ಕೋಲಾರ: ಭೌತಿಕ ತರಗತಿ ಆರಂಭಕ್ಕೆ ಭರದ ಸಿದ್ದತೆ
Team Udayavani, Aug 18, 2021, 2:36 PM IST
ಕೋಲಾರ: ಅಂತೂ ಇಂತೂ ಶಾಲಾ ಕಾಲೇಜುಆರಂಭಿಸಲು ಸರಕಾರ ಮಾರ್ಗಸೂಚಿ ಹೊರಡಿಸಿದ್ದು,ಕೋಲಾರ ಜಿಲ್ಲೆಯಲ್ಲಿ ಸಿದ್ಧತೆ ಆರಂಭವಾಗಿದೆ.ಶೇ.2ಕ್ಕಿಂತಲೂ ಕಡಿಮೆ ಕೊರೊನಾ ಪಾಸಿಟಿವಿಟಿ ದರಇರುವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಭೌತಿಕತರಗತಿಗಳನ್ನುಮಾರ್ಗಸೂಚಿಗೊಳಪಡಿಸಿಆರಂಭಿಸಲುಸರಕಾರ ಸೂಚನೆ ನೀಡಿದೆ.
ಇದರನ್ವಯ ಜಿಲ್ಲೆಯಲ್ಲಿಆ.15ರಂದು ಪಾಸಿಟಿವಿಟಿ ದರ ಶೇ.0.92 ರಷ್ಟಿದ್ದು,ಶಾಲಾ ಕಾಲೇಜು ಆರಂಭಿಸುವ ಅರ್ಹತೆಯನ್ನುಪಡೆದುಕೊಂಡಿದೆ.ಭೌತಿಕ ತರಗತಿ ಆರಂಭಕ್ಕೆ ಸಿದ್ಧತೆ: ಆರೇಳುತಿಂಗಳುಗಳ ನಂತರ ಶಾಲಾ ಕಾಲೇಜುಗಳಲ್ಲಿ ಭೌತಿಕತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಮತ್ತುಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಡಗರದ ಸಿದ್ಧತೆಆರಂಭವಾಗಿದೆ.
ಬಹುತೇಕ ಶಿಕ್ಷಕರು ಹಾಗೂ ಮಕ್ಕಳುಶಾಲಾರಂಭಕ್ಕೆ ಸರ್ಕಾರ ಹಸಿರು ನಿಶಾನೆನೀಡಿರುವುದನ್ನು ಸ್ವಾಗತಿಸುತ್ತಿದ್ದಾರೆ. ಸರಕಾರನೀಡಿರುವ ಮಾರ್ಗಸೂಚಿ ಹಾಗೂ ಕೋವಿಡ್‌ಮಾರ್ಗಸೂಚಿಯನ್ವಯ ಯಾವುದೇ ಲೋಪಕ್ಕೆಅವಕಾಶ ನೀಡದಂತೆ ಮುನ್ನಚ್ಚರಿಕೆ ಕ್ರಮಗಳೊಂದಿಗೆಶಾಲಾ ಕಾಲೇಜು ಆರಂಭಿಸಲಾಗುವುದು ಎಂದುಅಧಿಕಾರಿಗಳು ತಿಳಿಸುತ್ತಿದ್ದಾರೆ.
ಹೆಚ್ಚುವರಿ ಆಗಿ ಶೇ.10 ಮಕ್ಕಳು ಸೇರ್ಪಡೆ:ಕೋಲಾರ ಜಿಲ್ಲೆಯಲ್ಲಿ ಪದವಿ ಪೂರ್ವ ಹಂತದಲ್ಲಿ ಕಳೆದವರ್ಷ 15 ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳುದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು, ಈ ಬಾರಿಶೇ.99 ಫಲಿತಾಂಶ ಎಸ್‌ಎಸ್‌ಎಲ್‌ಸಿಯಲ್ಲಿಬಂದಿರುವುದರಿಂದ ಹಿಂದಿನ ಸಾಲಿಗಿಂತಲೂ ಶೇ.10ಹೆಚ್ಚಿನ ಮಕ್ಕಳು ಕಾಲೇಜುಗಳಿಗೆ ದಾಖಲಾಗುವ ನಿರೀಕ್ಷೆಹೊಂದಲಾಗಿದೆ.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಂದ ಹೊರಡುವ ಮಾರ್ಗಸೂಚಿಗಾಗಿಕಾಯುತ್ತಿದ್ದು, ಅದರಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲುಸಜ್ಜಾಗಿದ್ದಾರೆ.
