ಸೋರುತಿಹುದು ನಾಡಕಚೇರಿ ಮಾಳಿಗೆ
Team Udayavani, Nov 21, 2021, 5:15 PM IST
ಮಾಲೂರು: ಕಳೆದ ಎರಡು ದಿನಗಳಿಂದ ಟೇಕಲ್ ಸುತ್ತಮುತ್ತ ಮಳೆ ಆಗುತ್ತಿದ್ದು, ಕೆರೆ ಕುಂಟೆಗಳು ತುಂಬಿ ನೀರು ಹರಿಯುತ್ತಿದೆ. ಟೇಕಲ್ ನಾಡಕಚೇರಿಯು ಮಳೆಯಿಂದ ಶಿಥಿಲವಾಗಿದ್ದು, ಚಾವಣಿ ಕಿತ್ತುಹೋಗಿ ನೀರು ಸೋರಿಕೆ ಆಗುತ್ತಿದೆ. ಕಡತಗಳು ಸಂಗ್ರಹಿಸಿ ಇಡುತ್ತಿದ್ದ ಅಬಿಲೇಖಾಲಯದ ಎಲ್ಲಾ ಗೋಡೆ ನೀರು ಹಿಡಿದಿದೆ.
ಇಡೀ ಕಚೇರಿ ಜಲಾವೃತ ಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ರೂಂನಿಂದ ಪಹಣಿ, ಇತರೆ ದಾಖಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಡಕಚೇರಿ ಉಪತಹಶೀಲ್ದಾರ್ ಕಚೇರಿ ಬಳಿ ಮಳೆಯಿಂದ ಕಚೇರಿ ಶಿಥಿಲಗೊಂಡಿದ್ದು, ನ.20ರಂದು ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸೂಚನಾ ಫಲಕವನ್ನು ಲಗತ್ತಿಸಿ, ಕಚೇರಿಗೆ ಬೀಗ ಹಾಕಲಾಗಿದೆ. ರೈತರು ತಮ್ಮ ದಾಖಲೆಗಳು ಸಿಗದೆ ವಾಪಸ್ಸಾದರು.
ಇದನ್ನೂ ಓದಿ:- ಬೇಡಿಕೆ ಈಡೇರಿಕೆಗೆ ರೈತರ ಒತ್ತಾಯ
ಕಳೆದ ಎರಡು ತಿಂಗಳಿಂದಲೇ ಟೇಕಲ್ ನಾಡಕಚೇರಿಯು ಬಹುತೇಕ ಶಿಥಿಲಗೊಂಡಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿಯಾದ ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿ ಇಡೀ ಕಟ್ಟಡ ನೀರು ಹಿಡಿದಿದೆ. ಕಂಪ್ಯೂಟರ್ ರೂಂನಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ, ತಕ್ಷಣ ಕಾರ್ಯ ಸ್ಥಗಿತಗೊಳಿಸಲಾಯಿತು.
ಕಚೇರಿಯ ಎಲ್ಲಾ ಕೊಠಡಿಗಳು ಮಳೆಯಿಂದ ನೆನೆಯುತ್ತಿದ್ದು, ಅಧಿ ಕಾರಿಗಳು ಕುಳಿತು ಕೆಲಸ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ನಾಡಕಚೇರಿ ಉಪತಹಶೀಲ್ದಾರ್ ಜಗನ್ನಾಥರೆಡ್ಡಿ ಮಾತನಾಡಿ, ನಿರಂತರ ಮಳೆಗೆ ರೆಕಾರ್ಡ್ ರೂಮ್ ಸೋರಿಕೆ ಆಗುತ್ತಿದ್ದು, ಕಡತಗಳನ್ನು ಸಂರಕ್ಷಿಸಲು ಟಾರ್ಪಲ್ ಹಾಕಲಾಗಿದೆ.
ಕಂಪ್ಯೂಟರ್ ರೂಂನಲ್ಲಿ ನೀರು ಸುರಿಯುತ್ತಿರುವ ಕಾರಣ ಕರೆಂಟ್ ಶಾಕ್ ಹೊಡೆಯುತ್ತಿದ್ದು, ನಾಡಕ ಚೇರಿಯ ಕಾರ್ಯಚಟುವಟಿಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ಹೇಳಿದರು. ಮಳೆ ನಿಲ್ಲುವ ಸೂಚನೆ ನೋಡಿಕೊಂಡು ಶಿಥಿಲವಾದ ಕಡೆ ಸ್ವಲ್ಪಮಟ್ಟಿಗೆ ರೀಪೇರಿ ಮಾಡಿಕೊಂಡು ಮುಂದು ವರಿಸಲಾಗುತ್ತದೆ. ಕೆ.ಜಿ.ಹಳ್ಳಿ ಸರ್ವೆ ನಂ.10ರಲ್ಲಿ 20 ಗುಂಟೆ ಸ್ಥಳ ನಾಡಕಚೇರಿಗೆ ಮಂಜೂರು ಆಗಿದ್ದು, ಡೀಸಿ ಆದೇಶದಂತೆ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.