ಜಿದ್ದಾಜಿದ್ದಿ ಕಣದಲ್ಲಿ ಚುನಾವಣೆ ನೀರಸ


Team Udayavani, Apr 17, 2019, 3:36 PM IST

Poll

ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿಯಿಂದ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ. ಇಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರಮುಖ ಎದುರಾಳಿ ಪಕ್ಷಗಳು. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿ ರಾಜ ಕಾರಣ ಪ್ರಮುಖವಾಗಿದೆ. ರಾಜಕೀಯೇತರ ಕಾರಣಗಳಿಂದಲೂ ಖ್ಯಾತಿ ಕುಖ್ಯಾತಿಯನ್ನು ಕ್ಷೇತ್ರ ಪಡೆದುಕೊಂಡಿದೆ.

ಲೋಕಸಮರದ ಹೊಸ್ತಿಲಲ್ಲಿದ್ದರೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವು ನಿದ್ರಿಸುತ್ತಿರುವಂತೆ ಕಂಡು ಬರು ತ್ತಿದೆ. ಬಿಜೆಪಿಯವರು ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿಂದೆ ಸ್ಥಳೀಯ ಚುನಾವಣೆಗಳಿಂದಿಡಿದು ವಿಧಾನಸಭೆ – ಲೋಕಸಭೆಯಲ್ಲಿ ರಾಜಕಾರಣಿಗಳಿಗಿಂತ ಕಾರ್ಯಕರ್ತರು ಹೆಚ್ಚಾಗಿ ತಮ್ಮ ನಾಯಕನ ಗೆಲುವಿಗಾಗಿ
ಅವಿಶ್ರಾಂತ ವಾಗಿ ಅಹೋರಾತ್ರಿ ಕೆಲಸ ಮಾಡುತ್ತಿದ್ದರು. ಆಗಾಗ ಮುಖಂಡರು ಬಂದು ಕಾರ್ಯಕರ್ತರ ಪರಾಮರ್ಶಿಸುತ್ತಿ ದ್ದರು. ಆದರೆ, ಇಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ನಿರಾಸಕ್ತಿ ತೋರಿದರೆ, ಮತ್ತೂಂದು ಕಡೆಯ ಮುಖಂಡರ ಸ್ವ-ಹಿತಾಸಕ್ತಿಯಿಂದ ಹಾಗೂ ಮುಂದಿನ ಚುನಾವಣೆಯ ಗುರಿಯಿಂದ ಓಡಾಡುತ್ತಿದ್ದಾರೆ.

ಸ್ಥಳೀಯ ವಿಧಾನಸಭಾ ಕ್ಷೇತ್ರವೊಂದೇ ಅಲ್ಲದೆ, ಜಿಲ್ಲಾದ್ಯಂತ ಕೆ.ಎಚ್‌.ಮುನಿಯಪ್ಪ ವಿರುದ್ಧ ಸ್ಥಳೀಯ ಮತ್ತು ರಾಜ್ಯಮಟ್ಟದ ನಾಯಕರನ್ನು ತುಳಿಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂಬ ಕೂಗು ಹಿಂದೆಂದಿಗಿಂತಲೂ ಹೆಚ್ಚಾಗಿ ಸಾರ್ವಜನಿಕ ವಲಯ
ದಲ್ಲಿ ಕೇಳಿ ಬರುತ್ತಿದೆ. ಆದರೂ ಯಾರು ಏನೇ ಮಾಡಿದರೂ ತಾನು ಗೆಲ್ಲುತ್ತೇನೆಂಬ ಭಾವನೆ ವ್ಯಕ್ತಪಡಿಸುತ್ತಿರುವುದು ಸಭೆಗಳಲ್ಲಿ ಕಂಡು ಬರುತ್ತಿದೆ.

