ಬಡವರ ಪರ ಹೋರಾಟ ಮಾಡಿದ್ದರಿಂದ ಕೇಸ್‌ ಹಾಕಿದ್ರು


Team Udayavani, Apr 14, 2019, 11:47 AM IST

kol-mn

ಕೋಲಾರ: ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತಾಲೂಕಿನ ವೇಮಗಲ್‌, ನರಸಾಪುರ ಮತ್ತು ಕ್ಯಾಲನೂರು ಕ್ಷೇತ್ರಗಳಲ್ಲಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇದುವರೆಗೂ ಕ್ಷೇತ್ರದ ಜನ ಸಾಕಷ್ಟು ತೊಂದರೆಗಳನ್ನು ಪಟ್ಟಿದ್ದಾರೆ. ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ಬಿಜೆಪಿ ಹೆಚ್ಚಿನ ಬಹುಮತದಿಂದ ಗೆಲ್ಲಲೆಬೇಕು ಎಂಬ ಮಾತು ಸಾರ್ವಜನಿಕರಲ್ಲೇ ಬಂದಿದೆ ಎಂದು ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗೇಶ್‌ ಗ್ರಾಮದಲ್ಲಿ ನಡೆದ ರೋಡ್‌ ಶೋ ನಲ್ಲಿ ತಿಳಿಸಿದರು ಎಂದು ಹೇಳಿದರು.

ಹೋರಾಟ ಮಾಡಿದ್ದಕ್ಕೆ ಕೇಸು: ನನ್ನ ಮೇಲೆ ಠಾಣೆಗಳಲ್ಲಿ ಕೇಸ್‌ಗಳಿವೆ ನಿಜ. ಆದರೆ, ಆ ಕೇಸ್‌ ಗಳು ನನ್ನ ಕ್ಷೇತ್ರದಲ್ಲಿ ಬಡವರಿಗಾಗಿ ನೀರಾವರಿಗಾಗಿ, ಚರಂಡಿ ಮಾಡುವುದಕ್ಕೆ, ರಸ್ತೆ ಮಾಡುವುದಕ್ಕೆ, ಫ್ಲೈಒವರ್‌ ಮಾಡುವುದಕ್ಕೆ ಹಾಗೂ ಬಡವರ ಸಮಸ್ಯೆ ನೀಗಿಸುವುದಕ್ಕೆ ಹೋರಾಟಗಳು ಮಾಡಿರುವುದಕ್ಕೆ ಎಂದು ಹೇಳಿದರು.

ಅಕ್ರಮ ನೋಡಿದ್ದೀರಿ: ಬೇಕಾದರೆ ವೈಟ್‌ ಪಿಲ್ಡ್‌, ಕಾಡುಗೋಡಿ ಹಾಗೂ ನನ್ನ ಕ್ಷೇತ್ರದಲ್ಲಿ ಬಂದು ನೋಡಿ, ನಾನು ಕೂಡ ಕೋಲಾರ ಜಿಲ್ಲೆಯವನೇ
ಹಾಗೂ ಕೆ.ಎಚ್‌.ಮುನಿಯಪ್ಪ ಏನೆಂದು ಈಗಾಗಲೇ ನಿಮಗೆ ಗೊತ್ತಿದೆ. ಈ ಕ್ಷೇತ್ರಕ್ಕೆ ಬಂದಾಗಿನಿಂದ ಎಷ್ಟು ಬರಗಾಲ ಬಂದಿದೆ ಎಂದು ನಿಮಗೆ ಗೊತ್ತಿದೆ. ಯಾರು ಯಾರಿಗೆ ಎಷ್ಟೆಷ್ಟೂ ಜಮೀನು ಮಾಡಿಕೊಟ್ಟಿದ್ದಾರೆ ಎಂಬುದು ನೀವು ಪ್ರತಿನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದಿರಿ ಎಂದು ಹೇಳಿದರು. ನರೇಂದ್ರ ಮೋದಿ ಅವರು ರೈತರ ಪರವಾಗಿ ಹಲವು ಸೇವೆ ಮಾಡಿದ್ದಾರೆ. ಅದನ್ನು ಮನೆ ಮನೆಗೂ ಈಗಾಗಲೇ ಪಕ್ಷದವರು ತಲುಪಿಸಿದ್ದಾರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು. ಸಿಂಗಪೂರು ಗೋವಿಂದಪ್ಪ ಮತನಾಡಿ, ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ದೊಡ್ಡ ಲೀಡರ್‌ಗಳೆಲ್ಲ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಮೊದಲ ಬಾರಿಗೇ ವೇಮಗಲ್‌ ಗ್ರಾಮಕ್ಕೆ ಬಂದಾಗ ಹೋಬಳಿಯಾದ್ಯಂತ ಅಭಿಮಾನಿಗಳು ಜಮಾಯಿಸಿದ್ದರು.

ಬಿಜೆಪಿ ಸೇರ್ಪಡೆ: ವೇಮಗಲ್‌, ನರಸಾಪುರ ಮತ್ತು ಕ್ಯಾಲನೂರು ಕ್ಷೇತ್ರದಲ್ಲಿ ಹಲವು ಹಿರಿಯ ಮುಖಂಡರು ಮುನಿಸ್ವಾಮಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ವೇಮಗಲ್‌ ಗ್ರಾಪಂ ಸದಸ್ಯರು, ಎಸ್‌ಎಫ್ಎಸ್‌ ಸಿಎಸ್‌ ಅಧ್ಯಕ್ಷರಾದ ಶೈಲಜಾ ವೆಂಕಟೇಶ್‌, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ, ಗ್ರಾಮಾಂತರ ಉಪಾಧ್ಯಕ್ಷ ಪೊಲೀಸ್‌ ಚಲಪತಿ. ರಾಜಕಲ್ಲಹಳ್ಳಿ ದಿನಕರ್‌, ಕುರುಗಲ್‌ ಆನಂದ್‌, ವೇಮಗಲ್‌ ಓಹಿಲೇಶ್‌, ಚನ್ನಸಂದ್ರ ಸಿ.ಡಿ. ರಾಮಚಂದ್ರಪ್ಪ, ಎಲ್ಲಾ ಯುವಕರು, ಮಹಿಳೆಯರು ಪ್ರಚಾರದಲ್ಲಿ ತೊಡಗಿದ್ದರು.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.