ವೃದರ ಪಿಂಚಣಿಯಲ್ಲೂ ಕಮಿಷನ್‌ ಪಡೆಯುವ ಪೀಡಕರು

ಎಟಿಎಂ ಬಳಸಲು ಬಾರದ ವೃದ್ಧರ ಪಿಂಚಣಿಗೆ ಕೊಡಬೇಕು ಹಣ  ರೇಗಿದರೆ ಕೆಲಸಕ್ಕೆ ಅಡ್ಡಿ, ಪೊಲೀಸರನ್ನು ಕರೆಸುತ್ತೇವೆ ಎನ್ನುತ್ತಾರೆ: ಆರೋಪ

Team Udayavani, Oct 28, 2021, 6:25 PM IST

ಪಿಂಚಣಿ ಸಮಸ್ಯೆ

ಬಂಗಾರಪೇಟೆ: ಸರ್ಕಾರ ಬಡವರಿಗೆ ಸೌಲಭ್ಯ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ‌ಲಾನುಭವಿಗಳು ವಂಚಿತರಾಗುತ್ತಾರೆ ಎಂಬುದಕ್ಕೆ ತಾಲೂಕಿನ ಬೂದಿಕೋಟೆಯಲ್ಲಿರುವ ಅಂಚೆ ಕಚೇರಿಯೇ ಸಾಕ್ಷಿ ಎಂಬಂತಿದೆ. ಕಮಿಷನ್‌: ತಾಲೂಕಿನ ಬೂದಿಕೋಟೆ ಗ್ರಾಮದ ಅಂಚೆ ಕಚೇರಿಯಲ್ಲಿ ನಿತ್ಯ ವೃದ್ಧರು, ವಿಕಲಚೇತನರು, ವಿಧವೆಯರಿಗೆ ಸರ್ಕಾರ ನೀಡುವ ಪಿಂಚಣಿ ಪಡೆಯಲು ಅಂಚೆ ಕಚೇರಿ ಸಿಬ್ಬಂದಿಗೆ ಕಮಿಷನ್‌ ನೀಡಬೇಕಿದೆ. ಕೊಡದಿದ್ದರೆ ಪಿಂಚಣಿ ನೀಡಲು ಸತಾಯಿಸುವರು ಎಂದು ಫ‌ಲಾನುಭವಿಗಳೇ ಆರೋಪಿಸುತ್ತಿದ್ದಾರೆ.

ಈ ಹಿಂದೆ ಪಿಂಚಣಿಯನ್ನು ಪೋಸ್ಟ್‌ಮೆನ್‌ ನೇರವಾಗಿ ಡ್ರಾ ಮಾಡಿ ಫ‌ಲಾನುಭವಿಗಳಿಗೆ ಕೊಡುತ್ತಿದ್ದರು. ಆಗ, ಸರ್ಕಾರ ನಿಗದಿಪಡಿಸಿದ್ದ ಹಣವನ್ನು ಫ‌ಲಾನುಭವಿಗೆ ಕಮಿಷನ್‌ ಪಡೆದು ಕೊಡುತ್ತಿದ್ದರು. ಈ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆ ಸರ್ಕಾರ ಫ‌ಲಾನುಭವಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವಂತೆ ಸೂಚಿಸಿತು.

ಖಾತೆ ಮೂಲಕ ಫ‌ಲಾನುಭವಿಗೆ ನೇರವಾಗಿ ಹಣ ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಬಹುತೇಕ ಗ್ರಾಮೀಣರಿಗೆ ಅಂಚೆ ಕಚೇರಿಗೆ ಹೋಗಿ ಹಣ ಡ್ರಾ ಮಾಡಲು ಓದು ಬರಹ ತಿಳಿಯದ ಕಾರಣ ಪೋಸ್ಟ್‌ಮೆನ್‌ಗಳೇ ಫ‌ಲಾನುಭವಿಗಳ ಪಾಸ್‌ ಪುಸ್ತಕ ಪಡೆದು ಅವರೇ ಸಹಿ ಮಾಡಿ ಹಣ ಡ್ರಾ ಮಾಡಿ ಮನೆ ಬಾಗಿಲಿಗೆ ಹಣ ತಲುಪಿಸುತ್ತಿದ್ದರು.ಆದರೆ, ಈಗಲೂ ಕಮಿಷನ್‌ ಇಲ್ಲದೆ ಹಣ ಕೊಡುವುದಿಲ್ಲ.

ಇದು ತಾಲೂಕಿನ ಎಲ್ಲಾ ಕಡೆ ಪೋಸ್ಟ್‌ ಮೆನ್‌ಗಳ ಹಗಲು ದರೋಡೆ. ಪಿಂಚಣಿ ಹಣವನ್ನೇ ನಂಬಿ ಜೀವಿಸುವವರಿಗೆ ನಿರಾಸೆ ಜತೆ ವಿಧಿ ಇಲ್ಲದೆ ಅವರು ಕೊಟ್ಟ ಹಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೋಸ್ಟ್‌ ಮಾಸ್ಟರ್‌ಗೆ ತಿಳಿದಿದ್ದರೂ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದ್ದಾರೆ.

ಬುಧವಾರ ಬೂದಿಕೋಟೆ ಹೋಬಳಿ ಕೇಂದ್ರದ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಹಣ ಪಡೆದು ವಂಚನೆ ಮಾಡುತ್ತಿದ್ದಾಗ ಸಾರ್ವಜನಿಕರು ಪ್ರಶ್ನೆ ಮಾಡಿದರೆ, ನಮಗೆ ಕೆಲಸ ಮಾಡಲು ನೀವು ತೊಂದರೆ ಕೊಡುತ್ತಿದ್ದೀರಿ ಪೊಲೀಸರಿಗೆ ದೂರು ಕೊಡ ಲಾಗುವುದೆಂದು ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ.

ಬೀಗ ಜಡಿದು ಪ್ರತಿಭಟನೆ: ಸಿಬ್ಬಂದಿ ದೌರ್ಜನ್ಯ ಖಂಡಿಸಿ ಫ‌ಲಾನುಭಗಳು ಮತ್ತು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದಾಗ ಮೌನಕ್ಕೆ ಶರಣಾ ದರು. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ ಹಗಲು ದರೋಡೆ ನಿಯಂತ್ರಿಸದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ʼಅಂಚೆ ಕಚೇರಿಯಲ್ಲೇ ಹಣ ಪಡೆಯಲು ಬರುವವರಿಗೆ ಅಲ್ಲಿನ ಸಿಬ್ಬಂದಿ ಚಲನ್‌ ಬರೆಯಲು ಬಾರದ ವ್ಯಕ್ತಿಗಳಿಗೆ ಚಲನ್‌ ಬರೆದಿದ್ದಕ್ಕೆ ಎಂದು ಹೇಳಿ 20-30ರೂ. ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ, 2 ಸಾವಿರ ಮೇಲೆ ಡ್ರಾ ಮಾಡುವವರಿಂದ 100-200 ರೂ. ಕಮಿಷನ್‌ ಕೊಡಬೇಕು.ʼ – ವೆಂಕಟೇಶಪ್ಪ, ಫ‌ಲಾನುಭವಿ.

  • ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.