ಕೋಳಿ ಫಾರಂನಲ್ಲಿ ಸ್ವಚ್ಛತೆ ಮರೀಚಿಕೆ; ದುರ್ನಾತ
Team Udayavani, Aug 11, 2021, 5:09 PM IST
ಬಂಗಾರಪೇಟೆ: ಕೆರೆ ಜಾಗ ಒತ್ತುವರಿ ಮಾಡಿಕೊಂಡು ಕೋಳಿ ಫಾರಂ ನಿರ್ಮಿಸಿ ಸ್ವಚ್ಛತೆ ಕಾಪಾಡದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿ
ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಐತಾಂಡಹಳ್ಳಿ ಗ್ರಾಮಸ್ಥರು ಹಾಗೂ ರೈತರು ಆರೋಪಿಸಿದ್ದಾರೆ.
ತಾಲೂಕಿನ ಮಾವಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐತಾಂಡಹಳ್ಳಿ ಗ್ರಾಮದ ಸರ್ವೆ ನಂ.172ರಲ್ಲಿ ಅಶೋಕ್ ಎಂಬುವರು ಹವಾನಿಯಂತ್ರಿತ ಕೋಳಿ ಫಾರಂ ನಿರ್ಮಿಸಿದ್ದಾರೆ.. ಇದಕ್ಕಾಗಿ ಪಕ್ಕದಲ್ಲಿನ ಐತಾಂಡಹಳ್ಳಿ ದೊಡ್ಡಕೆರೆ ಸರ್ವೆ ನಂ.169ರಲ್ಲಿನ ಜಾಗ ಒತ್ತುವರಿ ಮಾಡಿದ್ದಾರೆ.. ಫಾರಂನಿಂದ ಹೊರಬರುವ ಮಲಿನ ನೀರು, ತ್ಯಾಜ್ಯ ಅಕ್ಕಪಕ್ಕದ ಜಮೀನಿಗೆ ಹರಿದು ಬಿಟ್ಟಿದ್ದಾರೆ.. ಇದರಿಂದಾಗಿ ನೊಣಗಳ ಉತ್ಪತ್ತಿ ಹೆಚ್ಚಾಗಿ
ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಈಗಾಗಲೇ ಕೋವಿಡ್ 3ನೇ ಅಲೆಯ ಭಯ ದಲ್ಲಿರುವ ಜನರಿಗೆ ಕೋಳಿ ಫಾರಂನಿಂದ ಹೊರಬರುವ ತ್ಯಾಜ್ಯ ನೀರಿನಿಂದ ಗ್ರಾಮಗಳಲ್ಲಿ ನೊಣಗಳ ಕಾಟ ಜಾಸ್ತಿಯಾಗಿದೆ. ಕೋಳಿ ಫಾರಂನ ಸುತ್ತಲೂ ಸ್ವಚ್ಛತೆ ಕಾಪಾಡುವಂತೆ ಮಾಲಿಕರಿಗೆ ಮನವಿ ಮಾಡಿದರೆ ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಫಾರಂನಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸದ್ಯದಲ್ಲೇ KGF ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್ ಶಿಪ್
ತಾಲೂಕಿನ ಮಾವಹಳ್ಳಿ ಗ್ರಾಪಂನ ಐತಾಂಡಹಳ್ಳಿ ಗ್ರಾಮವು ನನ್ನ ಸ್ವಂತ ಗ್ರಾಮವಾಗಿದೆ.ಕೆರೆ ಜಮೀನು ಒತ್ತುವರಿ ಮಾಡಿಕೊಂಡು ಕೋಳಿ ಫಾರಂ ನಿರ್ಮಿಸಲಾಗಿದೆ. ಸ್ವಚ್ಛತೆ ಕಾಪಾಡುತ್ತಿಲ್ಲ. ಈ ಬಗ್ಗೆ ಮಾಲಿಕರಿಗೆ ಹೇಳಿದರೆ ಇದು ನನ್ನ ಜಮೀನು ನನ್ನಕೋಳಿ ಫಾರಂ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆಕ್ರಮಕೈಗೊಳ್ಳಲು ಡೀಸಿ ಅವರು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು.
-ಐತಾಂಡಹಳ್ಳಿ ಮಂಜುನಾಥ್, ಜಿಲ್ಲಾಧ್ಯಕ್ಷ, ರೈತ ಸಂಘ
ರೈತ ಸಂಘದ ಮುಖಂಡರು ಇದೇ ಗ್ರಾಪಂ ವ್ಯಾಪ್ತಿಗೆ ಬರುವ ಐತಾಂಡಹಳ್ಳಿ ಗ್ರಾಮದ ಬಳಿ ಇರುವಕೋಳಿಫಾರಂನಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಳಿ ಫಾರಂನಲ್ಲಿ ಸ್ವಚ್ಛತೆ ಕಾಪಾಡುವಂತೆ ಮಾಲಿಕರಿಗೆ ನೋಟೀಸ್ ಜಾರಿ
ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತಕ್ರಮಕೈಗೊಳ್ಳಲಾಗುವುದು.
-ಕೆ.ಆರ್.ಸುರೇಶಬಾಬು, ಪಿಡಿಒ,
ಮಾವಹಳ್ಳಿ ಗ್ರಾಪಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.