ಸುಡು ಬಿಸಿಲಿಗೆ ತತ್ತರಿಸಿದ ಜನ
Team Udayavani, Mar 20, 2019, 7:23 AM IST
ಮಾಲೂರು: ಈ ವರ್ಷ ಬೇಸಿಗೆ 17 ದಿನಗಳ ಮುಂಚೆಯೇ ಪ್ರಾರಂಭವಾಗಿದ್ದು, ಬರದನಾಡದ ಜಿಲ್ಲೆಯಲ್ಲಿ ಬಿಸಿಲ ಧಗೆ ಜನರ ಬೆವರಿಳಿಸುತ್ತಿದೆ. ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಬಿಸಿಲಿನ ತಾಪಕ್ಕೆ ತತ್ತರಿಸಿರುವ ನಾಗರಿಕರು ದೇಹದ ದಣಿವು ನೀಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಮಧ್ಯಾಹ್ನವಾಗುತ್ತಿದ್ದಂತೆ ಹೊಂಗೆ, ಅರಳಿ ಮರಗಳನ್ನು ಹುಡುಕುವಂತಹ ಪರಿಸ್ಥಿತಿ ಇದೆ. ಪ್ರತಿನಿತ್ಯ 32 ರಿಂದ 34 ಡಿಗ್ರಿಯಷ್ಟು ತಾಪಮಾನ ದಾಖಲಾಗುತ್ತಿದೆ. ಇದನ್ನೇ ಉದ್ಯೋಗ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು, ಮಾಲೂರು ಪಟ್ಟಣ, ವಾಹನಗಳು ಹೆಚ್ಚು ಓಡಾಡುವ ರಸ್ತೆಗಳ ಪಕ್ಕದಲ್ಲಿ ಸೈಕಲ್, ತುಳ್ಳುವ ಗಾಡಿ, ಸಣ್ಣದಾಗಿ ಟೆಂಟ್ ಹಾಕಿಕೊಂಡು ಕಲ್ಲಂಗಡಿ, ಸೌತೇಕಾಯಿ, ಎಳನೀರು, ಮಜ್ಜಿಗೆ, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಎಳನೀರು, ಮಜ್ಜಿಗೆಗೆ ಬೇಡಿಕೆ: ಕೋಕಾ ಕೋಲಾ, ಸ್ಪ್ರೈಟ್, ಫಾಂಟಾ ಮತ್ತಿತರರು ಕೃತಕ ಪಾನಿಗಳಿಗಿಂತಲೂ ಈ ಬಾರಿ ಆರೋಗ್ಯ ಹೆಚ್ಚಿಸುವ ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲು, ಮಜ್ಜಿಗೆಯಂತಹ ಪಾನೀಯಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಎಳನೀರು 30 ರೂ.ಗೆ ಮಾರಾಟವಾಗುತ್ತಿದೆ. ರೈತರ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ. ಅದರಂತೆ ಜಿಲ್ಲೆಯ ರೈತರ ಜೀವಾಳವಾಗಿರುವ ನಂದಿನಿ ಹಾಲಿನ ಉತ್ಪನ್ನಗಳಲ್ಲಿ ಮೊಸರು, ಮಜ್ಜಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಂಡಿದೆ.
ಭರ್ಜರಿ ಲಾಭ: ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನದ ಮಸಾಲೆ ಮಜ್ಜಿಗೆ ಕೋಚಿಮಲ್ ನಿಗದಿ ಪಡಿಸುವ ದರಗಳಿಗೆ ಮಾರಾಟವಾಗುತ್ತಿದ್ದರೆ, ರೈತರಿಂದ 10 ರಿಂದ 12 ರೂ.ಗೆ ಖರೀದಿ ಮಾಡುವ ವ್ಯಾಪಾರಿಗಳು, ಒಂದು ಎಳನೀರನ್ನು 25 ರಿಂದ 30 ರೂ.ವರೆಗೂ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಕಲ್ಲಂಗಡಿ ಕತ್ತರಿಸಿದ ಒಂದು ಹೋಳು 10 ರೂ.ನಂತೆ ಮಾರಾಟ ಮಾಡುತ್ತಿದ್ದು, ಫ್ರೂಟ್ ಸಾಲಾಡ್ ಪ್ಲೇಟ್ ಒಂದರ ದರ 20 ರೂ. ಇದೆ. ಕತ್ತರಿಸದೇ ಮಾರಾಟ ಮಾಡುವ ಕಲ್ಲಂಗಡಿ ಹಣ್ಣು ಕೆ.ಜಿ.ಗೆ 25 ರಿಂದ 30 ರೂ.ವರೆಗೂ ಮಾರಾಟವಾಗುತ್ತಿದೆ. ಬೆಲೆ ದುಬಾರಿಯಾದ್ರೂ ಬಿಸಿಲಿಗೆ ನಲುಗಿರುವ ಜನರು ತಂಪು ಪಾನೀಯ, ನೀರಿನಾಂಶದ ಹಣ್ಣುಗಳನ್ನು ಸವಿಯುವುದನ್ನು ನಿಲ್ಲಿಸಿಲ್ಲ.
ರಾಜಕೀಯ ಚರ್ಚೆಗಳ ಸ್ಥಳ ಶಿಫ್ಟ್:
ಬಿಸಿಲಿನ ತಾಪ ಹೆಚ್ಚಾಗುತ್ತಿರುವಂತೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಕಾವೂ ಏರುತ್ತಿದೆ. ಹೋಟೆಲ್‌ಗಳು, ಚಹಾದ ಅಂಗಡಿಗಳಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳು ಇದೀಗ ಜ್ಯೂಸ್ ಸೆಂಟರ್, ಕಲ್ಲಂಗಡಿ ಮತ್ತು ಎಳನೀರು ಅಂಗಡಿಗಳಿಗೆ ಶಿಫ್ಟ್ ಅಗಿವೆ. ತಂಪು ಪಾನೀಯ ಸೇವಿಸುತ್ತಾ ರಾಜಕೀಯ ಚರ್ಚೆ ಮಾಡುತ್ತಿದ್ದಾರೆ.
ಬಿಸಿಲಿನಿಂದ ದೇಹ ತಂಪಾಗಿಸಿಕೊಳ್ಳಲು ಎಳನೀರು ಉತ್ತಮ ಪಾನೀಯ. ದೇಹ ತಂಪಾಗಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಮಳೆಯ ಕೊರತೆಯಿಂದ ತೆಂಗಿನ ಮರಗಳಲ್ಲಿ ಎಳನೀರಿನ ಇಳುವರಿ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಆದರೂ ಇರುವ ಅಲ್ಪ ಸ್ವಲ್ಪ ಎಳನೀರನ್ನು ತಂದು ಮಾರಾಟ ಮಾಡುತ್ತಿದ್ದೇವೆ.
-ದಾಸಪ್ಪ, ಎಳನೀರು ವ್ಯಾಪಾರಿ.
ಈಗಾಗಲೇ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಬಿಸಿಲಿನ ಝಳ ಜೋರಾಗಿದೆ. ದಣಿದ ದೇಹವನ್ನು ತಂಪಾಗಿಸಿಕೊಳ್ಳಲು ಜನ ಮುಂದಾಗುತ್ತಿದ್ದಾರೆ. ನಂದಿನಿ ಮಸಾಲೆ ಮಜ್ಜಿಗೆ, ಲಸ್ಸಿ, ತಂಪು ಬಾದಾಮಿ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ.
-ಶ್ಯಾಮಣ್ಣ, ನಂದಿನಿ ಹಾಲು ಮಾರಾಟಗಾರ.
* ಎಂ.ರವಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.