ಕಳಪೆ ತ್ರಿಚಕ್ರ ವಾಹನ ವಿತರಣೆ
Team Udayavani, May 14, 2019, 12:42 PM IST
ಕೋಲಾರ ತಾಲೂಕಿನ ಅರಿನಾಗನಹಳ್ಳಿ ವಿಕಲ ಚೇತನರಾದ ಸರಿತಾ ರಂಗಪ್ಪ
ಕೋಲಾರ: ಜಿಪಂ ಸದಸ್ಯರ 2017-18ನೇ ಸಾಲಿನ ಶೇ.3ರ ಅನುದಾನದಲ್ಲಿ ಅಂಗವಿಕಲರಿಗೆ ನೀಡಿರುವ ತ್ರಿಚಕ್ರ ವಾಹನಗಳು ಕಳಪೆಯಾಗಿದ್ದು, ಸೈಡ್ ಚಕ್ರಗಳೇ ಸರಿಯಿಲ್ಲ ಎಂದು ರಾಜ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹೊನ್ನೇನಹಳ್ಳಿ ಪ್ರಕಾಶ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ 30 ತ್ರಿಚಕ್ರ ವಾಹನ ನೀಡಲು ಲಿಂಬೋ ಮೋಟಾರ್ ಏಜೆನ್ಸಿ ಹಾವೇರಿಗೆ ಆದೇಶಿಸಲಾಗಿತ್ತು. ಇಲಾಖೆಯು ಸಾಯಿ ಮೋಟಾರ್ ಕಡೆಯಿಂದ 240 ವಾಹನ ವಿತರಣೆ ಮಾಡಿದೆ. ಈ ತ್ರಿಚಕ್ರ ವಾಹನಗಳಿಗೆ ಸೈಡ್ ಚಕ್ರಗಳು ಸರಿಯಾಗಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿ ಅದನ್ನು ಸರಿಪಡಿಸಿ ವಿತರಿಸುವಂತೆ ಮನವಿ ಮಾಡಿದ್ದರೂ ಅದೇ ವಾಹನಗಳನ್ನು ನೀಡಿದ್ದಾರೆ ಎಂದು ದೂರಿದ್ದಾರೆ.
ಅಂಗವಿಕಲರಾದ ಅರಿನಾಗನಹಳ್ಳಿ ಸರಿತಾ ರಂಗಪ್ಪಗೆ ನೀಡಿರುವ ತ್ರಿಚಕ್ರ ವಾಹನ ಆಕೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಟಮಕ ಇಂಡಸ್ಟ್ರೀಸ್ ಶನಿಮಹಾತ್ಮನ ದೇವಸ್ಥಾನದ ಹತ್ತಿರ ಸೈಡ್‌ವ್ಹೀಲ್ ಶೇಕ್ ಆಗಿ ಗೇರ್ ಕಟ್ ಆಗಿ ಕೆಳಗೆ ಬಿದ್ದು, ಎಡಗೈ ಮೂಳೆ ಮುರಿದಿದೆ. ಕೈಕಾಲುಗಳಿಗೂ ಗಾಯಗಳಾಗಿದೆ. ಸ್ಥಳೀಯರು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಅಂಗವಿಕಲರ ಜೀವನದಲ್ಲಿ ಆಟ ಆಡುವುದು ಬೇಡ. ತ್ರಿಚಕ್ರ ವಾಹನ, ಇತರೆ ಯೋಜನೆ ಸರಿಯಾದ ರೀತಿಯಲ್ಲಿ ವಿತರಣೆ ಮಾಡಿ, ಮೊದಲೇ ಅಂಗವಿಕಲರಾಗಿರು ತ್ತಾರೆ. ಅವರನ್ನು ಮತ್ತಷ್ಟು ಅಂಗವಿಕಲರಾಗಿ ಮಾಡ ಬೇಡಿ, ಹಾವೇರಿ ಲಿಂಬೋ ಮೋಟಾರ್ ಏಜೆನ್ಸಿ ಹಾಗೂ ಸಾಯಿ ಮೋಟಾರ್ ಬೆಂಗಳೂರು ಇವ ರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟಿಸು ವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.