3 ವರ್ಷವಾದ್ರೂ ಸಾಲ ಪಾವತಿಸದೇ ನಿರ್ಲಕ್ಷ್ಯ
Team Udayavani, Sep 1, 2019, 1:06 PM IST
ಬೇತಮಂಗಲ ಗ್ರಾಮದ ಹನುಮಂತ ನಗರದ ಡಿಸಿಸಿ ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡಿದ್ದ ಸ್ವಸಹಾಯ ಸಂಘದ ಸದಸ್ಯರು, ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ನಡುವೆ ಮಾತುಕತೆ ನಡೆಯಿತು.
ಬೇತಮಂಗಲ: ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳು ಸಾಲ ಪಡೆದುಕೊಂಡು, ಮೂರು ವರ್ಷ ಕಳೆದರೂ ಪಾವತಿ ಮಾಡದ ಸದಸ್ಯ ರನ್ನು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನೆಯ ಬಳಿಗೆ ಬಂದು ತರಾಟೆಗೆ ತೆಗೆದುಕೊಂಡರು.
ಗ್ರಾಮದ 3ನೇ ಬ್ಲಾಕ್‌ನ ಹನುಮಂತ ನಗರ ನಿವಾಸಿಗಳು ಮಹಿಳಾ ಸ್ವಸಹಾಯ ಸಂಘಗಳನ್ನು ಮಾಡಿಕೊಂಡು ತಲಾ 5 ಲಕ್ಷ ರೂ. ನಂತೆ ಸಾಲ ಪಡೆದುಕೊಂಡು, 3 ವರ್ಷ ಕಳೆಯುತ್ತಿದ್ದರೂ ಸಕಾಲಕ್ಕೆ ಪಾವತಿ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಶೇ.50ರಷ್ಟು ಪಾವತಿ: ಸಾಲ ಪಡೆದುಕೊಂಡ ಮಹಿಳಾ ಪ್ರತಿನಿಧಿಗಳ ಮನೆ ಬಾಗಿಲಿಗೆ ಬ್ಯಾಂಕ್ ನೌಕರರು ಮತ್ತು ಸಿಬ್ಬಂದಿ 3 ವರ್ಷಗಳಿಂದ ಪ್ರತಿ ತಿಂಗಳು ಪ್ರತಿನಿಧಿಗಳ ಮನೆ ಬಳಿ ಭೇಟಿ ನೀಡಿ, ಪಾವತಿ ಮಾಡಲು ಮನವಿ ಮಾಡಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಪಡೆದುಕೊಂಡ ಸಾಲದಲ್ಲಿ 3 ವರ್ಷಗ ಳಿಂದಲೂ ಸಂಘದ ಸದಸ್ಯರು ಶೇ.5ಂ ಭಾಗಕ್ಕಿಂತಲೂ ಕಡಿಮೆ ಪಾವತಿ ಮಾಡಿದ್ದಾರೆ ಎಂದು ದೂರಿದರು.
ಸಾಲ ಬಾಕಿ ಉಳಿಸಿಕೊಂಡ ಸಂಘಗಳು: ಶ್ರೀಲಕ್ಷ್ಮೀ ವೆಂಕಟೇಶ್ವರ ಸಂಘ, ವಿಜಯೇಂದ್ರಸ್ವಾಮಿ ಸಂಘ, ಯಲ್ಲಮ್ಮ ಸಂಘ, ಗಂಗಮ್ಮ ಸಂಘ ಸೇರಿ ಎಲ್ಲಾ
ಮಹಿಳಾ ಸಂಘಗಳು ಸಾಲ ಪಡೆದು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.
