ಮಳೆಬಿದ್ದಿಲ್ಲ ರಾಗಿ ಬಿತ್ತನೆ ಆಗಿಲ್ಲ
ಬಿತ್ತಿದ್ದ ಶೇಂಗಾ ಬೆಳೆಯೂ ಮಳೆ ಇಲ್ಲದೆ ಒಣಗಿದೆ
Team Udayavani, Jul 6, 2019, 2:13 PM IST
ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಮಳೆ ಇಲ್ಲದೆ, ಒಣಗುತ್ತಿದೆ
ಟೇಕಲ್: ರಾಗಿ ಬಿತ್ತನೆ ಮಾಡಲು ಈಗಾಗ ಲೇ ಹೋಬಳಿಯಲ್ಲಿ ಭೂಮಿ ಹದ ಮಾಡಿಟ್ಟುಕೊಂಡಿರುವ ರೈತರು, ಮಳೆಗಾ ಗಿ ಮುಗಿಲಿನತ್ತ ಮುಖಮಾಡಿದ್ದಾರೆ.
ಈ ವೇಳೆಗಾಗಲೇ ರಾಗಿಯನ್ನು ಬಿತ್ತನೆ ಮಾಡಿ ಕುಂಟೆ ಹೊಡೆಯಬೇಕಾಗಿತ್ತು. ಶ್ರಾವಣ ಮಾಸದಲ್ಲಿ ಕಳೆ ಕೀಳುವ ಮಟ್ಟಿಗೆ ಬೆಳೆ ಬಂದಿರಬೇಕಿತ್ತು. ಆದರೆ, ಈ ವರ್ಷ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ. ಬಿತ್ತನೆ ಕುಂಟಿತವಾಗಿದೆ. ರೈತರಿಗೆ ಹರ್ಷವೂ ಇಲ್ಲದಂತಾಗಿದೆ. ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿತ್ತು. ಆದರೆ, ಈಗ ಗಾಳಿ, ಬಿಸಿಲು ಹೆಚ್ಚಾಗಿ ಎಲ್ಲವೂ ಬತ್ತಿ ಹೋಗಿ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಸಿಗದಂತಾಗಿದೆ.
ಕೆಲವು ರೈತರು, ಮುಂದೆ ಮಳೆ ಸರಿಯಾಗಿ ಬರುತ್ತವೋ ಇಲ್ಲವೋ ಎಂದು ಮುಂಗಡವಾಗಿಯೇ ಶೇಂಗಾ (ಕಡಲೆಕಾಯಿ) ಬೀಜ ಬಿತ್ತನೆ ಮಾಡಿದ್ದರು. ಈಗ ಆ ಬೆಳೆಗೆ ಮಳೆ ಅವಶ್ಯಕತೆ ಬಹಳಷ್ಟು ಇತ್ತು. ಆದರೆ, ಮಳೆ ಬೀಳದೆ ಬೆಳೆ ಸೊರಗುತ್ತಿದೆ. ಭೂಮಿಯಲ್ಲಿ ತೇವಾಂಶದ ಕೊರತೆ ಇರುವುದರಿಂದ ಬೆಳೆದ ಮೊಳೆಕೆಯನ್ನು ಹುಳುಗಳು ತಿಂದು ಹಾಕುತ್ತಿವೆ. ಅದರ ಬೇರನ್ನು ನೆಲದಲ್ಲೇ ಕಡಿಯುತ್ತಿರುವುದರಿಂದ ಗಿಡಗಳು ಒಣಗಿ ಹೋಗುತ್ತಿವೆ. ಇನ್ನೂ ಕೆಲವು ದಿನಗಳಲ್ಲಿ ಮಳೆ ಬೀಳದೆ ಹೋದರೆ ಮೊಳಕೆ ಬಂದಿರುವ ಶೇಂಗಾ ಬೆಳೆ ಸಂಪೂರ್ಣ ಒಣಗಿ ರೈತರಿಗೆ ನಷ್ಟವಾಗುವುದರಲ್ಲಿ ಸಂದೇಹವಿಲ್ಲ.
ರೈತರಿಗೆ ನಷ್ಟ: ರೈತರು ಸಾವಿರಾರು ರೂ. ಖರ್ಚು ಮಾಡಿ, ಹೊಲ ಉಳುಮೆ, ಬೀಜ ಬಿತ್ತನೆ ಮಾಡಿದ್ದಾರೆ. ಈಗ ಮಳೆ ಬರಲಿಲ್ಲವೆಂದರೆ ರೈತರು ಸಾಲದ ಸುಳಿಗೆ ಸಿಲುಕಿ ನರಳಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.