ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಜನಾಂಗದ ನಾಯಕಿ ಆಯ್ಕೆ
ಇದೇ ರೀತಿ ನೂತನ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು
Team Udayavani, Jun 24, 2022, 5:51 PM IST
ಬಂಗಾರಪೇಟೆ: ರಾಷ್ಟ್ರಪತಿ ಚುನಾವಣೆಗೆ ಊಹೆ ಮಾಡದಂತಹ, ಬುಡಕಟ್ಟು ಜನಾಂಗದ ಎಸ್‌ಟಿ ಮಹಿಳೆಯನ್ನು ಬಿಜೆಪಿ ಘೋಷಣೆ ಮಾಡಿರು ವುದು ಸಂತಸ ತಂದಿದೆ. ಅವರು ಹೆಚ್ಚಿನ ಮತಗಳಿಂದ ಆಯ್ಕೆ ಆಗುವುದು ಖಚಿತ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮಾವಹಳ್ಳಿ ಗ್ರಾಪಂನ ನೂತನ ಅಧ್ಯಕ್ಷೆ ಆಗಿ ಆಯ್ಕೆ ಆದ ಐತಾಂಡಹಳ್ಳಿ ಗ್ರಾಮದ ಸೀಮಾ ಸುಲ್ತಾನಾ ಅಮಜದ್‌ಖಾನ್‌ಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಬಿಜೆಪಿ ಜಾತ್ಯತೀತ, ವರ್ಗಾತೀತ, ಧರ್ಮಾತೀತವಾಗಿ ಪಕ್ಷವಾಗಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಅವಕಾಶಗಳು ಬಂದಾಗ ಎಲ್ಲರಿಗೂ ಸಮಾನವಾಗಿ ನೀಡುವ ಉದ್ದೇಶದಿಂದ ಅಧಿಕಾರ ವಿಕೇಂದ್ರಿಕರಣ ಮಾಡುತ್ತಿದೆ ಎಂದು
ಹೇಳಿದರು.
ಬಿಜೆಪಿಯಿಂದ ಸಾಮಾಜಿಕ ನ್ಯಾಯ: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಿವೆ. ದೇಶದಲ್ಲಿ ಸ್ಪಷ್ಟ ಬಹುಮತ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ವೃಂದಕ್ಕೆ ಗೆಲುವು ಶತಸಿದ್ಧವಾಗಿದೆ ಎನ್ನುವುದು ಗೊತ್ತಿದ್ದರೂ ವಿರೋಧ ಪಕ್ಷಗಳು ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುತ್ತಿರುವುದು ಬಿಜೆಪಿ ಹಾಗೂ ಇದರ ಮಿತ್ರ ಪಕ್ಷಗಳಿಗೆ ಯಾವುದೇ ತೊಂದರೆ ಇಲ್ಲ.
ಸಮಾಜದ ಕಟ್ಟಕಡೆ ವ್ಯಕ್ತಿಗೆ ದೇಶದ ಮುಂಚೂಣಿಯ ರಾಷ್ಟ್ರಪತಿ ಸ್ಥಾನ ನೀಡುವುದು ನಿಜಕ್ಕೂ ಬಿಜೆಪಿಯಿಂದ ಸಾಮಾಜಿಕ ನ್ಯಾಯ ಸಿಗುತ್ತಿದೆ ಎಂಬುದಕ್ಕೆ ಉದಾಹರಣೆ ಎಂದು ವಿವರಿಸಿದರು.
ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ: ಮಾವಹಳ್ಳಿ ಗ್ರಾಪಂನ ಬಿಜೆಪಿ ಬೆಂಬಲಿತ 12 ಸದಸ್ಯರ ಸಹಕಾರದಿಂದ ಈ ಹಿಂದೆ ನೀಡಿದ್ದ ಮಾತಿನಂತೆ ಸೀಮಾ ಸುಲ್ತಾನರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಇದ್ದಂತಹ ಅಧ್ಯಕ್ಷೆ ಶಶಿಕಲಾ ರಾಮಾಂಜಿ ಅವರ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಜೊತೆಗೆ ಸುಸಜ್ಜಿತ ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ. ಇದೇ ರೀತಿ ನೂತನ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು
ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಂ.ಪಿ.ಶ್ರೀನಿವಾಸಗೌಡ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಅಮರೇಶ್, ಉಪಾಧ್ಯಕ್ಷ ಬಿ.ಹೊಸರಾಯಪ್ಪ, ಮಾವಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಶ್ವಥನಾರಾಯಣಗೌಡ, ಉಪಾಧ್ಯಕ್ಷೆ ಎನ್. ರಾಧಾ ಮುನಿರಾಜು, ಮಾಜಿ ಅಧ್ಯಕ್ಷೆ ಶಶಿಕಲಾ ರಾಮಾಂಜಿ, ಮೆಹಬೂಬ್‌ಖಾನ್, ಸದಸ್ಯರಾದ ಜಯಮ್ಮ ಮುನಿಶಾಮಗೌಡ, ಐತಾಂಡಹಳ್ಳಿ ಸುರೇಶ್, ಗೀತಾ ವೆಂಕಟೇಶ್, ವಾದಾಂಡ ಹಳ್ಳಿ ಮಂಜುನಾಥ್, ವೇಣುಗೋಪಾಲಪುರ ನಾಗವೇಣಿ ಚಂದ್ರಪ್ಪ, ನಾಯಕರಹಳ್ಳಿ ಮುನಿರತ್ನಮ್ಮ, ಶಿವಾನಂದ್, ಚಳಗಾನಹಳ್ಳಿ ಮುನಿವೆಂಕಟಮ್ಮ ಗೋಪಾಲಗೌಡ, ಮುಖಂಡರಾದ ಐತಾಂಡಹಳ್ಳಿ ನಾರಾಯಣಪ್ಪ,
ಬಸವರಾಜು, ಅಂಗಡಿ ನಾರಾಯಣಪ್ಪ, ಚಲಗಾನ ಹಳ್ಳಿ ಬಾಲಕೃಷ್ಣ ಮುಂತಾದವರಿದ್ದರು. ಚುನಾವಣಾಧಿಕಾರಿ ಆಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಸೀಪುಲ್ಲಾ ಕಾರ್ಯ ನಿರ್ವಹಿಸಿದರು. ಪಿಡಿಒ ಕೆ.ಎಸ್. ದಿವ್ಯಾ, ಕಾರ್ಯದರ್ಶಿ ಶ್ರೀನಿವಾಸ್, ಸಿಬ್ಬಂದಿ ಪುನೀತ್‌ಕುಮಾರ್, ಶ್ರೀನಿವಾಸ್, ಸ್ವಾತಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.