ಸಂಘದ ಪ್ರತಿನಿಧಿಗಳಿಂದ ಮೋಸ: ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸಕಾಲಕ್ಕೆ ಹಣ ಪಾವತಿ ಮಾಡುತ್ತಿದ್ದರೂ ಸಂಘದ ಪ್ರತಿನಿಧಿಗಳು ಡಿಸಿಸಿ ಬ್ಯಾಂಕ್‌ಗೆ ಪಾವತಿ ಮಾಡದೆ ವಂಚಿಸಿರುವ ಘಟನೆ ಬೆಳಕಿಗೆ ಬಂತು. ವಿಷಯ ಬಯಲಾಗುತ್ತಿದ್ದಂತೆ ಕೋಪಗೊಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಂಘದ ಎಲ್ಲಾ ಸದಸ್ಯರನ್ನು ಜತೆ ಸ್ಥಳದಲ್ಲೇ ವಿಚಾರಣೆ ನಡೆಸಿದರು. ಕೆಲವು ಸದಸ್ಯರು ಬಾಕಿ ಉಳಿಸಿಕೊಂದ್ದ ಹಣವನ್ನು ಅಧ್ಯಕ್ಷರ ಉಪಸ್ಥಿತಿಯಲ್ಲಿ ಬಾಕಿ ಹಣದಲ್ಲಿ ಒಂದಷ್ಟು ಹಣವನ್ನು ಪಾವತಿ ಮಾಡಿದ ಪ್ರಸಂಗ ನಡೆಯಿತು.
ತಪ್ಪು ಒಪ್ಪಿಕೊಂಡ ಪ್ರತಿನಿಧಿಗಳು: ಬೆಳಗ್ಗೆ 12 ಗಂಟೆಯಿಂದ 3 ಗಂಟೆಯವರೆಗೆ ನಡೆದ ವಿಚಾರಣೆ ನಂತರ ಸಂಘದ ಪ್ರತಿನಿಧಿಗಳಾದ ಮೋಬಿನ್ ತಾಜ್ ಮತ್ತು ಜಯಲಕ್ಷ್ಮೀ ತಪ್ಪು ಒಪ್ಪಕೊಂಡರು. ಸಾಲದಲ್ಲಿ ಬಾಕಿ ಇರುವ 9 ಲಕ್ಷ ರೂ., ಹಣವನ್ನು 3 ತಿಂಗಳಿನಲ್ಲಿ ಪಾವತಿ ಮಾಡುವುದಾಗಿ ಒಪ್ಪಿಗೆ ಪತ್ರ ಬರೆದುಕೊಟ್ಟರು.
3 ತಿಂಗಳಿನಲ್ಲಿ ಸ್ವಲ್ಪ ಹಣ ಕಟ್ಟಿ ಸಾಲ ಪಾವತಿ ಮಾಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಪೊಲೀಸರು ಭೇಟಿ: ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಂಕಿನಿಂದ ಪಡೆದಿರುವ ಸಾಲ ಪಾವತಿ ಮಾಡದಿರುವ ಮಹಿಳೆಯರ ವಿರುದ್ಧ ದೂರು ಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು. ತಪ್ಪೊಪ್ಪಿಕೊಂಡ ಪ್ರತಿನಿಧಿಗಳು 3 ತಿಂಗಳ ಒಳಗೆ ಪೂರ್ಣ ಸಾಲ ಬಾಕಿಯಿಲ್ಲದೆ ಪಾವತಿ ಮಾಡುವು ದಾಗಿ, ಯಾವುದೇ ಕ್ರಮಕ್ಕೆ ಒಳಗಾಗುವುದಿಲ್ಲ ಎಂದು ಭರವಸೆ ನೀಡಿದರು.
ಬೇತಮಂಗಲ ವಿಎಸ್‌ಎನ್‌ಎನ್ ನಿರ್ದೇಶಕ ನಲ್ಲೂರು ಶಂಕರ್, ನೌಕರರಾದ ಕೃಷ್ಣ ಮೂರ್ತಿ, ಅಂಜಪ್ಪ, ಮುಖಂಡ ನಲ್ಲೂರು ಶ್ರೀಕಾಂತಪ್ಪ, ಜೀಡಮಾಕನಹಳ್ಳಿ ಕೃಷ್ಣಪ್ಪ, ಧನುಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.