ಕೋಲಾರ: ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Team Udayavani, Feb 10, 2021, 3:08 PM IST
ಕೋಲಾರ: ತಾಲೂಕಿನ ವಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಗೀತಮ್ಮ ಕೆಂಬೋಡಿ ಕ್ಷೇತ್ರದ ಇಬ್ಬರೂ ಆಯ್ಕೆಯಾಗಿದ್ದಾರೆ.
ತಾಲೂಕಿನ ಉರಿಗಿಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರಾಜೇಶ್ವರಿ, ಉಪಾಧ್ಯಕ್ಷರಾಗಿ ಅನು ಆಯ್ಕೆಯಾಗಿದ್ದಾರೆ. ಒಟ್ಟು 15 ಮಂದಿ ಮತಚಲಾಯಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಾಜೇಶ್ವರಿ 8 ಮತ ಮತ್ತು ಅನು 8 ಮತ ಪಡೆದು ಜಯಗಳಿಸಿದ್ದಾರೆ. ತಾಲೂಕಿನ ಹೋಳೂರು ಗ್ರಾಪಂಅಧ್ಯಕ್ಷೆಯಾಗಿ ಪ್ರಿಯಾಂಕ ಬಿ.ಗೋವರ್ಧನ್ ಚುನಾಯಿತರಾದರೆ ಉಪಾಧ್ಯಕ್ಷರಾಗಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪ್ರಿಯಾಂಕ ಗೋವರ್ಧನ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಾಣಿ ನಾಮಪತ್ರಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಏಕೈಕಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಒಟ್ಟು 20 ಸದಸ್ಯ ಬಲದ ಗ್ರಾಪಂನಲ್ಲಿ ಪ್ರಿಯಾಂಕ 13 ಮತ ಪಡೆದು ಎದುರಾಳಿ ವಾಣಿ (7) ಅವರನ್ನು 5 ಮತಗಳ ಅಂತರದಿಂದ ಪರಾಭವಗೊಳಿಸಿದರು. ಅಧ್ಯಕ್ಷರಾಗಿ ಬಾಬುಮೌನಿ ಮತ್ತು ಉಪಾಧ್ಯಕ್ಷರಾಗಿಗಾಯತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪೂರ್ಣಿಮ, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಚಲಪತಿ ನಾಮಪತ್ರ ಸಲ್ಲಿಸಿದ್ದರು. ಎದುರಾಳಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಧಿಕಾರಿ ಘೋಷಿಸಿದರು. ಬೆಳಮಾರನಹಳ್ಳಿ ಪಂಚಾಯ್ತಿಯಲ್ಲಿಅಧ್ಯಕ್ಷರಾಗಿ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಶೋಭಾ ಆಯ್ಕೆಯಾಗಿದ್ದಾರೆ.
ಬಂಗಾರಪೇಟೆ: 6 ಗ್ರಾಪಂ ಕಾಂಗ್ರೆಸ್ ಬೆಂಬಲಿತರ ವಶಕ್ಕೆ :
ಬಂಗಾರಪೇಟೆ: ತಾಲೂಕಿನ ಆರು ಗ್ರಾಪಂಗಳಿಗೆ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷೆಯಂತೆ ಆರೂಪಂಚಾಯತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರೇಆಯ್ಕೆಯಾಗುವ ಮೂಲಕ ಆಡಳಿತರೂಢ ಬಿಜೆಪಿಗೆ ಹಿನ್ನಡೆ ಉಂಟಾಗುವಂತೆ ಮಾಡಿದ್ದಾರೆ.
