ಶೋಷಣೆ ರಹಿತ ಸಮಾಜ ನಿರ್ಮಾಣ ಅವಶ್ಯಕ
Team Udayavani, Apr 15, 2021, 4:38 PM IST
ಕೋಲಾರ: ಅಂಬೇಡ್ಕರ್ ನಿರಂತರ ಹೋರಾಟಮಾಡಿದ ಶೋಷಣೆ ರಹಿತ ಸಮಾಜದ ನಿರ್ಮಾಣಅತ್ಯವಶ್ಯಕವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್ಮನ್ ಗೋಪಾಲಕೃಷ್ಣಗೌಡಅಭಿಪ್ರಾಯಪಟ್ಟರು.ನಗರದ ನೂತನ ಸರ್ಕಾರಿ ಕಾಲೇಜಿನಲ್ಲಿಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಿಂದಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 130ನೇಜಯಂತಿ ಕಾರ್ಯಕ್ರಮದಲ್ಲಿ ಕವಿ ಡಾ. ಶರಣಪ್ಪಗಬ್ಬೂರ್ ಅಂಬೇಡ್ಕರ್ ಕುರಿತು ಬರೆದ ಸಾಧನಪಥ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಸಾಮಾಜಿಕ ಕಾರ್ಯೋನ್ಮುಖ: ರೆಡ್ ಕ್ರಾಸ್ ಸಂಸ್ಥೆಅತ್ಯುತ್ತಮವಾದ ಸೇವೆಗಳ ಮೂಲಕಸಾಮಾಜಿಕವಾಗಿ ಕಾರ್ಯೋನ್ಮುಖವಾಗುತ್ತಾಸಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟುರಕ್ತದಾನ ಮಾಡುವುದರ ಮೂಲಕ ಪ್ರಾಣಉಳಿಸುವಂತಹ ಕಾರ್ಯದಲ್ಲಿ ತೊಡಗಿಕೊಂಡಿತ್ತು.ಹಾಗೆಯೇ ಕವಿಯಾದ ಡಾ. ಶರಣಪ್ಪ ಗಬ್ಬೂರ್‌ಅವರು ಒಬ್ಬ ಪ್ರಮಾಣಿಕ ವ್ಯಕ್ತಿಯಾಗಿ ನಮ್ಮಮುಂದೆ ಕಾಣಿಸಿಕೊಳ್ಳುತ್ತಾರೆ.
ಅವರು ಬರೆದಕೃತಿಗಳು ಅನೇಕ. ಇದೀಗ ರೆಡ್ ಕ್ರಾಸ್ ಸಂಸ್ಥೆಯಜಿಲ್ಲಾ ಪ್ರೊಗ್ರಾಮ್ ಆμàಸರ್ ಆಗಿನೇಮಕಗೊಂಡು ಅನೇಕ ಕಾರ್ಯಕ್ರಮಗಳನ್ನುಮಾಡುವುದರ ಮೂಲಕ ಒಬ್ಬ ಯಶಸ್ವಿವ್ಯಕ್ತಿಯಾಗಿದ್ದಾರೆ ಎಂದರು.ರಾಜಕೀಯಕ್ಕೆ ಅಂಬೇಡ್ಕರ್ ವಿಚಾರವೇ ಔಷಧಿ:ಉಪಪ್ರಾಂಶುಪಾಲ ವಿ.ರುದ್ರಪ್ಪ ಮಾತನಾಡಿ, ಒಬ್ಬಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಗಿಂತಭಿನ್ನನಾಗಿರುತ್ತಾನೆ. ಆತ ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ. ರಾಜಕೀಯ ಎಂಬ ದೇಹಕ್ಕೆಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧ. ಈರಾಜಕೀಯ ದೇಹಕ್ಕೆ ಖಾಯಿಲೆ ಬಂದರೆಖಂಡಿತವಾಗಿಯೂ ಔಷಧಿ ನೀಡಬೇಕಾಗಿದೆ.ಇದಕ್ಕೆ ಅಂಬೇಡ್ಕರ್ ಅವರ ವಿಚಾರಧಾರೆಗಳೇಔಷಧಿಗಳಾಗಬೇಕು ಎಂದರು.
ಸ್ವಾಭಿಮಾನದಿಂದ ಬದುಕಿ: ಪ್ರಾಂಶುಪಾಲ ಜಯ್‌ರಾಮ ಮಾತನಾಡಿ, ಸ್ವಾಭಿಮಾನದಿಂದ ಈಜಗತ್ತಿನಲ್ಲಿ ಬದುಕಲು ಕಲಿಯಬೇಕು. ಈ ಜಗತ್ತಿಗೆಏನನ್ನಾದರೂ ಕೊಡುಗೆ ನೀಡುವಮಹತ್ವಾಕಾಂಕ್ಷೆಯನ್ನು ನೀವು ಹೊಂದಬೇಕು.ಸ್ವಾತಂತ್ರÂ, ಸಮಾನತೆ, ಭಾÅತೃತ್ವವನ್ನು ಕಲಿಸುವಧರ್ಮ ನಮಗೆ ಬೇಕಾಗಿದೆ ಎಂದರು.ಜನರಿಗೆ ಸ್ಫೂರ್ತಿಯಾಗಿ ಮಾದರಿ: ಉಪನ್ಯಾಸಕಆರ್.ಶಂಕರಪ್ಪ ಮಾತನಾಡಿ, ಅಸ್ಪೃಶ್ಯತೆಅಸಮಾನತೆಯ ನೋವಿನ ನಡುವೆ ಬೆಳೆದಿದ್ದಅಂಬೇಡ್ಕರ್ ಅವರು ಬಳಿಕ ಇಡೀ ವಿಶ್ವವೇಗೌರವಿಸುವಂತಹ ನಾಯಕರಾಗಿರೂಪಗೊಂಡವರು.
ಇದೀಗ ಅದೆಷ್ಟೋ ಜನರಿಗೆಸ್ಫೂರ್ತಿಯಾಗಿ ಮಾದರಿಯಾಗಿದ್ದಾರೆ. ಸ್ವಾಭಿಮಾನಿಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರುಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಹಶಿಕ್ಷಕ ಚಿತ್ರ ಕಲಾವಿದಕಾಳಿದಾಸ, ರಾಮನಾಥ, ಪೂರ್ಣಿಮ, ರಮೇಶ್,ಶಂಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.