ಅಕ್ರಮ ಪಿಯು ಕಾಲೇಜುಗೆ ನೋಟಿಸ್
Team Udayavani, Jun 1, 2018, 2:13 PM IST
ಕೋಲಾರ: ಜಿಲ್ಲಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ಬಹುತೇಕ ಕಾಲೇಜುಗಳು ನಿಯಮ ಮೀರಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಪೋಷಕರಿಂದ ಲಕ್ಷಾಂತರ ರೂ. ಡೊನೇಷನ್ ಮತ್ತಿತರ ಹೆಸರಿನಲ್ಲಿ ವಸೂಲು ಮಾಡುತ್ತಿರುವ ಕಾಲೇಜುಗಳು ಸಮರ್ಪಕ ದಾಖಲೆಗಳನ್ನು ಹೊಂದಿಲ್ಲ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಸಂಬಂಧಪಟ್ಟ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿದೆ. ಏಳು ದಿನಗಳೊಳಗಾಗಿ ಸೂಕ್ತ ಸಮಜಾಯಿಷಿ ನೀಡದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಶಿಕ್ಷಣದ ವ್ಯಾಪಾರೀಕರಣ: ಇತ್ತೀಚಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳವಾಗಿದ್ದು, ಹೀಗೆ ಪಾಸಾದ ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಆಕರ್ಷಿಸುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕಾಗಿ ಅನೇಕ ಕಾಲೇಜುಗಳು ಹುಟ್ಟಿಕೊಂಡಿವೆ. ಕೆಲವು ಕಾಲೇಜುಗಳು ತಾವು ಅನುಮತಿ ಪಡೆದ ಕಟ್ಟಡದಲ್ಲಿ ಕಾಲೇಜನ್ನು ನಡೆಸದೇ ಬೇಕಾಬಿಟ್ಟಿಯಾಗಿ ಸ್ಥಳಾಂತರ ಮಾಡಿಕೊಂಡಿವೆ.
ಇನ್ನು ಕೆಲವು ಕಾಲೇಜುಗಳು ತಮ್ಮ ಕಾಲೇಜಿನ ಹೆಸರಿನಲ್ಲಿ ಮತ್ತೂಂದು ಸಂಸ್ಥೆಗೆ ಕಾಲೇಜು ನಡೆಸಲು ಅನಧಿಕೃತವಾಗಿ ಅವಕಾಶ ಕಲ್ಪಿಸುವ ಮೂಲಕ ನಿಯಮಗಳನ್ನು ಮೀರಿ ಕೋಟ್ಯಂತರ ರೂ. ವಹಿವಾಟನ್ನು ನಡೆಸುತ್ತಿವೆ. ಇನ್ನುಕೆಲವು ಕಾಲೇಜುಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೇ ತಮ್ಮಿಷ್ಟದಂತೆ ರಾಜಾರೋಷವಾಗಿ ಕಾಲೇಜು ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೂ ಪ್ರವೇಶವನ್ನು ಕಲ್ಪಿಸಿರುವುದು ಕಂಡುಬಂದಿದೆ.
ನಾಯಿ ಕೊಡೆಯಂತೆ ತಲೆ ಎತ್ತಿದ ಪಿಯು ಕಾಲೇಜು: ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಯಿಂದ ಪ್ರಮುಖ ಘಟ್ಟವಾಗಿದ್ದು, ಬಹುತೇಕ ಪೋಷಕರು ಹಣದ ಮುಖ ನೋಡದೇ ಉತ್ತಮ ಕಾಲೇಜಿಗಾಗಿ ಅರಸುವುದು ಸಾಮಾನ್ಯವಾಗಿದೆ. ಇದನ್ನು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ದ್ವಿತೀಯ ಪಿಯು ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ.
ಲಕ್ಷಾಂತರ ರೂ.ವಸೂಲಿ: ಅನ್ನು ಪ್ರತಿ ವಿದ್ಯಾರ್ಥಿಯಿಂದ ವಸೂಕಾಲೇಜುಗಳ ಕಟ್ಟಡ, ಸಮವಸ್ತ್ರ, ಭಾರೀ ಡೊನೇಷನ್ ಹಾಗೂ ಫ್ಲೆಕ್ಸ್‌ಗಳ ಆಕರ್ಷಕ ಜಾಹೀರಾತು ಇತ್ಯಾದಿಗಳನ್ನು ಗಮನಿಸುತ್ತಿರುವ ಪೋಷಕರು ತಮ್ಮ ಮಕ್ಕಳನ್ನು ಅವರು ಕೇಳಿದಷ್ಟು ಹಣ ಕೊಟ್ಟು ದಾಖಲಾತಿ ಮಾಡುತ್ತಿದ್ದಾರೆ.
ತಾವು ಮಕ್ಕಳನ್ನು ಸೇರಿಸುತ್ತಿರುವ ಕಾಲೇಜುಗಳಿಗೆ ಸಮರ್ಪಕ ದಾಖಲಾತಿ, ಅನುಮತಿ ಇದೆಯೇ ಎನ್ನುವುದನ್ನೂ ಗಮನಿಸುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಾಲೇಜುಗಳು, ದ್ವಿತೀಯ ಪಿಯು ಕೋಚಿಂಗ್, ಸಿಇಟಿ ಕೋಚಿಂಗ್, ನೆಟ್ ಕೋಚಿಂಗ್, ಗೇಟ್ ಕೋಚಿಂಗ್ ಇತ್ಯಾದಿ ನೆಪದಲ್ಲಿ ಎರಡು ಮೂರು ಲಕ್ಷ ರೂ. ಅನ್ನು ಪ್ರತಿ ವಿದ್ಯಾರ್ಥಿಯಿಂದ ವಸೂಲು ಮಾಡುತ್ತಿವೆ.
