ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಇಲ್ಲ


Team Udayavani, Apr 19, 2021, 3:52 PM IST

no Treatment for Covid Influencers,

ಕೋಲಾರ: ಜಿಲ್ಲೆಯಲ್ಲಿಯೂ ಕಳೆದ ಹದಿನೈದುದಿನಗಳಿಂದಲೂ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಳವಾಗುತ್ತಲೇ ಇದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆದೊರಕುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.ಜಿಲ್ಲಾ ಆರೋಗ್ಯಇಲಾಖೆಯು ಕೊರೊನಾಸೋಂಕಿತರ ಚಿಕಿತ್ಸೆಗೆ ಅಗತ್ಯ ಸೌಲಭ್ಯ ಜಿಲೆಯಲ್ಲಿದೆಎಂಬ ಅಂಕಿ ಅಂಶಗಳನ್ನು ನೀಡುತ್ತದೆಯಾದರೂ,ಚಿಕಿತ್ಸೆ ಹಂತದಲ್ಲಿ ಸೋಂಕಿತರು ಮತ್ತವರಕುಟುಂಬದವರು ಸಾಕಷ್ಟು ಸಮಸ್ಯೆಗಳನ್ನುಎದುರಿಸುತ್ತಿರುವುದು ಬೆಳಕಿಗೆ ಬಂದಿದೆ.

ನಿತ್ಯವೂ ನೂರು ಸೋಂಕಿತರು: ಜಿಲ್ಲೆಯಲ್ಲಿ ಮೊದಲಹಂತದಲ್ಲಿ ಒಂದೆರೆಡು ದಿನ ಹೊರತುಪಡಿಸಿದರೆ,ಯಾವುದೇ ಒಂದು ದಿನದಲ್ಲಿ 100ಕ್ಕೂ ಹೆಚ್ಚುಸೋಂಕಿತರು ಪತ್ತೆಯಾಗಿರಲಿಲ್ಲ. ಆದರೆ, ಎರಡನೇಅಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದಲೂನಿತ್ಯವೂ 100ಕ್ಕೂ ಹೆಚ್ಚು ಸೋಂಕಿತರು ದೃಢಪಡುತ್ತಿದ್ದಾರೆ.

ದೃಢಪಟ್ಟವರ ಪೈಕಿ ಶೇ.50ರಷ್ಟು ಜಿಲ್ಲಾಕೇಂದ್ರವನ್ನೊಳಗೊಂಡ ಕೋಲಾರ ತಾಲೂಕಿನಲ್ಲಿಯೇಪತ್ತೆಯಾಗುತ್ತಿದ್ದಾರೆ. ಹೀಗೆ ಸೋಂಕಿತರಾದವರೆಲ್ಲರಿಗೂಚಿಕಿತ್ಸೆ ನೀಡುವಷ್ಟು ವೈದ್ಯಕೀಯ ಸೌಲಭ್ಯಗಳು ಸದ್ಯಕ್ಕೆಕೋಲಾರ ಜಿಲ್ಲೆಯಲ್ಲಿ ಇಲ್ಲ.

900 ಬೆಡ್‌ಗಳು ಲಭ್ಯ: ಇಡೀ ಜಿಲ್ಲೆಯಲ್ಲಿ ಕೋವಿಡ್‌ಚಿಕಿತ್ಸೆಗಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಸೌಲಭ್ಯಗಳನ್ನು ಸೇರಿಸಿಕೊಂಡರೂ 1 ಸಾವಿರ ಬೆಡ್‌ಗಳ ಸೌಲಭ್ಯವಿಲ್ಲ. ಅಂಕಿ ಅಂಶಗಳ ಪ್ರಕಾರ ಇಡೀಜಿಲ್ಲೆಯಲ್ಲಿ ಕೋವಿಡ್‌ಗಾಗಿ 900 ಬೆಡ್‌ಗಳನ್ನು ವಿವಿಧಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ. ಆದರೆ, ಕಳೆದ ಹತ್ತುದಿನಗಳಿಂದಲೂ ನಿತ್ಯವೂ 100ಕ್ಕೂ ಅಧಿಕ ಸೋಂಕಿತಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹತ್ತು ದಿನಗಳಲ್ಲಿ1500 ಸೋಂಕಿತರು ದೃಢಪಟ್ಟಿದ್ದಾರೆ.