ಹುಲಿಬೆಲೆ, ಬಲಮಂದೆ, ಗುಲ್ಲಹಳ್ಳಿ, ಆಲಂಬಾಡಿ ಜೋತೇನಹಳ್ಳಿ, ಚಿನ್ನಕೋಟೆ ಮತ್ತುಚಿಕ್ಕಅಂಕಂಡಹಳ್ಳಿ ಗ್ರಾಪಂಗೆ ಚುನಾವಣೆ ನಡೆದಿದ್ದು, 6ರಲ್ಲಿ 5 ಕಡೆ ಅವಿರೋಧ ಆಯ್ಕೆಯಾದರೆಹುಲಿಬೆಲೆ ಪಂಚಾಯತಿಯಲ್ಲಿ ಮಾತ್ರ ಚುನಾವಣೆ ನಡೆದಿದ್ದು, ಅಲ್ಲಿಯೂ ಕಾಂಗ್ರೆಸ್ ಬೆಂಬಲಿತ
ಅಭ್ಯರ್ಥಿ ಆರ್.ವಿ.ಸುರೇಶ್ ಮತ್ತು ಶೋಭಾರಾಣಿ ತಲಾ 7 ಮತಗಳ ಅಂತರದಿಂದ ಚುನಾಯಿತರಾಗಿ ಮಾಜಿ ಬೂದಿಕೋಟೆ ಬ್ಲಾಕ್ ಅಧ್ಯಕ್ಷ ಮಂಜುನಾಥಗೌಡರನ್ನು ಮಣಿಸಿದ್ದಾರೆ. ಬಲಮಂದೆ ಗ್ರಾಪಂ ಅಧ್ಯಕ್ಷ ರಾಮಪ್ಪ ಮತ್ತುಉಪಾಧ್ಯಕ್ಷೆ ಗೀತಾ, ಆಲಂಬಾರಿ ಜೋತೇನಹಳ್ಳಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಚೌಡಮ್ಮ, ಚಿಕ್ಕಅಂಕಂಡಹಳ್ಳಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ನಗೀನಾತಾಜ್, ಗುಲ್ಲಹಳ್ಳಿ ಅಧ್ಯಕ್ಷೆ ನೀಲಾಬಾಯಿ ಗೋವಿಂದರಾವ್, ಉಪಾಧ್ಯಕ್ಷೆ ಸುಷ್ಮಾ ಮತ್ತು ಚಿನ್ನಕೋಟೆ ಅಧ್ಯಕ್ಷ ಸುಬ್ರಹ್ಮಣಿ ಮತ್ತು ಉಪಾಧ್ಯಕ್ಷೆ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಆರೂ ಗ್ರಾಪಂ ಕಳೆದ ಅವಧಿಯಲ್ಲಿಯೂ ಸಹ ಕಾಂಗ್ರೆಸ್ ವಶದಲ್ಲಿತ್ತು ಎಂಬುದು ಇಲ್ಲಿನ ಗಮನಾರ್ಹ. ಸೋಮವಾರ ನಡೆದ 6 ಗ್ರಾಪಂಗಳಲ್ಲಿ 4ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, 2ರಲ್ಲಿ ಮಾತ್ರ ಬಿಜೆಪಿ ಖಾತೆ ತೆರೆದಿದೆ. ಈ ವರೆಗೂ ನಡೆದಿರುವ 12 ಪಂಚಾಯತಿ ಪೈಕಿ 10ರಲ್ಲಿ ಕಾಂಗ್ರೆಸ್ ಬೆಂಬಲಿಗರೇ ಅಧಿಕಾರ ಚುಕ್ಕಾಣಿ ಹಿಡಿದಿರುವುದಕ್ಕೆ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಉಳಿದಿರುವ 9ರಲ್ಲಿ 8 ಕಡೆ ಕಾಂಗ್ರೆಸ್ ಬೆಂಬಲಿಗರುಅಧಿಕಾರ ಹಿಡಿಯಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದರು.
ಈ ವೇಳೆ ತಾಪಂ ಅಧ್ಯಕ್ಷ ಮಹಾದೇವ್, ಸದಸ್ಯಅಮರೇಶ್, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಮುಖಂಡರಾದಮುನಿಕೃಷ್ಣಪ್ಪ, ಆಲಂಬಾಡಿ ಸುರೇಶ್, ಮುನಿಯಪ್ಪ,ಎಂ.ಜಿ.ಪ್ರಕಾಶ್, ವೀಣಾ ವೆಂಕಟೇಶ್, ವಿಜಯಕೃಷ್ಣಪಿಡಿಒಗಳಾದ ಮಧು, ಗಂಗೋಜಿರಾವ್, ನಾರಾಯಣಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.