50ರ ಗಡಿ ದಾಟಿದ ಸೋಂಕಿತರ ಸಂಖ್ಯೆ
Team Udayavani, Jun 20, 2020, 7:10 AM IST
ಕೋಲಾರ: ಜಿಲ್ಲೆಯಲ್ಲಿ ಒಂದೇ ದಿನ ನಾಲ್ವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಐವತ್ತರ ಗಡಿ ದಾಟಿ ಐವತ್ತೆರೆಡು ತಲುಪಿದೆ. ಜಿಲ್ಲೆಯಲ್ಲಿ ಶುಕ್ರವಾರ ನಾಲ್ವರು ಮಹಿಳೆ ಯರು ಹಾಗೂ ಒಬ್ಬ ಪುರುಷನಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿ ಆತಂಕ ಮೂಡಿಸಿದೆ. ಕೋಲಾರ ಹಾಗೂ ಶ್ರೀನಿವಾಸಪುರ ತಾಲೂ ಕಿನ ತಲಾ ಒಬ್ಬರು, ಬಂಗಾರಪೇಟೆ ತಾಲೂಕಿನ ಇಬ್ಬರಿಗೆ ಕೋವಿಡ್ 19 ಸೋಂಕು ತಗುಲಿದೆ. ಜಿಲ್ಲೆಯ ಒಟ್ಟು ಪ್ರಕರಣಗಳು 52, ಗುಣ ಮುಖರಾಗಿರುವರು 29 ಹಾಗೂ ಸಕ್ರಿಯ ಪ್ರಕರಣಗಳು 23 ಆಗಿದೆ.
ಶ್ರೀನಿವಾಸಪುರದ 26 ವರ್ಷದ ಮಹಿಳೆ ಪಿ.6907 ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಇದೀಗ ಸೋಂಕು ಪೀಡಿತರಾಗಿದ್ದಾರೆ. ಕೋಲಾರ ತಾಲೂಕಿನ ಜಂಗಮ ಗುಜೇì ನಹಳ್ಳಿ ಯ 50 ವರ್ಷ ಮಹಿಳೆಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಸೋಂಕಿನ ಇತಿಹಾಸ ತನಿಖೆ ಮಾಡಲಾಗುತ್ತಿದೆ. ಬಂಗಾರಪೇಟೆ ತಾಲೂಕಿನ ಬನಹಳ್ಳಿ ಗ್ರಾಮದ 20 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಚೆನ್ನೈಗೆ ಹೋಗಿ ಬಂದಿದ್ದ ಮಹಿಳೆಗೆ ಸೋಂಕು ತಗುಲಿದೆ. ಬೆಂ.ಗ್ರಾ.ಜಿಲ್ಲೆಯಿಂದ ಬಂದಿದ್ದ 65 ವರ್ಷದ ಮತ್ತೂರ್ವ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಕಂಡುಬಂದಿದೆ. ಸದ್ಯ ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಇದರಿಂದಾಗಿ ಕೋಲಾರ ದಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದೆ.
ಜಾಲಪ್ಪ ಆಸ್ಪತ್ರೆಗೆ ಆತಂಕ: ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ 19 ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿ ಭೀತಿಯ ನ್ನುಂಟು ಮಾಡಿದೆ. ಜೂ.16 ರಂದು ಮಹಿಳೆಯೊಬರಿಗೆ ಕೋವಿಡ್ 19 ತಪಾಸಣೆ ಮಾಡದೆ ಕ್ಯಾನ್ಸರ್‌ಗೆ ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿಯಲ್ಲಿ ಕೋವಿಡ್ 19 ಪತ್ತೆಯಾ ಗಿದ್ದು, ಸರ್ಜರಿ ಮಾಡಿದ ವೈದ್ಯರು, ಸಿಬ್ಬಂದಿ ಕ್ವಾರಂಟೈನ್‌ಗೊಳಗಾಗುವಂತಾಗಿದೆ.