ಒಟ್ಟು 900 ಬೆಡ್‌ಗಳ ಪೈಕಿ ಸುಮಾರು 80 ಬೆಡ್‌ಗಳು ಮಾತ್ರವೇ ಆಮ್ಲಜನಕ ಸಹಿತ ಬೆಡ್‌ಗಳಾಗಿವೆ.ಕೇವಲ 50ರಷ್ಟು ಬೆಡ್‌ಗಳು ಮಾತ್ರವೇ ಐಸಿಯುಬೆಡ್‌ಗಳಾಗಿವೆ. ಇದು ಸದ್ಯ ಏರಿಕೆಯಾಗುತ್ತಿರುವಸೋಂಕಿತರ ಪ್ರಮಾಣವನ್ನು ಗಮನಿಸಿದರೆಯಾವುದಕ್ಕೂ ಸಾಲದು ಎಂಬಂತಾಗಿದೆ.

ಕೊರೊನಾ ಉಲ್ಬಣ: ಜಿಲ್ಲೆಯಲ್ಲಿ ಮೊದಲ ಹಂತವನ್ನು ಸಾಕಷ್ಟು ಮುತುವರ್ಜಿಯಿಂದಲೇ ನಿಯಂತ್ರಿಸಲಾಗಿತ್ತು. ಬೆಂಗಳೂರಿನಲ್ಲಿ ಕೊರೊನಾ ಪತ್ತೆಯಾದಐವತ್ತು ದಿನಗಳವರೆವಿಗೂ ಕೋಲಾರವನ್ನುಸೋಂಕಿತರಿಲ್ಲದೆ, ಹಸಿರು ವಲಯವನ್ನಾಗಿ ಇಟ್ಟುಕೊಳ್ಳಲಾಗಿತ್ತು. ಆದರೆ, ಶನಿವಾರ ದಿನವೊಂದರಲ್ಲಿಯೇ129 ಸೋಂಕಿತ ಪ್ರಕರಣಗಳು ದಾಖಲಾಗಿದ್ದೇ ಅಧಿಕಎನ್ನುವಂತಾಗಿತ್ತು. ಭಾನುವಾರ ಇದಕ್ಕೂ ಮೀರಿ 174ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.

ಈ ಅಂಕಿಅಂಶಗಳು ಕೋಲಾರ ಜಿಲ್ಲೆಯಲ್ಲಿಯೂ ಕೊರೊನಾನಿಯಂತ್ರಣ ಹತೋಟಿ ಮೀರುತ್ತಿರುವುದರ ಸ್ಪಷ್ಟ ಚಿತ್ರಣವಾಗಿದೆ. ಸದ್ಯಕ್ಕೆ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸೌಲಭ್ಯಗಳು ಇಲ್ಲದಿರುವುದು ಆತಂಕಕ್ಕೂ ಕಾರಣವಾಗಿದೆ.

