ಕೋಲಾರ, ಕೆಜಿಎಫ್ ನಲ್ಲಿ ಆಮ್ಲಜನಕ ಘಟಕ
Team Udayavani, Apr 27, 2021, 3:37 PM IST
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಹೊಂಡಾ ಕಂಪನಿಯವರುಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆಬಂದಿದ್ದು, 10 ದಿನದಲ್ಲಿ ಸ್ಥಾಪನೆ ಆಗುತ್ತದೆ. ಕೆಜಿಎಫ್‌ನಲ್ಲಿ ಬೆಮೆಲ್‌ನವರು ಮುಂದೆ ಬಂದಿದ್ದಾರೆ. ಅಲ್ಲೂ ಯೂನಿಟ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ವೈದ್ಯರ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ನೀಡುವ ವಿಚಾರದಲ್ಲಿ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆಮ್ಲಜನಕವನ್ನು ಎಲ್ಲಾ ರಾಜ್ಯಗಳಿಗೂವಿತರಿಸಲು ಕ್ರಮ ಕೈಗೊಂಡಿದೆ. ರೆಮ್‌ಡಿಸಿವಿಯರ್ ಹೊರಗಡೆ ಮಾರಾಟ ಆಗುತ್ತಿರುವ ಬಗ್ಗೆಯೂ ದೂರುಕೇಳಿಬರುತ್ತಿದೆ. ಇದಕ್ಕೆಲ್ಲ ಅವಕಾಶ ನೀಡದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಸಂಪೂರ್ಣ ಸಹಕಾರ: ಆಸ್ಪತ್ರೆಯಲ್ಲಿದ್ದ ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡು ಕೋವಿಡ್ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಬದ್ಧತೆತೋರುವಂತೆ ಸೂಚಿಸಲಾಗಿದೆ. ವೈದ್ಯರು ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಸೌಲಭ್ಯ ಒದಗಿಸಿ: ಐಸಿಯುನಲ್ಲಿರುವ ಕೋವಿಡ್ ರೋಗಿಗಳು 8 -10 ದಿನ ಇದ್ದು ನಂತರ ಉಸಿರಾಟಕ್ಕೆತೊಂದರೆ ಇಲ್ಲದಿದ್ದರೆ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಿ ಹೊಸದಾಗಿ ಸೀರಿಯಸ್ ಆಗಿರುವ ಸೋಂಕಿತರಿಗೆ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಕೋವಿಡ್ ಮೊದಲ ಅಲೆ ಶುರುವಾದಾಗಿ ನಿಂದ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಸೋಂಕಿತರು ಹೆಚ್ಚು ಬರುತ್ತಿರುವುದರಿಂದ ಅವರ ಜತೆ ನಡೆದು ಕೊಳ್ಳುವ ರೀತಿ, ಅವರಿಂದ ಹಣ ಪಡೆದುಕೊಳ್ಳದೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹಾಸಿಗೆಯ ಕೊರತೆ ಇಲ್ಲ: ನಗರದ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಯ ಕೊರತೆ ಇಲ್ಲ. ಐಸಿಯು ವಾರ್ಡ್‌ನಲ್ಲಿದ್ದವರು ಉಸಿರಾಟಕ್ಕೆ ತೊಂದರೆ ಇಲ್ಲದಿದ್ದರೆ ಅವರನ್ನು ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿ ಬೇರೆಯವರಿಗೆ ಅವಕಾಶ ಕಲ್ಪಿಸಲುಸೂಚಿಸಿರುವುದಾಗಿ ಸಂಸದ ತಿಳಿಸಿದರು.
ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ: ಎಲ್ಲಾ ವೈದ್ಯರು ಉತ್ತಮ ಕೆಲಸ ಮಾಡಿದರೂ ಯಾರೋ ಒಬ್ಬರು ಕೆಟ್ಟದಾಗಿ ನಡೆದುಕೊಂಡರೆ ಇಡೀ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ. ಮೊದಲ ಅಲೆ ಸಂದರ್ಭದಲ್ಲಿಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಸೋಕಿತರು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು, ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಂತಹದ್ದಕ್ಕೆ ಆಸ್ಪದ ನೀಡಬೇಡಿ ಎಂದು ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ: ಕೋವಿಡ್ ರೋಗಿಗಳನ್ನು ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡಬೇಕು.ಎಲ್ಲಾ ತಾಲೂಕುಗಳಲ್ಲಿ ಪಕ್ಷದಿಂದ ಎರಡ್ಮೂರು ಸ್ವಯಂಸೇವಕರನ್ನು ಗುರುತಿಸಿದ್ದೇವೆ. ಅವರ ಸಹಕಾರದೊಂದಿಗೆ ಆಶಾ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಕೋವಿಡ್ ಲಕ್ಷಣವುಳ್ಳವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ ಗುಣಪಡಿಸಬೇಕು. ಇಲ್ಲಿ ಆಗದಿದ್ದ ಮೇಲೆತಾಲೂಕು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ಟಾಫ್ ಗಳಿಗೆ ವಾಹನದ ವ್ಯವಸ್ಥೆ: ಲಾಕ್‌ಡೌನ್‌ನಿಂದ ವಾಹನ ಇಲ್ಲದೆ ನರ್ಸ್‌ಗಳು ಬರಲು ಆಗಲ್ಲ ಎಂದು ಹೇಳಿದ್ದಾರೆ. ಯಾರಿಗೆ ಎಲ್ಲಿಂದ ವಾಹನ ವ್ಯವಸ್ಥೆ ಬೇಕು ಎಂಬ ಮಾಹಿತಿ ನೀಡಿದರೆ ನಾವೇ ವಾಹನದ ವ್ಯವಸ್ಥೆ ಮಾಡುತ್ತೇವೆ. ಕೆಜಿಎಫ್‌ನಿಂದ 40, ಮುಳಬಾಗಿಲಿ ನಿಂದ 10, ಬೆಂಗಳೂರಿನಿಂದ 8 ಮಂದಿಗೆ ಕರೆದು ಕೊಂಡು ಬಂದು ವಾಪಸ್ ಹೋಗಲು ವ್ಯವಸ್ಥೆ ಮಾಡುತ್ತೇವೆ ಎಂದು ವಿವರಿಸಿದರು.
ಜಿಲ್ಲಾ, ತಾಲೂಕು ಆಸ್ಪತ್ರೆಗೆ ಡೀಸಿ, ಜನಪ್ರತಿನಿಧಿಗಳು ಯಾವುದೇ ಸಂದರ್ಭದಲ್ಲೂ ಭೇಟಿ ನೀಡುತ್ತೇವೆ ಅಚಾತುರ್ಯ, ರೋಗಿಗಳ ಜತೆ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಸಿಎಂ, ಆರೋಗ್ಯ ಸಚಿವ ಸುಧಾಕರ್ ಜತೆ ಮಾತನಾಡಿ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿದ್ದೇವೆ. ಆರೋಗ್ಯ ಸಚಿವರು ಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ನುಡಿದರು.
ಸಭೆಯಲ್ಲಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ. ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಆಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು.
ಲಸಿಕೆ ಹಾಕಿದವರಿಗೆ ಶೇ.99.9 ಸೋಂಕಿಲ್ಲ : ಜಿಲ್ಲೆಯಲ್ಲಿ 1.70 ಲಕ್ಷ ಜನ ಲಸಿಕೆಹಾಕಿಸಿಕೊಂಡಿದ್ದಾರೆ. 8000 ಲಸಿಕೆ ಲಭ್ಯವಿದೆ. ಎಷ್ಟು ಬೇಕಾದರೂ ದಾಸ್ತಾನು ನೀಡ್ತೀವಿ ಎಂದುಸಂಬಂಧಿಸಿದ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 76 ಸೆಂಟರ್ ಇದೆ. ಮಾರ್ಗಸೂಚಿ ಪಾಲಿಸಿ ಲಸಿಕೆಹಾಕಿಸಿಕೊಳ್ಳಿ, ಕೊರೊನಾ ಬಂದ ತಕ್ಷಣ ಉಸಿರಾಟದ ತೊಂದರೆ ಆಗುತ್ತದೆ ಎಂದು ಧೈರ್ಯ ಕಳೆದುಕೊಳ್ಳಬೇಡಿ, ಕೋವಿಡ್ ಎದುರಿಸಲುಸಾಮರ್ಥ್ಯ ಇದೆ. ಧೈರ್ಯ ತುಂಬುವ ಕೆಲಸಎಲ್ಲಾ ನಾಗರಿಕರು ಮಾಡಬೇಕು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.