ಪೂರ್ವಭಾವಿಯಾಗಿ ಈಗಾಗಲೇ ಶಾಲಾಕಾಲೇಜುಗಳ ಸ್ವತ್ಛತೆ, ಕೋವಿಡ್ ಮಾರ್ಗಸೂಚಿಗಳನ್ನುಅನುಸರಿಸಲು ಸಿದ್ಧತೆ ನಡೆಸುತ್ತಿದ್ದಾರೆ.ಆ.19ರಿಂದ ಪುನರಾವರ್ತಿತ ಅಭ್ಯರ್ಥಿಗಳಿಗೆದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುವುದರಿಂದಪರೀಕ್ಷಾ ಕೇಂದ್ರಗಳಾಗಿರುವ ತರಗತಿಗಳನ್ನುಸ್ವತ್ಛಗೊಳಿಸಿಕೊಳ್ಳಲಾಗಿದೆ.
ಪರೀಕ್ಷೆಯನ್ನು ಸುಗಮವಾಗಿನಡೆಸಲು ಡೀಸಿ, ಎಡೀಸಿ ಸಭೆ ನಡೆಸಿ ನೀಡುತ್ತಿರುವಸೂಚನೆಗಳನ್ನು ಈಗಾಗಲೇ ಪಾಲಿಸುತ್ತಿದ್ದಾರೆ.
ಮಕ್ಕಳ ಹಂತದಲ್ಲಿ: ಸುದೀರ್ಘ ರಜೆ ಅನುಭವಿಸಿ,ಆನ್‌ಲೈನ್ ತರಗತಿಗಳಲ್ಲಿ ಮುಳುಗಿರುವ ಮಕ್ಕಳುಶಾಲಾ ಕಾಲೇಜಿಗೆ ತೆರಳಲು ಉತ್ಸುಕರಾಗಿದ್ದಾರೆ. ಶಾಲಾಆರಂಭಿಸಲು ಸರಕಾರ ತೆಗೆದುಕೊಂಡಿರುವ ನಿರ್ಧಾರಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಚೈತನ್ಯ ಬರಲುಕಾರಣವಾಗಿದೆ. ಕೋವಿಡ್ ಎರಡು ಮೂರು ಅಲೆಗಳಅಬ್ಬರದಲ್ಲಿ ಶಾಲಾ ಕಾಲೇಜುಗಳು ಆರಂಭವಾಗದೆಯೇಪರೀಕ್ಷೆ ನಡೆಸುತ್ತಾರೆಯೇ ಎಂಬ ಆತಂಕದಲ್ಲಿದ್ದಮಕ್ಕಳಿಗೆ ಕಾಲೇಜಿಗೆ ಹೋಗುವ ಅವಕಾಶ ಸಿಗುತ್ತಿರುವುದು ಸಂತಸಕ್ಕೆ ಕಾರಣವಾಗಿದೆ. ಇದರ ನಡುವೆಯೂಪೋಷಕರಲ್ಲಿ ಕೊರೊನಾ ಸೋಂಕು ಹರಡುವ ಭೀತಿಇದೆಯಾದರೂ,ಈಭಯವನ್ನು ಕೋವಿಡ್‌ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸುವಮೂಲಕ ನಿವಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಮತ್ತು ಪದವಿ ಪೂರ್ವ ಶಿಕ್ಷಣಇಲಾಖೆ ಸಜ್ಜಾಗಿದೆ.
ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.