ಮೂವರು ವೈದ್ಯರನ್ನು ಆಸ್ಪತ್ರೆಯಲ್ಲಿನ ಪ್ರತ್ಯೇಕ ನಿಗಾಘಟಕಕ್ಕೆ ದಾಖಲಿಸಲಾಗಿದೆ. ಈ ಪ್ರಕರಣದಿಂದ ಮೂವರು ವೈದ್ಯರಲ್ಲಿ ಹಾಗೂ ಪಿಜಿ ವೈದ್ಯರಿದ್ದ ಹಾಸ್ಟೆಲ್ ಸಹಪಾಠಿಗಳಿಗೂ ಹಾಗೂ ಕ್ಯಾನ್ಸರ್ ರೋಗಿ ದಾಖಲಾಗಿದ್ದ ವಾರ್ಡ್‌ನ ಇತರೇ ರೋಗಿಗಳಿಗೂ ಕೋವಿಡ್ 19 ಪರೀಕ್ಷೆ ಮಾಡಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ 3 ಜನ ವೈದ್ಯರು ಸೇರಿ 20ಕ್ಕೂ ಹೆಚ್ಚು ಜನ ಕ್ವಾರಂಟೈನ್‌ಗೊಳಗಾಗಿದ್ದಾರೆ. ಮೂವರು ವೈದ್ಯರಿಗೆ ಕೋವಿಡ್ 19 ಲಕ್ಷಣಗಳು ಕಂಡು ಬಂದಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬಂಗಾರಪೇಟೆ: ಮತ್ತೆರಡು ಕೋವಿಡ್ 19 ಸೋಂಕು ಪತ್ತೆ
ಬಂಗಾರಪೇಟೆ: ತಾಲೂಕಿನ ಬನಹಳ್ಳಿ ಮತ್ತು ಕುಪ್ಪನಹಳ್ಳಿ ಗ್ರಾಮಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ತಮಿಳುನಾಡಿನಿಂದ ಬಂದಿದ್ದ ಬನ ಹಳ್ಳಿಯ ಮಹಿಳೆಗೆ ಹಾಗೂ ಕುಪ್ಪನಹಳ್ಳಿ ಗ್ರಾಮದ ಸೋಂಕಿತನ ಅತ್ತೆಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ತಮಿಳುನಾಡು ಕೃಷ್ಣ ಗಿರಿಯ ಗ್ರಾಮವೊಂದರಿಂದ ತವರು ಮನೆಗೆ ಬಂದಿದ್ದ ಬನಹಳ್ಳಿಯ ಮಹಿಳೆ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು.
ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೋವಿಡ್ 19 ದೃಢ ಪಟ್ಟಿದೆ. ಕುಪ್ಪನಹಳ್ಳಿಯ ಸೋಂಕಿತ ಚಾಲಕ ನಿಂದ ಆತನ ಅತ್ತೆಗೂ ಶುಕ್ರವಾರ ಕೋವಿಡ್ 19 ಬಂದಿದೆ. ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕುಪ್ಪನಹಳ್ಳಿ ಹಾಗೂ ಬೂದಿ ಕೋಟೆ ಹೋಬಳಿಯ ಬನಹಳ್ಳಿ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ಮತ್ತು ಒಳಗೆ ಬರದಂತೆ ಕ್ರಮ ವಹಿಸಲಾಗಿದೆ. ಆ ಗ್ರಾಮಗಳಲ್ಲಿ ಮಾಸ್ಕ್, ಸ್ಯಾನಿ ಟೈಸರ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಆಲಂಬಾಡಿ ಜ್ಯೋತೇನ ಹಳ್ಳಿ ಗ್ರಾಪಂ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇ ಶ್ವರ್, ತಾಪಂ ಇಒ ಎನ್. ವೆಂಕಟೇಶಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಂ.ಶ್ರೀಕಂಠಯ್ಯ, ಪಿಡಿಒ ಗಂಗೋಜಿರಾವ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.