ಚಿಕಿತ್ಸೆ ನಿರಾಕರಣೆ: ಸೋಂಕಿತರಿಗೆ ಅಗತ್ಯ ಚಿಕಿತ್ಸೆನೀಡುವುದನ್ನು ನಿರಾಕರಿಸುವ ಪ್ರಕರಣಗಳು ಕೇವಲಬೆಂಗಳೂರಿಗೆ ಸೀಮಿತವಾಗಿಲ್ಲ. ಬೆಂಗಳೂರಿನಿಂದಕೇವಲ 70 ಕಿ.ಮೀ ದೂರವಿರುವ ಕೋಲಾರಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.ಬಹುತೇಕ ಆಸ್ಪತ್ರೆಗಳು 2-3 ದಿನಗಳಿಂದಲೂಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಸೋಂಕಿತರಆರೋಗ್ಯ ಸ್ಥಿತಿಯ ಮೇಲೆ ಚಿಕಿತ್ಸೆಗೆ ದಾಖಲುಮಾಡಿಕೊಳ್ಳುವುದರ ಬದಲಾಗಿ ಸೋಂಕಿತಕುಟುಂಬಗಳ ಆರ್ಥಿಕ ಪರಿಸ್ಥಿತಿ ಮತ್ತು ಬಿಲ್‌ಪಾವತಿಯ ಸಾಮರ್ಥ್ಯವನ್ನು ಅಳೆದು ದಾಖಲುಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಲಭ್ಯವಿಲ್ಲವೆಂದು ಹೇಳುತ್ತಿವೆ.ಸರಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳಿಲ್ಲ, ಚಿಕಿತ್ಸೆ ಇಲ್ಲವೆಂದು ನೇರವಾಗಿ ಹೇಳುತ್ತಿಲ್ಲವಾದರೂ ಚಿಕಿತ್ಸೆಯವಿಳಂಬ, ಆಮ್ಲಜನಕ ಬೆಡ್‌ ಮತ್ತು ಐಸಿಯು ಬೆಡ್‌ಗಳ ಲಭ್ಯತೆ ಇಲ್ಲದಿರುವುದನ್ನು ಗಮನಿಸಿ ಗಂಭೀರಪರಿಸ್ಥಿತಿಯ ಸೋಂಕಿತರು ಬೆಂಗಳೂರಿನತ್ತ ಮುಖಮಾಡಬೇಕಾಗಿದೆ.

ಆದರೆ, ಬೆಂಗಳೂರಿನಲ್ಲಿಯೇಬಹಳಷ್ಟು ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಂದಜಿಲ್ಲೆಯಲ್ಲಿ ಕೈಮೀರಿದ ಪರಿಸ್ಥಿತಿಯನ್ನು ಈ ವಾರತಲುಪುವ ಸಾಧ್ಯತೆಗಳು ದಟ್ಟವಾಗಿದೆ.

ಲಸಿಕೆಯೂ ಸಿಗುತ್ತಿಲ್ಲ: ಹತ್ತು ದಿನಗಳಿಂದಲೂಸೋಂಕಿತರ ಸಂಖ್ಯೆಯು ಏರುಮುಖದಲ್ಲಿ ಸಾಗಿ 174ಸಂಖ್ಯೆಯನ್ನು ತಲುಪಿದೆ. ಲಸಿಕೆಗೆ ಮುಂದಾಗುವರಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಜಿಲ್ಲೆಯಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ 45 ವರ್ಷ ಮೇಲ್ಪಟ್ಟಕೇಳಿದವರಿಗೆಲ್ಲರಿಗೂ ಲಸಿಕೆ ಭಾಗ್ಯ ಸಿಗುತ್ತಿಲ್ಲ.ಲಸಿಕೆಗಾಗಿ ದಿನಗಟ್ಟಲೇ ಆಸ್ಪತ್ರೆ ಮುಂಭಾಗ ಕಾದರೂ,ಲಸಿಕೆ ದಾಸ್ತಾನಿಲ್ಲ ನಾಳೆ ಬನ್ನಿ ಎಂಬ ಉತ್ತರ ಸಿಗುತ್ತಿದೆ.ಒಂದು ತಿಂಗಳ ಹಿಂದೆ ಮೊದಲ ಹಂತದ ಲಸಿಕೆಯನ್ನುಸುಲಭವಾಗಿ ಪಡೆದುಕೊಂಡಿದ್ದ ಸಾರ್ವಜನಿಕರುಇದೀಗ ಎರಡನೇ ಡೋಸ್‌ ಲಸಿಕೆ ಪಡೆಯಲುಪರದಾಟ ನಡೆಸುವಂತಾಗಿದೆ.

ಜಿಲ್ಲೆಯಲ್ಲಿ ಏ.15ರವರೆವಿಗೂ 10200 ಕೋವಿಶೀಲ್ಡ್‌ ಹಾಗೂ 5140 ಕೋವ್ಯಾಕ್ಸಿನ್‌ ಲಸಿಕೆ ಸೇರಿದಂತೆಒಟ್ಟು 15340 ವ್ಯಾಕ್ಸಿನ್‌ಗ ದಾಸ್ತಾನು ಇದೆ. ಆದರೆ,ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ದಾಸ್ತಾನಿಲ್ಲ. ಸಿದ್ಧ ಉತ್ತರವನ್ನು ಆರೋಗ್ಯ ಸಿಬ್ಬಂದಿ ಸಾರ್ವಜನಿಕರಿಗೆ ನೀಡುತ್ತಿದ್ದಾರೆ.