ಲೆಕ್ಕಾಚಾರ ಕಾದು ನೋಡಿ: ಪ್ರತಿ ಚುನಾವಣೆಯಲ್ಲೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಹೆಚ್ಚಾಗಿ ಕೆಎಚ್‌ಎಂ ಪರ ಮತಯಾಚನೆ ಮಾಡುತ್ತಿದ್ದು, ಈ ಬಾರಿ ಇನ್ನಷ್ಟು ಮತ ಹೆಚ್ಚಿಸಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಾ ನನ್ನ ಲೆಕ್ಕಾ ಚಾರಗಳು ನನಗಿವೆ ಎಂದು ಸಭೆಗಳಲ್ಲಿ ಹೇಳಿಕೊಳ್ಳು ತ್ತಿದ್ದಾರೆ. ಇತ್ತ ರಾಜನಾಗಿಸುವ ಮತದಾರನ ಇಂಗಿತ ಎಲ್ಲಿಯವರೆಗೆ ಅವರ ಲೆಕ್ಕಾಚಾರಗಳನ್ನು
ಸರಿದೂಗಿ ಸುತ್ತವೆ ಎಂಬುದು ಕಾದು ನೋಡಬೇಕಿದೆ.

ಇಂತಹವರಿಗೆ ಮತ ನೀಡಿ ಎಂದು ಹೇಳಲ್ಲ:
ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರು ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪಕ್ಕೆ ಕಂಡು ಬರುತ್ತಿದೆ. ಇನ್ನು ವಿಧಾನಸಭಾಧ್ಯಕ್ಷರು ಮೈತ್ರಿ ಪಕ್ಷದ ಯಾವ ಕಡೆಯೂ ವಾಲದೆ ತನ್ನ ಹುದ್ದೆಗೆ ಅಂಟಿಕೊಂಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಮತ್ತು ಕಾರ್ಯಕರ್ತರ ಪ್ರಶ್ನೆಗಳಿಗೆ ನಾನು ನಿಮ್ಮನ್ನು ಈ ಚುನಾವಣೆಯಲ್ಲಿ ನಿರ್ದೇಶಿಸುವುದಿಲ್ಲ ಮತ್ತು ನನ್ನ ಕಾಂಗ್ರೆಸ್‌ ನಿಷ್ಠೆಯನ್ನು ಬಿಡುವುದಿಲ್ಲ.

ಖಂಡಿತವಾಗಿ ನಾನು ಕೆ. ಎಚ್‌.ಮುನಿಯಪ್ಪಗೆ ಮತ ನೀಡಿ ಎಂದು ಹೇಳುವುದಿಲ್ಲ ಹಾಗೂ ಅವರಿಗೆ ನನ್ನ ಬೆಂಬಲವಿಲ್ಲ. ಹಾಗೆಂದು ಬಿಜೆಪಿ ಮತ ನೀಡಿ ಎಂದು ಹೇಳುವುದಕ್ಕಾಗುವುದಿಲ್ಲ, ಮತದಾರರಾದ ನೀವು ಪ್ರಬು ದ್ಧರು ಅರಿತು ಮತದಾನ ಮಾಡಿ ಎಂದು ಹೇಳಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಇಂದಿನ ಸ್ಥಿತಿ ಹಿಂಬಾಗಿಲಿನಿಂದ ನುಣುಚಿಕೊಳ್ಳುವಂತೆ ಹೊಸ ಭಾಷ್ಯವನ್ನು ಬರೆಯುವುದಕ್ಕೆ ಮೈತ್ರಿ ಧರ್ಮ ಮುಂದಿಟ್ಟುಕೊಂಡು ಕೆಲ ಪಕ್ಷಾಂತರರ ಮತ
ಯಾಚನೆ ಮಾಡುತ್ತಿದ್ದಾರೆ. ಇಲ್ಲಿನ ಮತದಾರ ಪ್ರಭುಗಳು ಎತ್ತ ವಾಲುವರೋ ಫಲಿತಾಂಶ ಬಂದ
ಮೇಲೆಯೇ ತಿಳಿಯುವುದು.