ರಾಜಾರೋಷವಾಗಿ ನಡೆದ ಕಾಲೇಜು ದಂಧೆ: ಇಂತಹ ಕಾಲೇಜುಗಳಲ್ಲಿ ಕೇವಲ ನಗರ ಮಟ್ಟದ ವಿದ್ಯಾರ್ಥಿಗಳು ಮಾತ್ರ ದಾಖಲಾತಿ ಆಗುವುದಲ್ಲದೇ, ಜಿಲ್ಲಾ ಕೇಂದ್ರದ ಸುತ್ತಮುತ್ತಲ ತಾಲೂಕುಗಳಿಂದಲೂ ಬಸ್‌ಗಳ ಮೂಲಕ ನೂರಾರು ಮಕ್ಕಳನ್ನು ಕರೆತಂದು ನಿಮಯ ಮೀರಿ ದಾಖಲಾತಿ ಮಾಡಿಕೊಂಡು ರಾಜಾರೋಷವಾಗಿ ಕಾಲೇಜು ನಡೆಸಲಾಗುತ್ತಿದೆ.
ಪದವಿ ಪಿಯು ಇಲಾಖೆ ಮತ್ತು ಅಧಿಕಾರಿಗಳಿಗೆ ಕಿಂಚಿತ್ತೂ ಬೆಲೆ ನೀಡದೇ ಬಹುತೇಕ ಹಣ ಮಾಡುವ ಏಕೈಕ ನೆಪದಿಂದಲೇ ನಡೆಯುತ್ತಿರುವ
ಪಿಯು ಕಾಲೇಜುಗಳ ದಂಧೆ ಹಾಗೂ ಬೆಂಗಳೂರು ಮೂಲ ಮತ್ತು ನೆರೆಯ ರಾಜ್ಯಗಳ ಶಿಕ್ಷಣ ಸಂಸ್ಥೆಗಳು ಅಕ್ರಮಗಳನ್ನು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ತನ್ನ ನೋಟಿಸ್‌ನಲ್ಲಿ ಪ್ರಶ್ನಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮೇ 29 ರಂದು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂದೇ ಹೆಸರಾಗಿರುವ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿಗೆ ನೋಟಿಸ್ ನೀಡಿ, ಇದೇ ಕಾಲೇಜಿನಲ್ಲಿ ಅನಧಿಕೃತವಾಗಿ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ನಡೆಯುತ್ತಿರುವ ಕುರಿತು ವಿವರಣೆ ಕೋರಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಇದೇ ಕಾಲೇಜು ಹಲವಾರು ವರ್ಷಗಳಿಂದ ಎಕ್ಸೆಲ್ ಅಕಾಡೆಮಿಕ್ಸ್ ಹೆಸರಿನಲ್ಲಿಯೇ ವ್ಯವಹರಿಸುತ್ತ ಜಾಹೀರಾತು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರೂ, ಕರಪತ್ರಗಳನ್ನು ಮುದ್ರಿಸಿದ್ದರೂ, ಇದೇ ಹೆಸರಿನಲ್ಲಿ ಕಾಲೇಜು ಬಸ್‌ಗಳನ್ನು ಓಡಿಸುತ್ತಿದ್ದರೂ ಪದವಿ ಪೂರ್ವ ಕಾಲೇಜು ಇಲಾಖೆ ಇದಾವುದೂ ತಮಗೆ ತಿಳಿದಿಲ್ಲ. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ವಿವರಿಸಿರುವುದು ಕಾಲೇಜು ಆಡಳಿತ ಮಂಡಳಿ ಎಷ್ಟರ ಮಟ್ಟಿಗೆ ಪ್ರಭಾವಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದೇ ರೀತಿಯಲ್ಲಿಯೇ ತಮ್ಮದೇ ಕಾಲೇಜಿನ ಹೆಸರಿನಲ್ಲಿ ಮತ್ತೂಂದು ಕಾಲೇಜನ್ನು ನಡೆಸುತ್ತಿರುವ ಕಾರಣಕ್ಕಾಗಿ ಚಿನ್ಮಯ ಪದವಿ ಪೂರ್ವ ಕಾಲೇಜಿಗೂ ಪದವಿ ಪಿಯು ಉಪ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ. ಅನುಮತಿ ಪಡೆದ ಕಟ್ಟಡದಲ್ಲಿ ಕಾಲೇಜು ನಡೆಸದೇ ತಮ್ಮಿಷ್ಟದಂತೆ ಕಾಲೇಜನ್ನು ಸ್ಥಳಾಂತರಿಸಿಕೊಂಡಿರುವ ಕುರಿತು ಮತ್ತೂಂದೆರೆಡು ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಈ ನೋಟೀಸ್‌ನ ನಂತರವಾದರೂ ಜಿಲ್ಲೆಯಲ್ಲಿ ಅನಧಿಕೃತ ಸಂಸ್ಥೆಗಳ ನಿಮಯ ಮೀರಿ ನಡೆಯುತ್ತಿರುವ ಕಾಲೇಜುಗಳ ವಸೂಲಾತಿ ದಂಧೆಗೆ ಕಡಿವಾಣ ಬೀಳುತ್ತದೆಯೇ ಕಾದು ನೋಡಬೇಕಿದೆ.
* ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.