ಫುಟ್‌ಪಾಥ್ ಅಂಗಡಿ ತೆರವಿಗೆ ವಿರೋಧ
Team Udayavani, Sep 19, 2020, 6:07 PM IST
ಮುಳಬಾಗಿಲು: ನಗರದಲ್ಲಿ ಬೀದಿ ಬದಿಯ ಫುಟ್‌ಪಾಥ್ ವ್ಯಾಪಾರಿಗಳ ವ್ಯಾಪಾರಕ್ಕೆ ಅಡ್ಡಿಪಡಿಸದಂತೆ ನಗರ ಸಭೆಯು ಎಲ್ಲಿಯಾದರೂ ಕಾರ್ ಸ್ಟ್ಯಾಂಡ್ ನಿರ್ಮಿಸಿಕೊಳ್ಳಬೇಕೆಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್, ನಗರದಲ್ಲಿ ಹಲವಾರು ವರ್ಷಗಳಿಂದ ನೂರಾರು ಜನರು ಪುಟ್ ಪಾಥ್ ಮೇಲೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ನಗರಸಭೆ ಅಧಿಕಾರಿಗಳುಕಾರ್ ಸ್ಟ್ಯಾಂಡ್ ನಿರ್ಮಾಣಕ್ಕಾಗಿ ಏಕಾಏಕಿ ಫುಟ್‌ಪಾಥ್ ಅಂಗಡಿಗಳನ್ನು ತೆರವುಗೊಳಿಸಲು ಹುನ್ನಾರ ನಡೆಸಿದೆ.
ಇದರಿಂದ ಒಂದು ಕಡೆಯಿಂದ ಮತ್ತೂಂದು ಕಡೆ ಅಂಗಡಿಗಳನ್ನು ಬದಲಾಯಿಸಲು 7-8 ಸಾವಿರ ಖರ್ಚು ಬರುತ್ತದೆ. ಎಲ್ಲಿಯಾದರೂ ಕಾರ್ ಸ್ಟ್ಯಾಂಡ್ ನಿರ್ಮಿಸಿಕೊಳ್ಳಬಹುದು ಪ್ರಯಾಣಿಕರು ಹೋಗಿ ಹತ್ತುತ್ತಾರೆ, ಆದರೆ ಅಂಗಡಿಗಳನ್ನು ಪದೇ ಪದೆ ಎತ್ತಂ ಗಡಿ ಮಾಡಿಸುತ್ತಿದ್ದರೆ ಜೀವನ ಸಾಗಿಸು ವುದು ಹೇಗೆ ಎಂದು ಕಿಡಿಕಾರಿದರು. ಅಬಕಾರಿ ಸಚಿವ ಎಚ್.ನಾಗೇಶ್ ಬಳಿ ಚರ್ಚಿಸುವವರೆಗೂ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿಪೌರಾಯುಕ್ತಶ್ರೀನಿವಾಸಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಎಎಪಿ ಪಕ್ಷದ ನಗರ ಘಟಕ ಅಧ್ಯಕ್ಷ ಬಷೀರ್‌ಪಾಷ, ಬೀದಿ ಬದಿಯ ವ್ಯಾಪಾರಿಗಳ ಸಂಘದ ಸದಸ್ಯರಾದ ನಾಗೇಶ, ಪೂಲ್ ಅಶ್ವತ್ಥ್, ಬಾಲಕೃಷ್ಣ ಹಾಗೂತಿಪ್ಪರಾಜು ಸೇರಿದಂತೆಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.