ಮನದಾಳದಲ್ಲಿ ಕಿಚ್ಚು: ಮತ್ತೂಂದಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿ ರಾಜಕಾರಣಕ್ಕೇ ಒತ್ತು ಕೊಟ್ಟಿದ್ದ ಶ್ರೀನಿವಾಸಪುರ ಕ್ಷೇತ್ರದ ಜನತೆ ಸ್ವಾಮಿ-ರೆಡ್ಡಿ ಎನ್ನುತ್ತಾ ವ್ಯಕ್ತಿ ರಾಜಕಾರಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಲವು ನಿದರ್ಶನಗಳಿವೆ. ಕೆ. ಆರ್‌.ರಮೇಶ್‌ಕುಮಾರ್‌ ಹೇಳಿಕೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಮೇಲ್ಮಟ್ಟದಲ್ಲಿ ಮೈತ್ರಿಯೆಂದು ತಬ್ಟಾಡಿಕೊಳ್ಳುತ್ತಿರುವ ನಾಯಕರ ಕಂಡು ಸ್ಥಳೀಯವಾಗಿ ಮನದಾಳದಲ್ಲಿ ಕಿಚ್ಚು ಇಟ್ಟುಕೊಂಡು ಹೊರಗೆ ನಗುವನ್ನು ನಟಿಸಲಾಗದೆ ಎರಡೂ ಪಕ್ಷಗಳ ಮುಖಂಡರು ಎದುರುಬದರು ಆಗಲಾರದೆ
ಓಡಾಡುತ್ತಿದ್ದಾರೆ.

ವೈ.ಎ.ನಾರಾಯಸ್ವಾಮಿ ಎಲ್ಲಿದ್ದೀಯಪ್ಪಾ?
ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ದೇಶವೆಲ್ಲಾ ಮೋದಿಯ ಅಲೆಯಲ್ಲಿ ತೇಲಾಡುತ್ತಿದೆ. ಮೊದಲ ಬಾರಿಗೆ ರಾಜಕೀಯ ಕ್ಷೇತ್ರದಲ್ಲಿನ ವ್ಯಕ್ತಿಯೊಬ್ಬರ ಹೆಸರನ್ನು ಚಿಕ್ಕವರಿಂದಿಡಿದು ಇಳಿ ವಯಸ್ಸಿನವರೆಲ್ಲಾ ಹೇಳುತ್ತಿದ್ದಾರೆ. ಆದರೆ, ಅದೇ ಪಕ್ಷದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಹಲವು ಬಾರಿ ಆಯ್ಕೆಯಾಗಿರುವ ವೈ.ಎ.ನಾರಾಯಣಸ್ವಾಮಿ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸದಿ ರುವುದು ಅಚ್ಚರಿಗೆ ಕಾರಣವಾಗಿದೆ.

ಒಂದು ಬಾರಿ ಜಿಜೆಪಿಯಿಂದ ಹೆಬ್ಟಾಳ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದಾಗಲೂ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಮನಸ್ಸು ಮಾಡದಿರುವುದರಿಂದ ಬಿಜೆಪಿಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಆದರೂ ಸ್ಥಳೀಯ ಮುಖಂಡರು ಮಾತ್ರ ವೈ.ಎ.ಎನ್‌ ಅವರನ್ನು ಬಿಟ್ಟುಕೊಡುತ್ತಿಲ್ಲ, ನಮಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಎಲ್ಲಾ ಪಕ್ಷಗಳ ಮುಖಂಡರು ಬಂದು ಮೋದಿಗಾಗಿ ಮತಯಾಚನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ, ನಾರಾಯಣಸ್ವಾಮಿ ಮಾತ್ರ ಚುನಾವಣೆ ಅಖಾಡದಲ್ಲಿ ಕಂಡು ಬರದಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.