ಮಾಸ್ಕ್ ಬಗ್ಗೆ ಅರಿವಿಲ್ಲ: ಜಿಲ್ಲೆಯಲ್ಲಿ ಯುಗಾದಿಯಲ್ಲಿಮುನೇಶ್ವರ ಜಾತ್ರೆ, ದೇವಾಲಯ ಕಾರ್ಯಕ್ರಮಗಳು,ಬೀಗರೂಟ, ಮದುವೆ ಊಟಗಳು ಹೆಚ್ಚಾಗಿಆಯೋಜಿಸಲಾಗುತ್ತಿದ್ದು, ಈ ದೀಪೋತ್ಸವ, ಗ್ರಾಮಮಟ್ಟದ ಜಾತ್ರೆಗಳಲ್ಲಿ ಯಾವುದೇ ಊಟದ ಮನೆಯಲ್ಲಿ ನೂರಾರು ಸಂಖ್ಯೆಯ ಜನ ಭಯಭೀತಿ ಇಲ್ಲದೆಜಮಾಯಿಸುತ್ತಿದ್ದಾರೆ. ಬಹುತೇಕ ಮಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿಲ್ಲ. ಸ್ಯಾನಿಟೈಜರ್‌ ಬಳಕೆಯಂತು ಅಪರೂಪವಾಗಿಬಿಟ್ಟಿದೆ.

ಸಾಮಾಜಿಕ ಅಂತರಕೇಳುವಂತೆಯೇ ಇಲ್ಲ. ನಗರಸಭೆ, ಪೊಲೀಸರು ಆಪರೂಪಕ್ಕೆಂಬಂತೆ ದಂಡ ಹಾಕಲು ಮುಂದಾಗುತ್ತಾರಾದರೂ ಜಿಲ್ಲೆಯ ಯಾವುದೇ ಮಾರುಕಟ್ಟೆ ಪ್ರದೇಶದಲ್ಲಿ ಜನ ನಿರ್ಭಿತಿಯಿಂದ ಸಂಚರಿಸುತ್ತಿರುವುದುಕೊರೊನಾ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಐಸಿಯು ಚಿಕಿತ್ಸೆ: ಕೊರೊನಾ ಇದ್ದರೂ ಯಾವುದೇಆನಾರೋಗ್ಯ ಸಮಸ್ಯೆ ಇಲ್ಲದವರಿಗೆ ಸರಕಾರಿಆಸ್ಪತ್ರೆಗಳಲ್ಲಿ ಚಿಕಿತ್ಸೆ ಧಾರಾಳವಾಗಿ ಸಿಗುತ್ತಿದೆ. ಆದರೆ,ಉಸಿರಾಟದ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆಅಲಭ್ಯವಾಗುತ್ತಿದೆ. ಸೋಂಕಿನ ಪ್ರಕರಣಗಳು ಇದೇಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದರೆ ಪರಿಸ್ಥಿತಿ ವಿಕೋಪಕ್ಕೆತಿರುವ ಸಾಧ್ಯತೆಗಳಿರುತ್ತವೆ. ಸಾವುಗಳ ಸಂಖ್ಯೆಯೂದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಜಿಲ್ಲಾಡಳಿತಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಇವೆಲ್ಲವನ್ನುಗಮನದಲ್ಲಿಟ್ಟುಕೊಂಡು ಕೊರೊನಾ ಸಮುದಾಯಕ್ಕೆಹರಡಿರುವುದನ್ನು ನಿಯಂತ್ರಿಸಲು ಮಹತ್ವದತೀರ್ಮಾನಗಳನ್ನು ತೆಗೆದುಕೊಳ್ಳಲೇಬೇಕಾಗಿದೆ.

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.