಗಳ ಸಂರಕ್ಷಣೆ ಕಾಯ್ದೆಯನ್ನು ಪರಿಪಾಲಿಸಬೇಕಾಗಿದೆ.

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

10-Thirthahalli

Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.