ವಿದ್ಯುತ್‌ ಸ್ಪರ್ಶ: ಕಂಬದಿಂದ ಬಿದ್ದು ಲೈನ್‌ಮೆನ್‌ ಸಾವು


Team Udayavani, Aug 5, 2019, 11:14 AM IST

kolar-tdy-3

ಮಾಲೂರು: ವಿದ್ಯುತ್‌ ಸ್ಪರ್ಶಿಸಿ ಕಂಬಕ್ಕೆ ಹತ್ತಿದ್ದ ಲೈನ್‌ಮೆನ್‌ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿ ರುವ ಘಟನೆ ಮಿಂಡಹಳ್ಳಿ ಗ್ರಾಮದ ಬಳಿ ನಡೆದಿದೆ.

ಮಹದೇವ (28) ಮೃತ ಲೈನ್‌ಮೆನ್‌. ಭಾನು ವಾರವಾದ್ದರಿಂದ ಶಿವಾರಪಟ್ಟಣದ ಬೆಸ್ಕಾಂ ಉಪಕೇಂದ್ರದ ತ್ರೈಮಾಸಿಕ ನಿರ್ವಹಣೆಗಾಗಿ ಬೆಳಗ್ಗೆ 9ರಿಂದ ಸಂಜೆ 6ರವರೆಗೂ ವಿದ್ಯುತ್‌ ನಿಲುಗಡೆ ಮಾಡಿ ದುರಸ್ಥಿ ಪಡಿಸಲು ಯೋಜನೆ ರೂಪಿಸ ಲಾಗಿತ್ತು. ಅದರಂತೆ ಈ ಭಾಗದ ಲೈನ್‌ಮೆನ್‌ಗಳು ದುರಸ್ಥಿ ಕಾರ್ಯದಲ್ಲಿದ್ದರು.

ಈ ವೇಳೆ ವಿದ್ಯುತ್‌ ಅನ್ನು ಸಂಪೂVರ್ಣವಾಗಿ ನಿಲುಗಡೆ ಮಾಡಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಮಿಂಡಹಳ್ಳಿ ಗ್ರಾಮದ ಗೇಟ್ಬಳಿಯಲ್ಲಿನ ಸೆಕೆಂಡರಿ ಫೀಡರ್‌ನ ಬಳಿ ನಿರ್ವಹಣೆಗಾಗಿ ಕಂಬ ಹತ್ತಿದ್ದ ಮಹದೇವಗೆ ಏಕಾಎಕಿ ವಿದ್ಯುತ್‌ ಸ್ಪರ್ಶಿಸಿ ನೆಲೆಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಫೀಡರ್‌ನಲ್ಲಿ ಸಂಪೂರ್ಣವಾಗಿ ವಿದ್ಯುತ್‌ ನಿಲುಗಡೆ ಮಾಡಿದ್ದರೂ ವಿದ್ಯುತ್‌ ಸ್ಪರ್ಶದ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸ್ಥಳೀಯವಾಗಿ ರುವ ಯಾವುದೋ ಕಾರ್ಖಾನೆಯ ಜನರೇಟರ್‌ನಿಂದ ವಿದ್ಯುತ್‌ ಪ್ರಸರVಣವಾಗಿ ಲೈನ್‌ಮೆನ್‌ಗೆ ಮೃತ ಪಟ್ಟಿರುವ ಸಾಧ್ಯತೆ ವ್ಯಕ್ತಪಡಿಸಿದ್ದಾರೆ.

ಸುರಕ್ಷತಾ ಸಾಮಗ್ರಿ ಬಳಕೆ ಆಗಿಲ್ಲ: ವಿದ್ಯುತ್‌ ಕಂಬಗಳಿಗೆ ಹತ್ತಿ ದುರಸ್ಥಿಪಡಿಸುವ ವೇಳೆ ಲೈನ್‌ಮೆನ್‌ಗಳ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಸುರಕ್ಷಾ ಸಾಮಗ್ರಿಗಳನ್ನು ಇಲಾಖೆ ನೀಡಿದೆ. ಆ ಪೈಕಿ ತಲೆಗೆ ಹಾಕುವ ಹೆಲ್ಮೆಟ್‌ನಲ್ಲಿ ಬಜರ್‌ ಅಳವಡಿಸಲಾಗಿರು ತ್ತದೆ. ಒಂದು ವೇಳೆ ಆಕಸ್ಮಿಕವಾಗಿ ತಂತಿಯಲ್ಲಿ ವಿದ್ಯುತ್‌ ಪ್ರಸರVಣವಾದಲ್ಲಿ ತಲೆಯ ಮೇಲಿರುವ ಸೆನ್ಸಾರ್‌ ವಿದ್ಯುತ್‌ ಪ್ರಸರVಣದ ಸೂಚನೆ ನೀಡುವ ಸಲುವಾಗಿ ಶಬ್ಧ ಮಾಡಲಿದೆ. ಅದರೊಟ್ಟಿಗೆ ತಂತಿ ಮುಟ್ಟುವ ವೇಳೆ ಕಡ್ಡಾಯವಾಗಿ ಕೈಕವಚ ಧರಿಸ ಬೇಕು. ಆದರೆ, ದುರಸ್ಥಿ ವೇಳೆ ಇಂತಹ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಾಯದ ಕೆಲಸಗಳ ವೇಳೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಅವಘಡ ಸಂಭವಿಸಿದ ವೇಳೆಯಲ್ಲಿ ರಂಗಪ್ಪ ಎಂಬ ಹಿರಿಯ ಲೈನ್‌ಮೆನ್‌ ಹೊರತು ಪಡಿಸಿ ಯಾವುದೇ ಅಧಿ ಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಬಾಗಲಕೋಟೆ ಮೂಲದ ಮಹದೇವ ಕಳೆದ ಐದಾರು ವರ್ಷ ಗಳಿಂದ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರ ಅನ್ಸರ್‌ಪಾಷಾ, ಶಿವಾರಪಟ್ಟಣದ ಉಪವಿಭಾಗದ ಜೆಇ ನಿರ್ಮಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಅನ್ಸರ್‌ಪಾಷಾ ಮಾತನಾಡಿ, ನೌಕರನ ಸಾವಿಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿ ಜೊತೆ ಜನರೇಟರ್‌ ಚಾಲನೆ ಮಾಡಿರುವ ಕಂಪನಿ ಮೇಲೆಯೂ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸುವು ದಾಗಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.